2014ರಲ್ಲಿ ಅಬ್ ಕೀ ಬಾರ್ ಸರ್ಕಾರ್, 2019ರ ಲೋಕಸಭೆ ಚುನಾವಣೆಯಲ್ಲಿ ಯಾವ ಸ್ಲೋಗನ್ ಗೊತ್ತಾ?
ಅದು 2014. ಇಡೀ ದೇಶ ಒಬ್ಬ ದಕ್ಷ, ಜನಪರ, ಭಾರತದ ಘನತೆಯನ್ನು ಎತ್ತಿ ಹಿಡಿಯುವ, ಭ್ರಷ್ಟಾಚಾರದಿಂದ ಮುಕ್ತವಾಗಿರುವ ನಾಯಕರೊಬ್ಬರನ್ನು ಬಯಸಿದ ವರ್ಷ. ಜನ ಚಳವಳಿ ರೂಪದಲ್ಲಿ ಬಂದು ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ ಕಾರಣ ಒಬ್ಬ ಚಹ ಮಾರುವವರೂ ಪ್ರಧಾನಿಯಾದರು. ಚುನಾವಣೆಗೂ ಮೊದಲು ಬಿಜೆಪಿ ಅಬ್ ಕೀ ಬಾರ್ ಬಿಜೆಪಿ ಸರ್ಕಾರ್ ಎಂಬ ಘೋಷಣೆ ಹೊರಡಿಸಿತ್ತು. ಅದು ಸಹ ತುಂಬ ಜನಪ್ರಿಯವಾಯಿತು.
ಈಗ ಮೋದಿಯವರು ಪ್ರಧಾನಿಯಾಗಿ ನಾಲ್ಕು ವರ್ಷವಾಗಿದೆ. ದೇಶದ ಜಿಡಿಪಿ ಏರಿಕೆಯಾಗುತ್ತಿದೆ. ನೋಟು ನಿಷೇಧದ ಮೂಲಕ ಕಪ್ಪು ಹಣ ತಹಬಂದಿಗೆ ತರಲಾಗಿದೆ. ಸರಕು ಮತ್ತು ಸೇವಾ ತೆರಿಗೆ ಮೂಲಕ ದೇಶದ ತೆರಿಗೆ ವ್ಯವಸ್ಥೆ ಸುಧಾರಣೆಯಾಗಿದೆ. ಭಾರತದ ಘನತೆ ವಿಶ್ವಮಟ್ಟದಲ್ಲಿ ಬಾನೆತ್ತರಕ್ಕೆ ಹಾರಿದೆ. ಪಾಕಿಸ್ತಾನ, ಚೀನಾ ಬಾಲ ಮುದುರಿಕೊಂಡು ಕೂತಿವೆ. ಭ್ರಷ್ಟಾಚಾರ ಕಾಣೆಯಾಗಿದೆ.
ಹೀಗೆ ನರೇಂದ್ರ ಮೋದಿ ಅವರು ಕಳೆದ ನಾಲ್ಕು ವರ್ಷದಲ್ಲಿ ದೇಶದಲ್ಲಿ ಮಾಡಿದ ಹಲವು ಸುಧಾರಣೆಗಳಿಂದ 2019ರ ಚುನಾವಣೆಯಲ್ಲೂ ಮೋದಿ ಅವರನ್ನೇ ಗೆಲ್ಲಿಸಬೇಕು ಎಂಬ ಮನೋಭಾವ ದೇಶದ ಜನರಲ್ಲಿ ಮೂಡಿದೆ. ದೇಶದ 22 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ಮುಂದಿನ ಐದು ವರ್ಷಗಳ ಕಾಲ ಕೇಂದ್ರದಲ್ಲಿ ನರೇಂದ್ರ ಮೋದಿಯವರೇ ಪ್ರಧಾನಿಯಾಗಿರಲಿ ಎಂಬ ಆಶಯವಾಗುತ್ತಿದೆ. ಸಮೀಕ್ಷೆಗಳು ಸಹ ಇದನ್ನೇ ತಿಳಿಸಿವೆ.
ಈಗ ಬಿಜೆಪಿ ಸಹ 2019ರ ಲೋಕಸಭೆ ಚುನಾವಣೆಗೆ ಸಜ್ಜಾಗಿದೆ. 2014ರಲ್ಲಿ ಹೊರಡಿಸಿದ ಜನಪ್ರಿಯ ಸ್ಲೋಗನ್ ಹಾಗೆ, 2019ರ ಚುನಾವಣೆಗೂ ಒಂದು ಸ್ಲೋಗನ್ ಹೊರಡಿಸಿದೆ. ‘2019 ಮೇ ಫಿರ್ ಮೋದಿ ಸರ್ಕಾರ್’ (2019ರಲ್ಲೂ ಮತ್ತೆ ಮೋದಿ ಸರ್ಕಾರ್) ಎಂಬ ಘೋಷಣೆ ಹೊರಡಿಸಿದೆ.
ಒಟ್ಟಿನಲ್ಲಿ 2019ರ ಲೋಕಸಭೆ ಚುನಾವಣೆಗೆ ಈಗಾಗಲೇ ಎಲ್ಲ ಪಕ್ಷಗಳು ಸಜ್ಜಾಗಿವೆ. ಆದರೆ ನಾವು ಮತಗಟ್ಟೆಯ ಸಾಲಿನಲ್ಲಿ ನಿಂತಾಗ ಯಾರು ಅಭಿವೃದ್ಧಿ ಮಾಡಿದ್ದಾರೆ? ಯಾರು ದೇಶಕ್ಕಾಗಿ ದುಡಿದಿದ್ದಾರೆ? ಯಾರು ದೇಶದ ಘನತೆ ಹೆಚ್ಚಿಸಿದ್ದಾರೆ ಎಂಬುದನ್ನು ಅರಿತು ಮತ ಹಾಕೋಣ. ಅಷ್ಟಕ್ಕೂ ಪ್ರಜಾಪ್ರಭುತ್ವದ ನಿಜವಾದ ಪ್ರಭುಗಳು ನಾವೇ. ಮರೆಯದಿರಿ.
Leave A Reply