ಮಹಾತ್ಮ ಗಾಂಧಿಜೀಗೂ ಆರ್ ಎಸ್ ಎಸ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯವಿತ್ತು: ವೆಂಕಯ್ಯ ನಾಯ್ಡು
ದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧಿಜೀ ಅವರಿಗೂ ಸಕಾರಾತ್ಮಕ ಅಭಿಪ್ರಾಯವಿತ್ತು ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ. ಈ ಮೂಲಕ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಾಗಪುರದಲ್ಲಿ ಜೂನ್ 7ರಂದು ನಡೆಯಲಿರುವ ಆರ್ ಎಸ್ ಎಸ್ನ ಸಂಘ ಶಿಕ್ಷಾ ವರ್ಗದಲ್ಲಿ ಭಾಗಿಯಾಗುವುದನ್ನು ವಿರೋಧಿಸುತ್ತಿರುವವರಿಗೆ ತಕ್ಕ ಉತ್ತರ ನೀಡಿದ್ದಾರೆ.
1934ರಲ್ಲಿ ಮಹಾತ್ಮ ಗಾಂಧಿಜೀ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿಬಿರದಲ್ಲಿ ಭಾಗಿಯಾಗಿದ್ದರು. ಅಲ್ಲದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿನ ಶಿಸ್ತು, ಪಾಠ ಬೋಧನೆ, ಜಾತಿ ನಿರಪೇಕ್ಷಿತ ವರ್ತನೆ, ತಾರತಮ್ಯವಿಲ್ಲದ ನಡವಳಿಕೆಯಿಂದ ಪ್ರಭಾವಿತರರಾಗಿದ್ದರು. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ಆರ್ ಎಸ್ ಎಸ್ ನ ತಾರತಮ್ಯವಿಲ್ಲದೆ ಇರುತ್ತಾರೆ. ಸ್ವಯಂ ಸೇವಕರು ಪರಸ್ಪರ ಜಾತಿ ಜಾತಿ ಎನ್ನದೇ, ಎಲ್ಲರೂ ಸಮಾನರಾಗಿ ಶಿಬಿರದಲ್ಲಿ ಭಾಗಿಯಾಗುತ್ತಾರೆ ಎಂದು ಗಾಂಧಿಜೀ ಹೇಳಿದ್ದರು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆತ್ಮ ಅನುಶಾಸನ, ಆತ್ಮ ಸಮ್ಮಾನ, ಆತ್ಮ ರಕ್ಷಾ, ಆತ್ಮ ನಿರ್ಭರತೆಯನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತೇನೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಷ್ಟ್ರೀಯ ಸರ್ವರ ಏಳಿಗೆಯ ಸಿದ್ಧಾಂತವನ್ನು ಅನುಸರಿಸಿಕೊಂಡು ಬರುತ್ತಿದೆ ಎಂದು ವೆಂಕಯ್ಯ ನಾಯ್ಡು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Leave A Reply