ಮೋದಿ ಸರ್ಕಾರದ ಕಠಿಣ ನಿಮಯಗಳಿಂದ ಕಣಿವೆಯಲ್ಲಿ ಅಂತ್ಯದತ್ತ ಭಯೋತ್ಪಾದನೆ: ಜೀತೇಂದ್ರ ಸಿಂಗ್
ದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳಿಂದ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಕೊನೆ ಹಂತ ತಲುಪಿದ್ದು, ಶೀಘ್ರದಲ್ಲಿ ಇಡೀ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಲಿದೆ. ಭಯೋತ್ಪಾದನೆ ಹೆಳ ಹೆಸರಿಲ್ಲದಂತಾಗಲಿದೆ ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಕಠಿಣ ನಿಮಯಗಳಿಂದ 600 ಭಯೋತ್ಪಾದಕರ ಹತ್ಯೆಯಾಗಿದ್ದು, ಭಯೋತ್ಪಾದನಾ ವಿರೋಧಿ ಚಟುವಟಿಕೆಗಳು ನಿರಂತರವಾಗಿರುವುದು ಇದಕ್ಕೆ ಕಾರಣ. ಯುಪಿಎ-1 ಮತ್ತು ಯುಪಿಎ-2 ರ ಆಡಳಿತಕ್ಕಿಂತ ಹೆಚ್ಚು ಭಯೋತ್ಪಾದಕರನ್ನು ಪ್ರಸ್ತುತ ಎನ್ ಡಿಎ ಸರ್ಕಾರದ ನೇತೃತ್ವದಲ್ಲಿ ಹತ್ಯೆ ಮಾಡಿ, ಭಯೋತ್ಪಾದನೆಯನ್ನು ಹತ್ತಿಕ್ಕಲು ಶ್ರಮಿಸಲಾಗಿದೆ. ಆದ್ದರಿಂದಲೇ ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಕೊನೆ ಹಂತ ತಲುಪಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಪಾಕಿಸ್ತಾನ ಮತ್ತು ಜಮ್ಮು ಕಾಶ್ಮೀರದ ಪ್ರತ್ಯೇಕವಾದಿಗಳ ಜೊತೆ ಮಾತುಕತೆಗೆ ಸಿದ್ಧವಿದ್ದರೂ, ದಾಳಿ ನಡೆಸುತ್ತಿರುವುದು ದುರಂತ. ಭಾರತ ದೇಶದ ಶಾಂತಿಗಾಗಿ ಯಾವುದೇ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಭಾರತದ ನೆರೆ ರಾಷ್ಟ್ರಗಳು ಶಾಂತಿ ಬಯಸಿದರೇ ಭಾರತ ಸದಾ ಸಿದ್ಧವಾಗಿದೆ. ಆದರೆ ಭಯೋತ್ಪಾದನೆಗೆ ಪ್ರಚೋಧನೆ ನೀಡಿದರೇ, ದೇಶದ ರಕ್ಷಣಾ ಪಡೆಗಳು ತಕ್ಕ ಉತ್ತರ ನೀಡಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಮ್ಜಾನ್ ಶಾಂತಿಯುತ ಆಚರಣೆಗಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ದೇಶದ ಹಿತಕ್ಕಾಗಿ ಪಾಕಿಸ್ತಾನದ ಜೊತೆಗೆ ಮೋದಿ ಸರ್ಕಾರ ಮಾತುಕತೆಗೆ ಸಿದ್ಧವಿದೆ. ಜಮ್ಮು ಕಾಶ್ಮೀರದ ಪ್ರತ್ಯೇಕವಾದಿಗಳಷ್ಟೇ ಅಲ್ಲ ಸಾಮಾನ್ಯ ಜನರು ಬಂದು ಚರ್ಚಿಸಲು ನಾವು ಸಿದ್ಧರಿದ್ದೇವೆ ಎಂದು ಆಹ್ವಾನ ನೀಡಿದ್ದಾರೆ.
ನೋಟ್ಯಂತರದಿಂದ ಭಯೋತ್ಪಾದನೆಗೆ ತೀವ್ರ ಹೊಡೆತ ಬಿದ್ದಿದೆ. ಕೇಂದ್ರ ಸರ್ಕಾರ ಗಡಿಯಲ್ಲಿ ವಾಸಿಸುವವರ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಅಲ್ಲದೇ ಗಡಿ ರಕ್ಷಣೆಗೆ ಆದ್ಯತೆ ನೀಡಿದೆ. ಗಡಿಯಲ್ಲಿ ಯಾವುದೇ ಸಮಸ್ಯೆಗಳಾಗದಂತೆ ಎಚ್ಚರಿಕೆ ವಹಿಸಿದೆ ಎಂದು ತಿಳಿಸಿದ್ದಾರೆ.
Leave A Reply