ಇತಿಹಾಸ ಬರೆದ ನಿರ್ಮಲಾ ಸೀತಾರಾಮನ್: ಯಾವುದೇ ರಕ್ಷಣಾ ಸಚಿವರು ಭೇಟಿ ನೀಡದ ಸ್ಥಳಕ್ಕೆ ಭೇಟಿ
ಲುಂಗ್ವಾ(ನಾಗಾಲ್ಯಾಂಡ್): ದೇಶದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸದಾ ತಮ್ಮ ನಿರಂತರ ಕಾರ್ಯ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಹುದ್ದೆಯನ್ನು ಬಿಡುವಿಲ್ಲದ ಕಾರ್ಯಚಟುವಟಿಕೆಗಳ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಅವರ ಕಾರ್ಯಶೈಲಿಯೇ ಸಾಕ್ಷಿಯಾಗಿದ್ದು, ಮಹತ್ವದ ರಕ್ಷಣಾ ಖಾತೆಯ ಜವಾಬ್ದಾರಿ ಹೊತ್ತುಕೊಂಡು ಸದಾ ರಕ್ಷಣಾ ಪಡೆಗಳೊಡನೆ ಸಂಪರ್ಕದಲ್ಲಿದ್ದು, ಅವರ ನೋವಿಗೆ ಸ್ಪಂದಿಸುವುದು, ಸೂಕ್ತ ಸೌಲಭ್ಯ ಒದಗಿಸುತ್ತಿದ್ದಾರೆ. ಇದೀಗ ನಿರ್ಮಲಾ ಸೀತಾರಾಮನ್ ಮತ್ತೊಂದು ಸಾಧನೆ ಮೆರೆದಿದ್ದು, ಇದುವರೆಗೆ ದೇಶದ ಯಾವುದೇ ರಕ್ಷಣಾ ಸಚಿವರು ಭೇಟಿ ನೀಡದ ಪ್ರದೇಶಕ್ಕೆ ಭೇಟಿ ನೀಡುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಭಾರತ ಮ್ಯಾನ್ಮಾರ್ ಗಡಿಯಲ್ಲಿರುವ ನಾಗಾಲ್ಯಾಂಡ್ ನಲ್ಲಿರುವ ಕಣಿವೆ ಗ್ರಾಮದ ಲುಂಗ್ವಾಕ್ಕೆ ರಕ್ಷಣಾ ಪಡೆಗಳೊಂದಿಗೆ ಭೇಟಿ ನೀಡಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಪ್ರಥಮ ಬಾರಿಗೆ ರಕ್ಷಣಾ ಸಚಿವರೊಬ್ಬರು ಲುಂಗ್ವಾ ಗ್ರಾಮದ ಕಣಿವೆಗೆ ಭೇಟಿ ನೀಡಿರುವ ದಾಖಲೆ ಬರೆದಿದ್ದಾರೆ.ಇದೇ ವೇಳೆ ರಕ್ಷಣಾ ಪಡೆಗಳು, ಮತ್ತು ಗಡಿಯಲ್ಲಿರುವ ಸೈನಿಕರೊಂದಿಗೆ ಮಾತುಕತೆ ನಡೆಸಿದಲ್ಲದೇ, ಗಡಿಯಲ್ಲಿರುವ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಕಣಿವೆಯಲ್ಲಿರುವ ಲುಂಗ್ವಾ ಗ್ರಾಮದ ಕೋನ್ಯಾಕ್ ಸಮುದಾಯದ ಗ್ರಾಮದ ಪ್ರಮುಖ ಆಂಗ್ ಲೊಂಗ್ವಾ ಅವರ ಮನೆಗೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಬುಡಕಟ್ಟು ಸಮುದಾಯದವರಿಂದ ಸಾಂಪ್ರದಾಯಿಕ ಸನ್ಮಾನ ಸ್ವೀಕರಿಸಿದ್ದಾರೆ.
Leave A Reply