ದೇಣಿಗೆ ಪಡೆಯುವಲ್ಲೂ ವಿಶ್ವಾಸ ಗಳಿಸಿದ ಬಿಜೆಪಿ, ಕಾಂಗ್ರೆಸ್ಸಿಗಿಂತ 12 ಪಟ್ಟು ಹೆಚ್ಚು ದೇಣಿಗೆ ಸಂಗ್ರಹ
ದೇಶದಲ್ಲಿ ಯಾವುದೇ ಪಕ್ಷವಿರಲಿ, ತಾನು ಜನರ ಬಳಿ ಹೋಗುವುದು ಜನರ ದುಡ್ಡಿನಲ್ಲೇ, ಅರ್ಥಾತ್ ಉದ್ಯಮಿಗಳ, ದಾನಿಗಳಿಂದ ಪಡೆದ ಹಣದಿಂದಲೇ. ಬೃಹತ್ ಸಮಾವೇಶ, ಚುನಾವಣೆ ಸೇರಿ ಹಲವು ಕಾರಣಗಳಿಗಾಗಿ ಪಕ್ಷಗಳು ಜನರಿಂದ ದೇಣಿಗೆ ಸಂಗ್ರಹಿಸಿ ಖರ್ಚು-ವೆಚ್ಚ ನೋಡಿಕೊಳ್ಳುತ್ತವೆ.
ಅದೇ ರೀತಿಯಾಗಿದೇ ದೇಶದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿ ಹಲವು ಪಕ್ಷಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತವೆ. ಆದರೆ ಹೀಗೆ ದೇಣಿಗೆ ಸಂಗ್ರಹಿಸಲು ಯಾವುದೇ ಪಕ್ಷವು ಸಾರ್ವಜನಿಕರಿಂದ ವಿಶ್ವಾಸ ಪಡೆದಿರಬೇಕು, ದೇಶದ ಜನರ ಏಳಿಗೆಗೆ ಶ್ರಮಿಸುವಂತಿರಬೇಕು ಎಂಬ ಅಲಿಖಿತ ನಿಯಮಗಳೂ ಇವೆ.
ಈ ದಿಸೆಯಲ್ಲೂ ದೇಶದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಉದ್ಯಮಿಗಳು, ದಾನಿಗಳಿಂದ ಅಪಾರ ಹಣ ಸಂಗ್ರಹಿಸಿದೆ. ಹೌದು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಎಂಬ ಸರ್ಕಾರೇತರ ಸಂಸ್ಥೆ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಬಿಜೆಪಿ 2016-17ನೇ ಸಾಲಿನಲ್ಲಿ ಅತಿಹೆಚ್ಚು ಹಣ ಸಂಗ್ರಹಿಸಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
2016-17ನೇ ಅವಧಿಯಲ್ಲಿ ಬಿಜೆಪಿಗೆ ಜನ 532.27 ಕೋಟಿ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಇದು ಕಾಂಗ್ರೆಸ್ಸಿಗಿಂತ ಸುಮಾರು 12 ಪಟ್ಟು ಜಾಸ್ತಿಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ದೇಶಾದ್ಯಂತ ಜನರ ವಿಶ್ವಾಸ ಗಳಿಸಿದ್ದು, ಸುಮಾರು 22 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ. ಹಾಗೆಯೇ ಉದ್ಯಮಿಗಳು, ದಾನಿಗಳ ವಿಶ್ವಾಸವೂ ಕಳೆದುಕೊಂಡಿದ್ದು, ದೇಣಿಗೆ ಸಂಗ್ರಹವಾಗದೆ 2019ರ ಲೋಕಸಭೆ ಚುನಾವಣೆ ಎದುರಿಸಲು ಸಂಕಷ್ಟ ಎದುರಿಸುತ್ತಿದೆ ಎಂದು ತಿಳಿದುಬಂದಿದೆ.
Leave A Reply