ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲು ಭಾರತ ಯಾವ ರಾಷ್ಟ್ರದಿಂದ ಸ್ಪೈಕ್ ಕ್ಷಿಪಣಿ ತರಿಸಿಕೊಳ್ಳುತ್ತಿದೆ ಗೊತ್ತಾ?
ನವದೆಹಲಿ: ಆ ಹೇಡಿ ಪಾಕಿಸ್ತಾನವನ್ನು ಎಂದಿಗೂ ನಂಬುವಂತಿಲ್ಲ. ಮಗ್ಗುಲಲ್ಲೇ ಕುಳಿತು ಶಾಂತಿ ಮಾತುಕತೆ ನಡೆಸಿ, ಹಿಂಬಾಗಿಲಿನಿಂದ ಉಗ್ರರು, ಸೈನಿಕರನ್ನು ಬಿಟ್ಟು ಉಪಟಳ ಮಾಡುತ್ತಿದೆ. ಇಂದಿಗೂ ಜಮ್ಮು-ಕಾಶ್ಮೀರದಲ್ಲಿ ಇಂತಹುದೇ ಉಪಟಳ ಮಾಡುತ್ತದೆ. ಆದರೆ ಭಾರತೀಯ ಸೈನಿಕರು ಸುಮ್ಮನಿರಬೇಕಿಲ್ಲ, ದಾಳಿ ಮಾಡಲು ಯತ್ನಿಸಿದ, ಮಾಡಿದ ಉಗ್ರರು, ಪಾಕಿ ಸೈನಿಕರನ್ನು ಹೊಡೆದುರುಳಿಸುತ್ತಿದ್ದಾರೆ.
ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಪಾಕಿಸ್ತಾನಕ್ಕೆ ಸೆಡ್ಡು ಹೊಡೆಯಲು ಭಾರತ ಮಹತ್ತರ ನಿರ್ಧಾರವೊಂದನ್ನು ಕೈಗೊಂಡಿದ್ದು, ಶತ್ರುರಾಷ್ಟ್ರದ ಯುದ್ಧ ಟ್ಯಾಂಕರ್ ಗಳನ್ನು ಕ್ಷಣ ಮಾತ್ರದಲ್ಲಿ ಹೊಡೆದುರುಳಿಸುವ ಟ್ಯಾಂಕ್ ನಿರೋಧಕ ಸ್ಕೈಪ್ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ.
ಈ ಕುರಿತು ಭಾರತ ಹಾಗೂ ಇಸ್ರೇಲ್ ನಡುವೆ ಮಹತ್ತರ ಮಾತುಕತೆ ಮುಗಿದಿದ್ದು, ಶೀಘ್ರದಲ್ಲೇ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದ ಪ್ರಕಟವಾಗಲಿದೆ. ಈ ಸ್ಪೈಕ್ ಕ್ಷಿಪಣಿಗಳ ತಯಾರಿಕೆಯಲ್ಲಿ ಇಸ್ರೇಲ್ ಮುನ್ನಡೆಯಲ್ಲಿರುವ ಕಾರಣ ಹಾಗೂ ಇಸ್ರೇಲ್ ಜತೆ ಭಾರತದ ಸಂಬಂಧ ಉತ್ತಮವಾಗಿರುವ ಕಾರಣದಿಂದ ಇಸ್ರೇಲ್ ನಿಂದ ಖರೀದಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಈ ಟ್ಯಾಂಕ್ ನಿರೋಧಕ ಸ್ಪೈಕ್ ಕ್ಷಿಪಣಿಗಳು ಆಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಶತ್ರುರಾಷ್ಟ್ರಗಳ ಯುದ್ಧದ ಟ್ಯಾಂಕರ್ ಗಳನ್ನು ಕ್ಷಣಮಾತ್ರದಲ್ಲೇ ಹೊಡೆದುರುಳಿಸುವ ಶಕ್ತಿ ಹೊಂದಿವೆ. ಭಾರತಕ್ಕೆ ಪ್ರಸ್ತುತ ಇಂತಹ 8 ಸಾವಿರ ಕ್ಷಿಪಣಿಗಳ ಅವಶ್ಯವಿದ್ದು, ಮುಂದಿನ ಮೂರು ವರ್ಷದಲ್ಲಿ ಇಸ್ರೇಲ್ ಭಾರತಕ್ಕೆ ಬಹುತೇಕ ಕ್ಷಿಪಣಿ ಪೂರೈಸಲಿದೆ ಎಂದು ಮೂಲಗಳು ತಿಳಿಸಿವೆ.
Leave A Reply