ಕೇಂದ್ರ ಸರ್ಕಾರದ ಸಾಧನೆ ಮನೆ ಮನೆಗೆ ತಲುಪಿಸಲು ಬಿಜೆಪಿ ಮಾಸ್ಟರ್ ಪ್ಲಾನ್

ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ನಾಲ್ಕು ವರ್ಷ ಯಶಸ್ವಿಯಾಗಿ ಪೂರೈಸಿದ್ದು, ವಿಶ್ವದ ದೃಷ್ಟಿಯಲ್ಲಿ ಭಾರತದ ಚಿತ್ರಣವೇ ಬದಲಾಗುತ್ತಿದ್ದರೇ, ದೇಶ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಪ್ರಧಾನಿ ನೇತೃತ್ವದ ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರಗಳು ದೇಶದಲ್ಲಿ ಹೊಸ ಶಕೆ ಆರಂಭಿಸಿವೆ. ಹಲವು ಜನಪರ ಯೋಜನೆಗಳು ಜನರ ಮನಸ್ಸು ಗೆದ್ದಿವೆ. ಇನ್ನು ಹಲವು ಜನರಿಗೆ ಸರ್ಕಾರದ ಯೋಜನೆಗಳ ಮನದಟ್ಟು ಮಾಡಬೇಕು, ಬಿಜೆಪಿಯ ಕಾರ್ಯಶೈಲಿಯನ್ನು ಜನರ ಮನೆ ಮನಗಳಿಗೆ ತಲುಪಿಸಬೇಕು ಎಂಬ ದೂರದೃಷ್ಟಿಯ ಯೋಜನೆಯೊಂದನ್ನು ಬಿಜೆಪಿ ಕೈಗೊಂಡಿದೆ.
ಕೇಂದ್ರ ಸರ್ಕಾರದ ನಾಲ್ಕು ವರ್ಷದ ಯಶಸ್ವಿ ಯೋಜನೆಗಳನ್ನು ಜನರ ಮನ ಮನೆಗಳಿಗೆ ತಲುಪಲಿಸಲು ಕೇಂದ್ರ ಸಚಿವರು, ರಾಜ್ಯ ಸಚಿವರು, ಸಂಸದರು, ಶಾಸಕರು, ಬಿಜೆಪಿ ಮೇಯರ್ ಗಳು ಸೇರಿ ಎಲ್ಲ ಹಂತದ ಮುಖಂಡರು. ದೇಶಾದ್ಯಂತ ಸುಮಾರು ಒಂದು ಲಕ್ಷ ಪ್ರಮುಖ ಸಾಧಕರನ್ನು, ಗಣ್ಯರನ್ನು ಭೇಟಿ ಮಾಡಲಿದ್ದಾರೆ. ಈ ಕಾರ್ಯಕ್ರಮ ಮೇ 27ರಿಂದಲೇ ಆರಂಭವಾಗಲಿದ್ದು, ಎಲ್ಲ ಹಂತದ ಮುಖಂಡರು ಈ ಅಭಿಯಾನದಲ್ಲಿ ಭಾಗವಹಿಸಲಿದ್ದಾರೆ.
ಅಭಿಯಾನದಲ್ಲಿ ವಿಶೇಷವಾಗಿ ಎಸ್ಸಿ ಎಸ್ಟಿ ವರ್ಗದವರ ಬಗ್ಗೆ ವಿಶೇಷ ಕಾಳಜಿ ತೋರಲಿದ್ದು, ಬಿಜೆಪಿ ಮುಖಂಡರು ಬೇರೆ ಬೇರೆ ವರ್ಗದ ಸುಮಾರು 25 ಜನರನ್ನು ಭೇಟಿ ಮಾಡಿ, ಸಂವಾದ ನಡೆಸಲಿದ್ದಾರೆ. , ನಿವೃತ್ತ ನ್ಯಾಯಾಧೀಶರು, ನಿವೃತ್ತ ಸೈನ್ಯಾಧಿಕಾರಿಗಳು, ಸೈನಿಕರು, ಖ್ಯಾತ ಕ್ರೀಡಾಪಟುಗಳು, ಸಾಹಿತಿಗಳು ಸೇರಿ ಪ್ರಮುಖರನ್ನು ಭೇಟಿ ಮಾಡಿ, ಚರ್ಚೆ ಸಂವಾದ ನಡೆಸಲಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದ್ದಾರೆ.
ಅಲ್ಲದೇ ಕೇಂದ್ರ ಸರ್ಕಾರದ ಯೋಜನೆಗಳಿಂದ ಲಾಭ ಪಡೆದ ಫಲಾನುಭವಿಗಳ ಕಾರ್ಯಕ್ರಮ ಏರ್ಪಡಿಸಿ, ಸಂವಾದ ಏರ್ಪಡಿಸುವುದು, ಚರ್ಚೆ ನಡೆಸುವುದು, ಗ್ರಾಮ ಸಭೆ, ಸುದ್ದಿಗೋಷ್ಠಿಗಳನ್ನು ನಡೆಸುವುದು ಸೇರಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನಿಷ್ಠ ಒಬ್ಬ ಮುಖಂಡ 50 ಪೊಲೀಂಗ್ ಬೂತ್ ಗಳ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಸಾಧನೆಗಳ ಕುರಿತು ಮನದಟ್ಟು ಮಾಡಿಸಬೇಕು ಎಂದು ಸಲಹೆ ನೀಡಿದ್ದಾರೆ.
Leave A Reply