ನರೇಂದ್ರ ಮೋದಿ ವಿರೋಧಿಗಳೇ ಎಲ್ಲಿದ್ದೀರಿ, ಭಾರತದ ಜಿಡಿಪಿ ಚೀನಾವನ್ನೂ ಹಿಂದಿಕ್ಕಿದೆ ನೋಡಬನ್ನಿ!
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆಗಳುವ, ಪ್ರತಿ ನಡೆಯನ್ನೂ ವಿರೋಧಿಸುವ ದೊಡ್ಡ ಪಡೆ ಮೊದಲಿನಿಂದಲೂ ಇದೆ, ಈಗಲು ಅಸ್ತಿತ್ವದಲ್ಲಿದೆ. ಮೋದಿ ಅವರು ಯಾವುದೇ ನಿರ್ಧಾರ ಕೈಗೊಂಡರೂ ಇವರು ವಿರೋಧಿಸುತ್ತಾರೆ. ಆ ಯೋಜನೆಯಿಂದ ದೇಶಕ್ಕೆ ಒಳಿತಾಗಲಿದೆ ಎಂದು ಗೊತ್ತಿದ್ದರೂ ವಿರೋಧಿಸುತ್ತಾರೆ.
ನೀವೇ ಯೋಚನೆ ಮಾಡಿ ನೋಡಿ. ನರೇಂದ್ರ ಮೋದಿ ಅವರು ಐನೂರು ಸಾವಿರ ರೂಪಾಯಿಗಳ ನೋಟು ನಿಷೇಧಿಸಿ, ಕಾಳಧನಿಕರಿಗೆ ಶಾಕ್ ನೀಡಿದರು. ಡಿಜಿಟಲ್ ಮನಿ ವಹಿವಾಟಿಗೆ ಪ್ರೋತ್ಸಾಹ ನೀಡಿದರು. ಜಿಎಸ್ಟಿ ಜಾರಿಗೊಳಿಸುವ ಮೂಲಕ ದೇಶದ ತೆರಿಗೆ ವ್ಯವಸ್ಥೆಯನ್ನು ಸುಧಾರಣೆಯತ್ತ ಕೊಂಡೊಯ್ಯುತ್ತಿದ್ದಾರೆ. 90 ಲಕ್ಷಕ್ಕೂ ಅಧಿಕ ತೆರಿಗೆದಾರರು ನೋಂದಣಿಯಾಗಿದ್ದಾರೆ.
ಈ ಎರಡು ಯೋಜನೆಗಳಿಂದ ದೇಶದಲ್ಲಿ ಇಷ್ಟೆಲ್ಲ ಬದಲಾವಣೆಯಾಗಿದ್ದರೂ, ಕಾಂಗ್ರೆಸ್ಸಿಗರು, ವಿರೋಧ ಪಕ್ಷಗಳ ಮುಖಂಡರು, ಬುದ್ಧಿ ಜೀವಿಗಳು, ಸೋ ಕಾಲ್ಡ್ ಪ್ರಗತಿಪರರು, ಗಂಜಿಗಿರಾಕಿಗಳೆಲ್ಲರದ್ದೂ ಒಂದೇ ವರಾತ. ಮೋದಿ ಅವರು ಕೈಗೊಂಡಿರುವ ಈ ನಿರ್ಧಾರದಿಂದ ಭಾರತದ ಆರ್ಥಿಕತೆ ಅಧೋಗತಿಗೆ ತಲುಪುತ್ತದೆ ಎಂದು ಬೊಬ್ಬೆ ಹಾಕಿದವರು ಇವರು.
ಆದರೆ ಈಗ ಏನಾಗಿದೆ ನೋಡಿ. ಭಾರತದಲ್ಲಿ ಉದ್ಯಮ ಕೈಗೊಳ್ಳಲು ಸರಳವಾಗಿದೆ. ಉದ್ಯಮ ಕೈಗೊಳ್ಳುವಲ್ಲಿ ಸರಳ ವಿಧಾನ ಇರುವ ಟಾಪ್ ನೂರನೇ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಅಷ್ಟೇ ಏಕೆ ಭಾರತದ ಜಿಡಿಪಿ ಈಗ ಶೇ.7.7ರಷ್ಟು ಜಾಸ್ತಿಯಾಗಿದೆ.
ಹೌದು, 2008ರ ಜನವರಿಯಿಂದ ಮಾರ್ಚ್ ವರೆಗಿನ, ಅಂದರೆಪ್ರಸಕ್ತ ಸಾಲಿನ ವಿತ್ತೀಯ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ಭಾರತದ ಜಿಡಿಪಿ 7.7ಕ್ಕೆ ಜಿಗಿದಿದ್ದು, ಚೀನಾವನ್ನೂ ಹಿಂದಿಕ್ಕಿದೆ. ಚೀನಾದ ಪ್ರಸ್ತುತ ಜಿಡಿಪಿ ಶೇ.6.8ಕ್ಕೆ ಕುಸಿದಿದ್ದು, ಭಾರತ ಮೇಲುಗೈ ಸಾಧಿಸಿದೆ.
ಒಂದು ಬಾರಿ ಯೋಚಿಸಿ ನೋಡಿ, ನರೇಂದ್ರ ಮೋದಿ ಅವರು ಘೋಷಿಸಿದ ನೋಟು ನಿಷೇಧ ಹಾಗೂ ಜಿಎಸ್ಟಿಯಿಂದ ದೇಶದ ಆರ್ಥಿಕ ಸ್ಥಿತಿಗತಿ ಅಧೋಗತಿಗೆ ಇಳಿಯದೆ, ಚೀನಾದ ಆರ್ಥಿಕತೆಯನ್ನೂ ಮೀರಿಸುತ್ತಿತ್ತೇ? ಇನ್ನು ಮುಂದೆಯೂ ಈ ಕಾಂಗ್ರೆಸ್ ಸೇರಿ ಹಲವು ಪಕ್ಷಗಳ ಮಾತು ನಂಬಬೇಕೆ? ನಂಬಿದರೆ ಏನಾಗುತ್ತದೆ ಎಂಬುದಕ್ಕೆ ನೋಟು ನಿಷೇಧ, ಜಿಎಸ್ಟಿ ಬಳಿಕ ಬೊಬ್ಬೆ ಹಾಕಿದ್ದು ಹಾಗೂ ಈಗ ಭಾರತದ ಆರ್ಥಿಕ ಸ್ಥಿತಿ ಔನ್ನತ್ಯಕ್ಕೇರುತ್ತಿರುವುದೇ ಸಾಕ್ಷಿಯಾಗಿದೆ.
Leave A Reply