ಕಾಶ್ಮೀರದಲ್ಲಿ ವೈರಿಗಳ ಹುಟ್ಟಡಗಿಸಲು 5,500 ಬಂಕರ್ ನಿರ್ಮಾಣಕ್ಕೆ ಚಿಂತನೆ, ಪಾಕಿಸ್ತಾನಕ್ಕಿದೆ ಮಾರಿ ಹಬ್ಬ
ಶ್ರೀನಗರ: ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನಿ ಸೈನಿಕರು ಹಾಗೂ ಉಗ್ರರ ಉಪಟಳ ಜಾಸ್ತಿಯಾಗಿದ್ದು, ಅದಕ್ಕೆ ಭಾರತವೂ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಭಾರತದ ಪ್ರತಿದಾಳಿಗೆ ಹೆದರಿದ್ದ ಪಾಕಿಸ್ತಾನ ದಯಮಾಡಿ ಪ್ರತಿದಾಳಿ ಮಾಡಬೇಡಿ ಎಂದು ಭಾರತೀಯ ಸೇನೆಯನ್ನು ಇತ್ತೀಚೆಗೆ ಬೇಡಿಕೊಂಡಿತ್ತು. ಆದರೆ ನಾಯಿ ಬಾಲ ಡೊಂಕೇ ಎಂಬಂತೆ ಪಾಕಿಸ್ತಾನ ಮತ್ತೆ ಗಡಿಯಲ್ಲಿ ಉಪಟಳ ಆರಂಭಿಸಿದೆ.
ಆದರೆ ಭಾರತೀಯ ಸೇನೆ ಯಾರಿಗೇನು ಕಮ್ಮಿ? ಅದಕ್ಕಾಗಿಯೇ ಗಡಿಯಲ್ಲಿ ಭದ್ರತೆ ಹಾಗೂ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ದೃಷ್ಟಿಯಿಂದ ಜಮ್ಮು-ಕಾಶ್ಮೀರ ಗಡಿಯಲ್ಲಿ ಸುಮಾರು 5,500 ಸೇನಾ ಬಂಕರ್ ಗಳನ್ನು ನಿರ್ಮಾಣ ಮಾಡಲು ಮುಂದಾಗಿದೆ.
ಅಷ್ಟೇ ಅಲ್ಲ, ಗಡಿ ಭಾಗದಲ್ಲಿ ಉಗ್ರರ ದಾಳಿಯಿಂದ ಸಾರ್ವಜನಿಕರನ್ನು ರಕ್ಷಿಸುವ ದೃಷ್ಟಿಯಿಂದ 200 ಸಮುದಾಯ ಭವನ ಹಾಗೂ ಗಡಿ ಭವನಗಳನ್ನು ನಿರ್ಮಿಸಲು ಚಿಂತನೆ ನಡೆಸಲಾಗಿದೆ. ಅಲ್ಲದೆ ಇಡೀ ಯೋಜನೆಯನ್ನು ಪ್ರಸಕ್ತ ಆರ್ಥಿಕ ವರ್ಷದಲ್ಲೇ ಪೂರ್ಣಗೊಳಿಸುವ ಚಿಂತನೆಯಿದೆ.
ಈ ಯೋಜನೆಯ ಜಾರಿಗಾಗಿ ಸುಮಾರು 153 ಕೋಟಿ ರೂಪಾಯಿಗಳ ಅವಶ್ಯಕತೆಯಿದ್ದು, ಈಗಾಗಲೇ ರಾಜ್ಯ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವಾಲಯ ಹಣ ಮಂಜೂರು ಮಾಡಲು ಒಪ್ಪಿಗೆ ಸೂಚಿಸಿದೆ. ಒಟ್ಟಿನಲ್ಲಿ ಗಡಿಯಲ್ಲಿ ಉಪಟಳ ಮಾಡುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಸಜ್ಜಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.
Leave A Reply