ಆ ದಲಿತ ವ್ಯಕ್ತಿ ಕ್ರಿಶ್ಚಿಯನ್ ಗೆ ಮತಾಂತರವಾಗಿದ್ದೇ ಆತ ಮಾಡಿದ ದೊಡ್ಡ ತಪ್ಪಾಯಿತಾ?
ತಿರುವನಂತಪುರ: ಈ ಕ್ರಿಶ್ಚಿಯನ್ ಮಿಷನರಿಗಳು ದಲಿತರು, ಬಡವರಿಗೆ ಹಣದ ಆಸೆ ನೀಡಿ, ಹೇಗೆ ಅವರು ಅತ್ತ ಕ್ರಿಶ್ಚಿಯನ್ನರೂ ಅಲ್ಲದೆ, ಇತ್ತ ದಲಿತರೂ ಆಗಿರದೆ ಜೀವನ ನಡೆಸುವಂತೆ ಮಾಡುತ್ತಾರೆ ಎಂಬುದಕ್ಕೆ ಕೇರಳದಲ್ಲಿ ನಿದರ್ಶನವೊಂದು ದೊರೆತಿದೆ.
ಹೌದು, ಕೇರಳದ ಕೊಲ್ಲಂ ಜಿಲ್ಲೆಯ ಥೆನ್ಮಾಲಾ ದಲಿತನಾಗಿದ್ದು, ಬಳಿಕ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಿದ್ದ ಕೆವಿನ್ ಜೋಸೆಫ್ ಎಂಬಾತನನ್ನು ಕೊಲೆ ಮಾಡಲಾಗಿದೆ. ಈತ ಕ್ರಿಶ್ಚಿಯನ್ ಗೆ ಮತಾಂತರವಾದ ಬಳಿಕ, ಮೂಲ ಕ್ರಿಶ್ಚಿಯನ್ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಆದರೆ ಯುವತಿ ಮನೆಯಲ್ಲಿ ಮದುವೆ ಒಪ್ಪದೆ, ಈಗ ಯುವಕನನ್ನು ಕೊಲೆ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಕುರಿತು ಕೊಟ್ಟಾಯಂ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದು, ಕ್ರಿಶ್ಚಿಯನ್ ಯುವತಿಯ ಸಹೋದರ ಶಾನು ಚಾಕೋ, ಆತನ ತಂದೆ ಚಾಕೋ ಸೇರಿ 10 ಜನರ ವಿರುದ್ಧ ಅಪಹರಣ, ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನೂ ಅಮಾನತುಗೊಳಿಸಿದ್ದು, ವಿಚಾರಣೆ ನಡೆಯುತ್ತಿದೆ.
ಕೆವಿನ್ ಹಾಗೂ ಕ್ರಿಶ್ಚಿಯನ್ ಯುವತಿ ಕೊಟ್ಟಾಯಂನ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಪರಿಚಯವಾಗಿದ್ದು, ಕೆಲವೇ ದಿನಗಳಲ್ಲಿ ಸ್ನೇಹ ಪ್ರೀತಿಗೆ ತಿರುಗಿದೆ. ಅದಾದ ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು.
ಯುವತಿಯ ಕುಟುಂಬಸ್ಥರು ಕೆವಿನ್ ನನ್ನು ತಿರಸ್ಕರಿಸಲು, ಆತ ಮೂಲ ದಲಿತನಾಗಿರುವುದೇ ಆಗಿದೆ. ಆದರೂ ಯುವಕ-ಯುವತಿ ರಿಜಿಸ್ಟರ್ಡ್ ಆಫೀಸಿನಲ್ಲಿ ಮದುವೆಯಾಗಿದ್ದರು. ಆದರೂ ಯುವತಿಯ ಕುಟುಂಬಸ್ಥರು ವೈರತ್ವ ಮೆರೆದು ಯುವಕನನ್ನು ಕೊಲೆ ಮಾಡಿಸಿದ್ದಾರೆ ಎನ್ನಲಾಗಿದೆ. ಹೇಳಿ ಯುವಕ ಕ್ರಿಶ್ಚಿಯನ್ ಗೆ ಮತಾಂತರವಾಗಿದ್ದೇ ತಪ್ಪಾ? ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೂ ಇಂತಹ ಭೇದ-ಭಾವ ಏಕೆ? ಯಾವ ಪಾದ್ರಿ ಇದಕ್ಕೆ ಉತ್ತರಿಸುತ್ತಾರೆ?
Leave A Reply