ಹಿಂದೂಗಳು ಅಸಹಿಷ್ಣುಗಳು ಎನ್ನುವವರೇ, ಮುಸ್ಲಿಂ ಮಹಿಳೆಗೆ ರಕ್ತ ಕೊಟ್ಟು ಪ್ರಾಣ ಉಳಿಸಿದ ಈ ಹಿಂದೂ ಬಗ್ಗೆ ಏನೆನ್ನುತ್ತೀರಿ?
ಹಿಂದೂಗಳು ಎಂದರೆ ಅನ್ಯಧರ್ಮಗಳ ವಿರೋಧಿಗಳು, ತಮ್ಮ ಧರ್ಮವನ್ನು ಹಾಗೂ ಧರ್ಮೀಯರನ್ನು ಮಾತ್ರ ಪ್ರೀತಿಸುವವರು, ಅನ್ಯಧರ್ಮದ ಬಗ್ಗೆ ಸೈರಣೆ ಹೊಂದಿದವರು, ಹಿಂದುತ್ವ ಮುನ್ನೆಲೆಗೆ ಬರುತ್ತಿದ್ದು, ಬೇರೆ ಧರ್ಮೀಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಕೆಲವು ಕೆಲಸವಿಲ್ಲದ ಬುದ್ಧಿಜೀವಿಗಳು, ಎಡಬಿಡಗಂಗಿಗಳು, ಸೋ ಕಾಲ್ಡ್ ಪ್ರಗತಿಪರರು ಆಗಾಗ ಬೊಬ್ಬೆ ಹಾಕುವ ಮೂಲಕ ಧರ್ಮ, ಧರ್ಮೀಯರ ನಡುವೆಯೇ ತಂದಿಡುವ ಕೆಲಸ ಮಾಡುತ್ತಾರೆ.
ಆದರೆ ಇದು ಸುಳ್ಳು ಎಂಬುದು ಹಿಂದಿನಿಂದಲೂ ಸಾಬೀತಾಗುತ್ತಲೇ ಬಂದಿದೆ. ಹೀಗೆ ಹಿಂದೂಗಳು ಅನ್ಯ ಧರ್ಮೀಯರನ್ನು ಪ್ರೀತಿಸುತ್ತಾರೆ ಎಂಬುದಕ್ಕೆ ಮೂಡುಬಿದರೆಯಲ್ಲಿ ನೂತನ ನಿದರ್ಶನವೊಂದು ಸಿಕ್ಕಿದೆ.
ಆ ಮುಸ್ಲಿಂ ಗರ್ಭಿಣಿಯ ಹೆಸರು ಫಾತಿಮಾ. ನಗರದ ಜಿ.ಎ.ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಕೆಗೆ ರಕ್ತದ ಅವಶ್ಯಕತೆ ಇತ್ತು. ಆಸ್ಪತ್ರೆಯ ಬ್ಲಡ್ ಬ್ಯಾಂಕಿನಲ್ಲಿ ರಕ್ತವಿರದ ಕಾರಣ, ನಿಮಗೆ ಯಾರಿಗಾದರೂ ಪರಿಚಯ ಇದ್ದರೆ ಒಂದು ಯೂನಿಟ್ ರಕ್ತದಾನ ಮಾಡುತ್ತಾರಾ ಕೇಳಿ ಎಂದು ಕುಟುಂಬಸ್ಥರಿಗೆ ಹೇಳಿದ್ದರು.
ಅದು ರಾತ್ರಿ ವೇಳೆಯಾಗಿದ್ದರಿಂದ ಮೂಡುಬಿದರೆಯ ರಕ್ತದಾನಿಗಳಿಗೆ ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ, ಒಂದಿಬ್ಬರಿಗೆ ಕೇಳಿದ್ದರೂ ರಕ್ತ ಸಿಕ್ಕಿರಲಿಲ್ಲ. ಅತ್ತ ಫಾತಿಮಾ ಸ್ಥಿತಿಯೂ ಮತ್ತಷ್ಟು ಗಂಭೀರವಾಗತೊಡಗಿತು.
ಕೊನೆಯ ಆಯ್ಕೆ ಎಂಬಂತೆ ಕನೆಕ್ಟ್ ಮೂಡುಬಿದರೆ ಅಪ್ಲಿಕೇಶನ್ ಗೆ ಮಾಹಿತಿ ನೀಡಲಾಗಿದೆ. ಆಗ ಬೆಳಗ್ಗೆ 5 ಗಂಟೆಗೆ ಯೋಗೇಶ್ ಕೊಡ್ಯಡ್ಕ ಎಂಬ ಹಿಂದೂ ಯುವಕ ಬಂದು ಮುಸ್ಲಿಂ ಮಹಿಳೆಗೆ ರಕ್ತ ನೀಡಿ ಆಕೆಯ ಜೀವ ಉಳಿಸಿದ್ದಾನೆ. ಆ ಮೂಲಕ ಧರ್ಮ ಸಹಿಷ್ಣುತೆ ಮೆರೆದಿದ್ದಾನೆ. ಇನ್ನಾದರೂ ಹಿಂದೂಗಳ ಬಗ್ಗೆ ಇರುವ ಅಪನಂಬಿಕೆ ಬಿಡಿ.
Leave A Reply