• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಜನಸಾಮಾನ್ಯನಿಗೆ ಕೇಂದ್ರದ ಭರ್ಜರಿ ಆಫರ್: ಕಪ್ಪುಕುಳಗಳ ಮಾಹಿತಿ ನೀಡಿ ಕೋಟಿ ಕೋಟಿ ಗೆಲ್ಲಿ

TNN Correspondent Posted On June 2, 2018
0


0
Shares
  • Share On Facebook
  • Tweet It

ದೆಹಲಿ: ದೇಶದಲ್ಲಿರುವ ಕಪ್ಪು ಕುಳಗಳಲ್ಲಿರುವ ಹೂರಣ ಹೊರ ಹಾಕಲು ಕೇಂದ್ರ ಸರ್ಕಾರ ಕಾಲಕ್ಕೆ ತಕ್ಕಂತೆ ಹೊಸ ಹೊಸ ನೀತಿ, ನಿಯಮ, ಯೋಜನೆಗಳನ್ನು ರೂಪಿಸುತ್ತಿದೆ. ನೋಟ್ಯಂತರದ ಮೂಲಕ ಬೇಡ ಬೇಡ ಎಂದರೂ ಕಪ್ಪು ಹಣ ಸಂಗ್ರಹಿಸಿದವರು ತಮ್ಮ ಹಣವನ್ನು ಹೊರ ಹಾಕಿದ್ದರು. ಇದೀಗ ಅಕ್ರಮವಾಗಿ ಆಸ್ತಿ ಮಾಡಿರುವವರ ಮೇಲೆ ಕಣ್ಣಿಟ್ಟಿದ್ದು, ಸಾಮಾನ್ಯ ಜನರಿಗೆ ವಿಶೇಷ ಆಹ್ವಾನವೊಂದು ನೀಡಿದೆ. ಕಪ್ಪು ಹಣ, ಅಕ್ರಮ ಆಸ್ತಿ ಹೊಂದಿರುವವರ ಬಗ್ಗೆ ಖಚಿತ ಮಾಹಿತಿ ನೀಡಿದರೇ 50 ಲಕ್ಷದಿಂದ 5 ಕೋಟಿಯವರೆಗೆ ಭರ್ಜರಿ ಬಹುಮಾನ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ದೇಶದ ಸಾಮಾನ್ಯ ಪ್ರಜೆಯೂ ಅಕ್ರಮ ತಡೆಯುವಲ್ಲಿ ಭಾಗಿಯಾಗಬಹುದು.

ಕಪ್ಪು ಹಣವನ್ನು ತಮ್ಮ ಸಂಬಂಧಿಕರು, ಆಪ್ತರ ಹೆಸರಿನಲ್ಲಿ ಸಂಗ್ರಹಿಸಿ, ಅವರ ಹೆಸರಿನಲ್ಲಿ ಆಸ್ತಿ ಸಂಗ್ರಹಿಸಿ, ತೆರಿಗೆಯಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈ ಮಾಸ್ಟರ್ ಪ್ಲಾನ್ ರೂಪಿಸಿದೆ. ಅಕ್ರಮಗಳನ್ನು ತಡೆಯಲು ಸಾರ್ವಜನಿಕರ ನೇರ ಸಹಕಾರ ಪಡೆಯುವುದು, ಅಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಅಕ್ರಮ ನಡೆಸುವವರಿಗೆ ಸೂಕ್ತ ಶಿಕ್ಷೆ ವಿಧಿಸುವುದು, ಸರ್ಕಾರದ ಬೊಕ್ಕಸಕ್ಕೆ ವಂಚನೆ ಮಾಡುತ್ತಿರುವವರಿಗೆ ಸೂಕ್ತ ಪಾಠ ಕಲಿಸುವುದು ಈ ಯೋಜನೆಯ ಮುಖ್ಯ ಉದ್ದೇಶ.

ಕಪ್ಪು ಹಣದ ಕುರಿತ ಮಾಹಿತಿಯನ್ನು ತೆರಿಗೆ ಇಲಾಖೆಯ ತನಿಖಾ ನಿರ್ದೇಶಕರಿಗೆ ನೀಡಬೇಕು. ಕಪ್ಪು ಹಣದ ಕುರಿತು ನಿಖರ ಮಾಹಿತಿಯೊಂದಿಗೆ ಮಾಹಿತಿ ನೀಡಿದರೇ ಐದು ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಅಲ್ಲದೇ ಆದಾಯ ತೆರಿಗೆ ವಂಚಿಸಿದವರ ಬಗ್ಗೆ ತೆರಿಗೆ ಇಲಾಖೆಯ ಡೈರೆಕ್ಟರ್ ಜನರಲ್ ಅಥವಾ ತತ್ಸಮಾನ ಅಧಿಕಾರಿಗಳಿಗೆ ಮಾಹಿತಿ ನೀಡಿದರೇ ಮಾಹಿತಿದಾರನಿಗೆ 50 ಲಕ್ಷ ಬಹುಮಾನ, ಬೇನಾಮಿ ವಹಿವಾಟಿನ ಕುರಿತು ತೆರಿಗೆ ಇಲಾಖೆಯ ಬೇನಾಮಿ ತಡೆ ಘಟಕದ ಜಂಟಿ ಅಥವಾ ಹೆಚ್ಚುವರಿ ಆಯುಕ್ತರಿಗೆ ಮಾಹಿತಿ ನೀಡಿದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ಘೋಷಿಸಲಾಗಿದೆ. ಯಾವುದೇ ಕಾರಣಕ್ಕೂ ಮಾಹಿತಿದಾರರನ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

A new reward scheme titled “Benami Transactions Informants Reward Scheme, 2018”, has been issued by the Income Tax Department with the objective of obtaining people’s participation in the Income Tax Department’s efforts to unearth black money & to reduce tax evasion.

— Income Tax India (@IncomeTaxIndia) June 1, 2018

0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Tulunadu News June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Tulunadu News June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search