ಪಾಕಿಸ್ತಾನದಲ್ಲೂ ಹಿಂದೂಗಳ ಸಂಖ್ಯೆ ಹೆಚ್ಚಳ, ಮುಸ್ಲಿಮೇತರರ ಮತದಾರರಲ್ಲಿ ಹಿಂದೂಗಳೇ ಟಾಪ್!
ಹಿಂದೂಗಳು ಎಲ್ಲಿದ್ದರೂ, ಹೇಗಿದ್ದರೂ ಶಾಂತಿಪ್ರಿಯರು, ಧರ್ಮ ಸಹಿಷ್ಣುಗಳು ಎಂಬುದು ಇಡೀ ಜಗತ್ತಿಗೇ ಗೊತ್ತಿರುವ ವಿಚಾರ. ಆದರೆ ಮುಸ್ಲಿಂ ಮೂಲಭೂತವಾದದ ತವರು ಮನೆಯಂತಿರುವ ಪಾಕಿಸ್ತಾನದಲ್ಲಿ ಜೀವನ ಸಾಗಿಸಲು ಹಿಂದೂಗಳು ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ಮುಸ್ಲಿಮರ ಕಿರುಕುಳಕ್ಕೆ ಈಡಾಗುತ್ತಿದ್ದಾರೆ.
ಹಾಗಂತ ಪಾಕಿಸ್ತಾನದಲ್ಲಿರುವ ಹಿಂದೂಗಳು ಹೇಡಿಗಳಂತೆ ಪಾಕಿಸ್ತನ ಬಿಟ್ಟು ಓಡಿಹೋಗಿಲ್ಲ. ಬದಲಾಗಿ ಪಾಕಿಸ್ತಾನದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಇಷ್ಟೇ ಆಗಿದ್ದರೆ ಸುದ್ದಿ ಬರೆಯುವ ಅವಶ್ಯವಿರಲಿಲ್ಲ. ಖುಷಿಯ ಸಂಗತಿ ಏನೆಂದರೆ ಇತ್ತೀಚೆಗೆ ಪಾಕಿಸ್ತಾನದಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿಯಾಗಿದೆ. ಮತದಾರರ ಸಂಖ್ಯೆ ಹೆಚ್ಚಾಗಿರುವಲ್ಲಿ, ಹಿಂದೂಗಳು ಜಾಸ್ತಿ ಇರುವುದೇ ಇದಕ್ಕೆ ಉತ್ತಮ ನಿದರ್ಶನವಾಗಿದೆ.
ಹೌದು, ಪಾಕಿಸ್ತಾನದಲ್ಲಿ ಜುಲೈ 25ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಈ ಬಾರಿ ಮುಸ್ಲಿಮೇತರ ಮತದಾರರ ಸಂಖ್ಯೆ ಜಾಸ್ತಿಯಾಗಿದೆ. ಹೀಗೆ ಜಾಸ್ತಿಯಾಗಿರುವ ಮುಸ್ಲಿಮೇತರ ಮತದಾರರಲ್ಲಿ ಹಿಂದೂಗಳೇ ಟಾಪ್ ಒನ್ ಸ್ಥಾನದಲ್ಲಿದ್ದು, ಪಾಕಿಸ್ತಾನದಲ್ಲೂ ಹಿಂದುತ್ವ ಪಸರಿಸುತ್ತದೆ ಎಂಬುದು ಇದರಿಂದ ಸಾಬೀತಾಗಿದೆ.
ಈ ಕುರಿತು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದ್ದು, 2013ರಲ್ಲಿ 2.77 ದಶಲಕ್ಷ ಇದ್ದ ಮುಸ್ಲಿಮೇತರರ ಸಂಖ್ಯೆ ಈ ಬಾರಿ 3.63 ದಶಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಶೇ.30ರಷ್ಟು ಮುಸ್ಲಿಮೇತರರ ಮತದಾರರು ಮತದಾರರ ಪಟ್ಟಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ.
ಈ ಮತದಾರರಲ್ಲಿ 1.77 ದಶಲಕ್ಷ ಮತದಾರರು ಹಿಂದೂಗಳೇ ಆಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳೇ ಇದ್ದಾರೆ. ಆದಾಗ್ಯೂ 2013ರ ಚುನಾವಣೆಯಲ್ಲಿ ಹಿಂದೂ ಮತದಾರರ ಸಂಖ್ಯೆ 1.40 ದಶಲಕ್ಷ ಇತ್ತು. ಕಳೆದ ಐದು ವರ್ಷದಲ್ಲಿ ಸುಮಾರು 37 ಸಾವಿರ ಹಿಂದೂ ಮತದಾರರು ನೋಂದಣಿಯಾಗಿದ್ದು ಸಂತಸದ ಸಂಗತಿಯಾಗಿದೆ.
Leave A Reply