ನಾನು ಕಾಂಗ್ರೆಸ್ಸಿನ ಮುಲಾಜಿಯಲ್ಲಿದ್ದೇನೆ ಜನರದಲ್ಲ: ಸಿಎಂ ಕುಮಾರಸ್ವಾಮಿ
ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮಿಶ್ರ ಸರ್ಕಾರ ಆಡಳಿತಕ್ಕೆ ಬಂದಾಗಲೇ ನಾನು ಆಕಸ್ಮಿಕ ಶಿಶು ಎಂದು ಹೇಳುವ ಮೂಲಕ ಸರ್ಕಾರದ ಮೇಲೆ ತಮ್ಮ ಹಿಡಿತ ತಾತ್ಕಾಲಿಕ ಎಂಬ ಸಂದೇಶ ನೀಡಿದ ಸಿಎಂ ಕುಮಾರಸ್ವಾಮಿ ಇದೀಗ ಮತ್ತೊಮ್ಮೆ ಕೋಟ್ಯಂತರ ಕನ್ನಡಿಗರನ್ನು ಅವಮಾನಿಸಿದ್ದಾರೆ.
ಕಾಂಗ್ರೆಸ್ ತಮಗೆ ಬೆಂಬಲ ನೀಡಿದೇ ಎಂಬ ಏಕೈಕ ಕಾರಣಕ್ಕೆ ತಮ್ಮ ಮುಖ್ಯಮಂತ್ರಿ ಹುದ್ದೆಯ ಘನತೆಯನ್ನು ಮರೆತು ಕುಮಾರಸ್ವಾಮಿ ‘ನಾನು ಆರೂವರೆ ಕೋಟಿ ಕನ್ನಡಿಗರ ಮುಲಾಜಿನಲ್ಲಿ ಇಲ್ಲ. ಕೇವಲ ಕಾಂಗ್ರೆಸ್ ಪಕ್ಷದ ಮುಲಾಜಿನಲ್ಲಿದ್ದೇನೆ ಎಂದು ಹೇಳುವ ಮೂಲಕ ರಾಜ್ಯದ ಜನರಿಗೆ ಅವಮಾನ ಮಾಡಿದ್ದಾರೆ.
ತಾವೇ ಚುನಾವಣೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಾಲ ಮನ್ನಾ ಮಾಡುವಂತೆ ವಿಪಕ್ಷ ಬಿಜೆಪಿ ಆಗ್ರಹಿಸುವ ಕುರಿತು ಪ್ರತಿಕ್ರಿಯಿಸಿರುವ ಅವರು, ಸಾಲ ಮನ್ನಾ ಮಾಡಿದ್ದರೇ ರಾಜೀನಾಮೆ ಕೊಡುತ್ತೇನೆ. ರಾಜೀನಾಮೆ ಕೊಡಿ ಎಂದು ಒತ್ತಡ ಹೇರುವ ಅಗತ್ಯವಿಲ್ಲ. ಸಚಿವ ಸಂಪುಟ ವಿಸ್ತರಣೆ ಆಗಿಲ್ಲ. ಒಂದು ವಾರ ಕಾಲಾವಕಾಶ ಕೊಡಿ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರವಾದರೂ ಕಾಂಗ್ರೆಸ್ ನ ಐದು ವರ್ಷದ ಅಂಧಾಡಳಿತಕ್ಕೆ ಕೊನೆ ಹಾಡುತ್ತಾರೆ ಎಂಬ ನಂಬಿಕೆ ಅವರ ತಾತ್ಕಾಲಿಕ ಶಿಶು, ಕಾಂಗ್ರೆಸ್ಸಿನ ಅಡಿಯಾಳು ಎಂಬ ಹೇಳಿಕೆಗಳು ಹುಸಿ ಮಾಡಿವೆ. ಕುಮಾರಸ್ವಾಮಿಯವರು ಕಾಂಗ್ರೆಸ್ ಅಡಿಯಾಳಾಗಿದ್ದೇನೆ ಎಂದು ಹೇಳಿರುವುದು ಆಡಳಿತಾತ್ಮಕ ದೃಷ್ಟಿಯಿಂದ, ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಸರಿಯಲ್ಲ.
Leave A Reply