ಪಾಕಿಸ್ತಾನಕ್ಕೆ ಶಾಂತಿ ಬೇಕಿದ್ದರೇ, ಉಗ್ರ ಪೋಷಣೆ ನಿಲ್ಲಿಸಲಿ: ರಾವತ್

ಶ್ರೀನಗರ: ಉಗ್ರರನ್ನು ಪೋಷಿಸುತ್ತಲೇ, ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವ ಪಾಕಿಸ್ತಾನ ಭಯೋತ್ಪಾದಕರನ್ನು ಪೋಷಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ. ಇದರಿಂದ ಪಾಕಿಸ್ತಾನ ಸೇರಿ ಭಾರತದ ಗಡಿಯಲ್ಲಿ ತೀವ್ರ ಸಮಸ್ಯೆ ತಲೆದೋರಿದೆ. ಗಡಿಯಲ್ಲಿ ಸದಾ ಅಶಾಂತಿ ಮನೆ ಮಾಡಿರುವ ಕುರಿತು ಸೇನೆ ಮುಖ್ಯಸ್ಥ ಬಿಪಿನ್ ರಾವತ್ ಆಕ್ರೋಶ ಹೊರ ಹಾಕಿದ್ದು, ಪಾಕಿಸ್ತಾನಕ್ಕೆ ನೇರ ಎಚ್ಚರಿಕೆಯನ್ನು ನೀಡಿದ್ದಾರೆ.
ಪಾಕಿಸ್ತಾನಕ್ಕೆ ಶಾಂತಿ ನೆಲೆಸುವುದು ಬೇಕಾದರೇ, ಭಾರತದ ಗಡಿಯೊಳಗೆ ಉಗ್ರರನ್ನು ನುಸುಳಿ ಕಳುಹಿಸುವುದನ್ನು ನಿಲ್ಲಿಸಬೇಕು. ರಂಜಾನ್ ಮಾಸದ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ಭಾರತೀಯ ಪಡೆಗಳು ಸೇನಾ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಇದನ್ನು ರಂಜಾನ್ ಬಳಿಕವೂ ಮುಂದುವರಿಸುವ ಆಲೋಚನೆ ಇದೆ. ಆದರೆ ಪಾಕ್ ಉಗ್ರರು ಉಪಟಳ ಕೊಟ್ಟರೇ ನಮ್ಮ ಆಲೋಚನೆಯನ್ನು ನಾವು ಬದಲಿಸಬೇಕಾಗುತ್ತದೆ,” ಎಂದು ರಾವತ್ ಎಚ್ಚರಿಕೆ ನೀಡಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್‌ಗಾಮ್‌ಲ್ಲಿ ಸೇನಾ ಶಾಲೆಯೊಂದಕ್ಕೆ ಭೇಟಿ ನೀಡಿದ ವೇಳೆ ಮಾತನಾಡಿದ ಅವರು, ‘ಗಡಿಯಲ್ಲಿ ಶಾಂತಿ ಸ್ಥಾಪನೆಯಾಗುವುದನ್ನು ಭಾರತ ಬಯಸುತ್ತದೆ. ಆದರೆ ಪಾಕಿಸ್ತಾನ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿ, ಧರ್ಪ ಮೆರೆಯುತ್ತಿದೆ. ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಆದ್ದರಿಂದ ಪಾಕಿಸ್ತಾನದ ಈ ಕುಕೃತ್ಯಗಳು ನಿಲ್ಲದೇ ಗಡಿಯಲ್ಲಿ ಶಾಂತಿ ನೆಲೆಸುವುದು ಕಷ್ಟದ ಕೆಲಸ ಎಂದು ಹೇಳಿದ್ದಾರೆ.
Leave A Reply