ದಾವೂದ್ ಇಬ್ರಾಹಿಂ ಸಹಚರನಿಂದ ಉತ್ತರ ಪ್ರದೇಶ ಬಿಜೆಪಿ ಶಾಸಕರಿಗೆ ಬೆದರಿಕೆ ಕರೆ
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ನಂತರ ಯುಪಿಯಲ್ಲಿ ನಾಯಿಕೊಡೆಗಳಂತೆ ತಲೆಎತ್ತಿದ್ದ ರೌಡಿಗಳನ್ನು ಮಟ್ಟಹಾಕಲು ಕೈಗೊಂಡ ನಿಯಮಗಳಿಂದ ಇದೀಗ ಜನ ನೆಮ್ಮದಿಯಿಂದ ಇದ್ದಾರೆ. ಆದರೆ ಯೋಗಿ ಸರ್ಕಾರದ ಏಟಿನಿಂದ ಕಂಗಾಲಾಗಿರುವ ರೌಡಿಗಳು, , ಅಂಡರ್ ವಲ್ಡ್ ಸಂಪರ್ಕ ಹೊಂದಿರುವ ರೌಡಿಗಳು ಬಿಜೆಪಿ ಶಾಸಕರನ್ನು, ಮುಖಂಡರನ್ನು ಬೆದರಿಸುವ ಕಾರ್ಯಕ್ಕೆ ಇಳಿದಿದ್ದಾರೆ. ಆದರೆ ಬೆದರಿಕೆ ಬಗ್ಗದೇ ಮುನ್ನುಗುತ್ತಿರುವ ಯೋಗಿ ಆದಿನ್ಯಾಥ ಶಾಸಕರಿಗೆ ಬೆದರಿಕೆ ಒಡಿದವರನ್ನು ಹೆಡೆಮುರಿಕಟ್ಟುವಂತೆ ಆದೇಶ ನೀಡಿದ್ದಾರೆ. ತನಿಖೆಗೆಗಾಗಿ ಎಸ್ ಐಟಿ ನೇಮಕ ಮಾಡಿದ್ದಾರೆ.
ಉತ್ತರ ಪ್ರದೇಶದ 12 ಬಿಜೆಪಿ ಶಾಸಕರಿಗೆ ಅಂಡರ್ ವಲ್ಡ್ ಡಾನ್ ದಾವೂದ್ ಇಬ್ರಾಹಿಂ ಸಹಚರರು ಎನ್ನಲಾದ ಕೆಲವರು ವಾಟ್ಸ್ ಆ್ಯಪ್, ಮೆಸೆಂಜರ್ ಮತ್ತು ಕರೆ ಮಾಡುವ ಮೂಲಕ ಬೆದರಿಕೆಯ ಸಂದೇಶ ಕಳುಹಿಸಿದ್ದಾರೆ. ಅಲ್ಲದೇ 10ಲಕ್ಷ ಹಣ ನೀಡಲು ಬೇಡಿಕೆ ಇಟ್ಟಿದ್ದಾರೆ. ಮೂರು ದಿನದಲ್ಲಿ 10 ಲಕ್ಷ ರೂಪಾಯಿ ನೀಡದಿದ್ದಲ್ಲಿ ನಿಮ್ಮ ಕುಟುಂಬದವರನ್ನು ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ವೀರ ವಿಕ್ರಮ ಸಿಂಗ್, ಮನ್ವೇಂದ್ರ ಸಿಂಗ್, ಪ್ರೇಮ ಪ್ರಕಾಶ ಪಾಂಡೆ, ವಿಜಯಕುಮಾರ ದ್ವಿವೇದಿ, ವಿನೋದ ಕಟಿಯಾರ್, ಶಶಾಂಕ್ ತ್ರಿವೇದಿ, ಅನಿತಾ ರಜಪೂತ ಸೇರಿ ಹಲವು ಶಾಸಕರಿಗೆ ಬೆದರಿಕೆ ಸಂದೇಶಗಳು, ಕರೆಗಳು ಬಂದಿವೆ. ಕರೆಗಳು ಅಂಡರ್ ವಲ್ಡ್ ಡಾನ್ ದಾವೂದ್ ಇಬ್ರಾಹಿಂ ಸಹಚರನಾಗಿದ್ದವನಿಂದ ಪಾಕ್ ಮೂಲದ ವ್ಯಕ್ತಿಯಿಂದ ಬಂದಿವೆ ಎಂದು ವರದಿಗಳಾಗಿವೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ‘ಶಾಸಕರಿಗೆ ಬೆದರಿಕೆ ಕರೆ ಮಾಡಿರುವ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ. ತನಿಖೆ ನೇತೃತ್ವವನ್ನು ವಿಶೇಷ ತನಿಖಾ ತಂಡಕ್ಕೆ(ಎಸ್ ಐಟಿ) ವಹಿಸಿದ್ದಾರೆ. ಅಲ್ಲದೇ ಭಯೋತ್ಪಾದನಾ ನಿಯಂತ್ರಣಾ ದಳಕ್ಕೂ ಈ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
ಪ್ರಸ್ತುತ ಕರೆ ಮಾಡಿರುವ ವ್ಯಕ್ತಿ ತಾನೇ ದುಬೈನ ಅಲಿ ಬುದೇಶ್ ಬಾಯ್ ಎಂದು ಹೇಳಿಕೊಂಡಿದ್ದಾನೆ. ಆದರೆ ಕರೆಗಳ ಬೆನ್ನುತ್ತಿರುವ ಪೊಲೀಸರಿಗೆ ಕರೆ ಮಾಡಿರುವ ವ್ಯಕ್ತಿ ದಾವೂದ್ ಇಬ್ರಾಹಿಂ ಬಂಟನ್ನೆಂದು ತಿಳಿದು ಬಂದಿದೆ. ಈ ವ್ಯಕ್ತಿ 1990ದಶಕದಲ್ಲಿ ದೇಶದಲ್ಲಿ ಸಿನಿಮಾ ನಟರಿಗೆ ಈ ರೀತಿಯ ಬೆದರಿಕೆ ಒಡ್ಡಲಾಗುತ್ತಿತ್ತು. ದಾವೂದ್ ಬಂಟ 1998ಲ್ಲಿ ಬಹ್ರೇನ್ ಗೆ ಹೋಗಿದ್ದು, ಅಲ್ಲಿಯೇ ವಾಸವಾಗಿದ್ದಾನೆ. ಆತನಿಂದ ಹಲವು ದಿನಗಳಿಂದ ಇಂತಹ ಕೃತ್ಯಗಳು ಕಂಡು ಬಂದಿಲ್ಲ. ಆದರೆ ಪ್ರಸ್ತುತ ಮತ್ತೆ ದುಷ್ಕೃತ್ಯ ನಡೆಸಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Leave A Reply