ಸರ್ಜಿಕಲ್ ಸ್ಟ್ರೈಕ್ ನೇತೃತ್ವ ವಹಿಸಿದ್ದ ಆ ಲೆ.ಜನರಲ್ ಗೆ ಬಡ್ತಿ, ಮುಂದಿದೆ ಹಬ್ಬ ಅಂತಾನೆ ಅರ್ಥ!
ಪ್ರಾಯಶಃ ಸೆಪ್ಟೆಂಬರ್ 29, 2016ನೇ ಇಸವಿಯನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಅದು ಜಮ್ಮು-ಕಾಶ್ಮೀರದಲ್ಲಿ ಉಪಟಳ ಮಾಡುತ್ತಿದ್ದ ಪಾಕಿಸ್ತಾನದ ನೆಲಕ್ಕೆ ನುಗ್ಗಿ ಅವರಿಗೆ ಪಾಠ ಕಲಿಸಿದ ದಿನ. ನಮ್ಮ 19 ಯೋಧರ ಸಾವಿಗೆ ಬದಲಾಗಿ ಪಾಕಿಸ್ತಾನದ 38 ಸೈನಿಕರ ರುಂಡ ಚೆಂಡಾಡಿದ ದಿನ. ಮೇಲಾಗಿ ಅವತ್ತು ಭಾರತ ವಿಶ್ವದ ಎದುರು ತನ್ನ ಶಕ್ತಿ ಹಾಗೂ ಕೆಣಕಿದರೆ ಕುಟುಕದೇ ಬಿಡುವುದಿಲ್ಲ ಎಂದು ಎದೆ ತಟ್ಟಿಕೊಂಡು ಹೇಳಿದ ದಿನ.
ಆದರೆ ಹೀಗೆ ಪಾಕಿಸ್ತಾನದ ನೆಲಕ್ಕೆ ನುಗ್ಗಿ ಅಲ್ಲಿಯವರನ್ನು ಹೊಡೆದುರುಳಿಸುವ ಇಡೀ ಯೋಜನೆಯ ಹಿಂದೆ ಇದ್ದಿದ್ದು ಒಬ್ಬ ಯೋಧ. ಅವರ ಹೆಸರು ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್. ಹೌದು, ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾಗ ಮಿಲಿಟರಿ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ (ಡಿಜಿಎಂಒ) ಇವರೇ ಆಗಿದ್ದರು. ಅಲ್ಲದೆ, 2015ರಲ್ಲಿ ಮ್ಯಾನ್ಮಾರ್ ಬಂಡುಕೋರರನ್ನು ಸದೆಬಡಿಯಲು ಮಾಡಿದ ದಾಳಿಯಲ್ಲೂ ಇವರೇ ಪ್ರಧಾನ ಪಾತ್ರ ನಿರ್ವಹಿಸಿದ್ದರು.
ಇಂತಹ ರಣಬೀರ್ ಸಿಂಗ್ ಈಗ ಭಾರತೀಯ ಸೇನೆಯ ಉತ್ತರ ಕಮಾಂಡ್ ನ ಮುಖ್ಯಸ್ಥರಾಗಿದ್ದಾರೆ. ಲೆಫ್ಟಿನೆಂಟ್ ಜನರಲ್ ದೇವರಾಜ್ ಅಂಬು ಅವರು ಭಾರತೀಯ ಸೇನೆಯ ಉಪ ಮುಖ್ಯಸ್ಥರಾಗಿ ನೇಮಕವಾದ ಹಿನ್ನೆಲೆಯಲ್ಲಿ ಸಿಂಗ್ ಆಯ್ಕೆಯಾಗಿದ್ದಾರೆ.
ಆದರೆ ಇದುವರೆಗೆ ರಣಬೀರ್ ಸಿಂಗ್ ಯಾವುದೇ ದಾಳಿ, ಪ್ರತಿದಾಳಿಯ ನೇತೃತ್ವ ವಹಿಸಿಕೊಂಡಿದ್ದಾರೋ, ಅಲ್ಲೆಲ್ಲ ನಮ್ಮ ಸೇನೆ ಮುನ್ನಡೆ ಸಾಧಿಸಿದೆ. ಈಗ ಅವರು ಉತ್ತರ ವಿಭಾಗದ ಮುಖ್ಯಸ್ಥರಾಗಿ ಆಯ್ಕೆಯಾಗಿರುವುದು ಬಡ್ತಿ ಸಿಕ್ಕಂತಾಗಿದ್ದು, ಇಲ್ಲೂ ಯಾವುದೇ ದಾಳಿ ಕೈಗೊಂಡು ವೈರಿಗಳಿಗೆ ಪಾಠ ಕಲಿಸಿದರೂ ಅಚ್ಚರಿಯಿಲ್ಲ. ಮುಂದಿದೆ ಮಾರಿ ಹಬ್ಬ ಅಂತಾನೆ ಅರ್ಥ.
Leave A Reply