ಮ್ಯಾನ್ಮಾರ್ ಹಿಂದೂಗಳ ಪರ ನಿಂತ ಅಮೆರಿಕ, ಹಿಂದೂಗಳ ಹತ್ಯೆ ಕುರಿತು ತನಿಖೆಗೆ ಆಗ್ರಹ
ವಾಷಿಂಗ್ಟನ್: ಒಂದೆಡೆ ರೋಹಿಂಗ್ಯಾ ಮುಸ್ಲಿಮರು ಭಾರತದೊಳಕ್ಕೆ ನುಸುಳಿ ತಲೆನೋವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದ್ದಾರೆ. ಮತ್ತೊಂದೆಡೆ ಇವರು ಬಾಂಗ್ಲಾದೇಶಕ್ಕೂ ತಲೆನೋವಾಗಿದ್ದಾರೆ. ಮ್ಯಾನ್ಮಾರ್ ನಲ್ಲಂತೂ ಮೊದಲಿನಿಂದಲೂ ಇದೇ ಪರಿಸ್ಥಿತಿ ಇದೆ.
ಆದರೂ ಭಾರತದಲ್ಲಿ ಮಾತ್ರ ಮಾನವೀಯತೆ ದೃಷ್ಟಿಯಿಂದ ರೋಹಿಂಗ್ಯಾ ಮುಸ್ಲಿಮರನ್ನು ಒಡಲೊಳಗಿಟ್ಟುಕೊಂಡು ಪೋಷಣೆ ಮಾಡಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅವರು ದೇಶದ ಭದ್ರತೆಗೇ ಧಕ್ಕೆ ತರುತ್ತಾರೆ ಎಂಬುದು ಮುಂದಾಲೋಚನೆಯಿದ್ದರೂ, ಅವರೂ ಮುಸ್ಲಿಮರು ಎಂಬ ಕಾರಣಕ್ಕಾಗಿ ಅವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂಬುದು ಸಹ ಒತ್ತಾಯವಿದೆ.
ಆದರೆ ರೋಹಿಂಗ್ಯಾ ಮುಸ್ಲಿಮರು ಹಿಂದೂಗಳ ವಿರೋಧಿಗಳು, ಅವರನ್ನು ಕೊಲ್ಲುತ್ತಿದ್ದಾರೆ ಎಂಬ ಸತ್ಯವನ್ನು ಮಾತ್ರ ಅಮೆರಿಕ ಕಂಡುಕೊಂಡಿದ್ದು, ಇದು ನಮ್ಮವರಿಗ್ಯಾಕೆ ಅರ್ಥವಾಗುವುದಿಲ್ಲ ಎಂಬುದು ತಿಳಿಯದಾಗಿದೆ.
ಇದರ ನಡುವೆಯೇ ಮ್ಯಾನ್ಮಾರ್ ನಲ್ಲಿ ಇತ್ತೀಚೆಗೆ ರೋಹಿಂಗ್ಯಾ ಮುಸ್ಲಿಮರು ಹಿಂದೂಗಳನ್ನು ಹತ್ಯೆ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ, ಮ್ಯಾನ್ಮಾರ್ ನಲ್ಲಿರುವ ಹಿಂದೂಗಳ ಪರವಾಗಿ ಅಮೆರಿಕ ಧಾವಿಸಿದ್ದು, ಹಿಂದೂಗಳ ಹತ್ಯೆ ಕುರಿತು ವಿಶ್ವಾಸಾರ್ಹ ತನಿಖೆ ಮಾಡಬೇಕು ಎಂದು ಆಗ್ರಹಿಸಿದೆ.
ಇತ್ತೀಚೆಗೆ ಮ್ಯಾನ್ಮಾರ್ ನ ರಾಖಿನೆ ಆರ್ಕಾನ್ ರೋಹಿಂಗ್ಯಾ ಸಾಲ್ವೇಷನ್ ಆರ್ಮಿಯ ಸದಸ್ಯರು ಹಿಂದೂಗಳನ್ನು ಹತ್ಯೆ ಮಾಡಲಾಗಿರುವ ಕುರಿತು ಮಾಹಿತಿ ಇದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಹಾಗಾಗಿ ಈ ಕುರಿತು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಅಮೆರಿಕ ಮ್ಯಾನ್ಮಾರ್ ಸರ್ಕಾರವನ್ನು ಒತ್ತಾಯಿಸಿದೆ.
ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆ ನಡೆಸಿದ ಸಮೀಕ್ಷೆ ಅನ್ವಯ ಇತ್ತೀಚೆಗೆ ವರದಿಯೊಂದು ಬಿಡುಗಡೆಯಾಗಿದ್ದು, 2017ರಲ್ಲಿ ಸುಮಾರು ಮಹಿಳೆಯರು ಸೇರಿ ಸುಮಾರು 99 ಹಿಂದೂಗಳನ್ನು ರೋಹಿಂಗ್ಯಾಗಳು ಹತ್ಯೆ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಮೆರಿಕ ತನಿಖೆಗೆ ಆಗ್ರಹಿಸಿದೆ. ಆದರೆ ರೋಹಿಂಗ್ಯಾ ಮುಸ್ಲಿಮರು ಅಪಾಯಕಾರಿ ಎಂಬುದು ಎಂದು ಭಾರತೀಯರು ಅರಿಯುವುದು ಯಾವಾಗ?
Leave A Reply