ಪಾಲಕರೇ ತಮ್ಮ ಮಕ್ಕಳನ್ನು ಆರ್ ಎಸ್ಎಸ್ ಸೇರಿಸುವ ದಿನ ಬರಲಿವೆ: ಹರ್ಯಾಣ ಸಚಿವ ಅನೀಲ್ ವಿಜ್
ದೆಹಲಿ: ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಗರಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಘ ಶಿಕ್ಷಾವರ್ಗದಲ್ಲಿ ಭಾಗವಹಿಸುವ ಕುರಿತು ಆತಂಕ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳ ನಡೆಗೆ ತೀವ್ರ ಬೇಸರ ವ್ಯಕ್ತವಾಗಿದ್ದು, ಅಭಿಪ್ರಾಯ ಹಂಚಿಕೊಳ್ಳಲು ಪ್ರಣಬ್ ಸ್ವತಂತ್ರರು ಎಂಬ ಸಾಮಾನ್ಯ ಅರಿವು ಇಲ್ಲದಂತೆ ಪ್ರತಿ ಪಕ್ಷಗಳು ವಾದ ಮಾಡುತ್ತಿರುವುದು ದುರಂತ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಹರ್ಯಾಣದ ಸಚಿವ ಅನೀಲ್ ವಿಜ್ ‘ಸದಾ ರಾಷ್ಟ್ರದ ಹಿತ ಚಿಂತನೆ ಬಯಸುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಏಳಿಗೆಗೆ ಶ್ರಮಿಸುತ್ತಿದೆ. ಭವಿಷ್ಯದಲ್ಲಿ ಪ್ರತಿ ಭಾರತೀಯರ ಕಡ್ಡಾಯವಾಗಿ ಆರ್ ಎಸ್ ಎಸ್ ಸೇರುವ ದಿನಗಳು ಬರಲಿವೆ ಎಂದು ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಹ್ವಾನ ಒಪ್ಪಿಕೊಂಡಿರುವುದು ಸ್ವಾಗತಾರ್ಹ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಒಂದು ರಾಷ್ಟ್ರೀಯ ಸಂಘಟನೆಯಾಗಿದ್ದು, ಪ್ರಣಬ್ ಮುಖರ್ಜಿ ಉತ್ತಮ ನಿರ್ಧಾರ ಕೈಗೊಂಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಅವರ ಹೇಳಿಕೆಯನ್ನು ಪ್ರಬಲವಾಗಿ ಪ್ರತಿಪಾಧಿಸಿರುವ ಅವರು ‘ಉತ್ತಮ ಸಮಾಜ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರ್ಪಡೆ ಮಾಡುತ್ತಾರೆ. ಯಾವುದೇ ಒತ್ತಾಯವಿಲ್ಲದೇ ಸ್ವಯಂ ಪೂರ್ವಕವಾಗಿ ಈ ಕಾರ್ಯ ನಡೆಸುತ್ತಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರೀಯ ಭದ್ರತೆಯ ದೃಷ್ಟಿಯಲ್ಲಿ ಇರುವುದು ಅವಶ್ಯ ಎಂದು ಹೇಳಿದ್ದಾರೆ.
Leave A Reply