ನರೇಂದ್ರ ಮೋದಿಗೆ ಮತ್ತೊಂದು ಗೌರವ, ಸಿಂಗಾಪುರದಲ್ಲಿ ಮೋದಿ ಹೆಸರಲ್ಲಿ ಅರಳಲಿದೆ ಹೂವೊಂದು!
ಪ್ರಧಾನಿ ನರೇಂದ್ರ ಮೋದಿ ಅವರೆಂದರೇನೆ ಹಾಗೆ. ಅವರು ಪ್ರಧಾನಿಯಾದ ಬಳಿಕ ಇಡೀ ವಿಶ್ವವೇ ಅವರನ್ನು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಿದೆ. ಒಂದು ಕಾಲದಲ್ಲಿ ವೀಸಾ ಕೊಡಲು ನಿರಾಕರಿಸಿದ್ದ ಇದೇ ಅಮೆರಿಕ, ಈಗ ಮೋದಿ ತಮ್ಮ ದೇಶಕ್ಕೆ ಆಗಮಿಸುತ್ತಾರೆ ಎಂದರೆ ಹಬ್ಬದಂತೆ ಸಿದ್ಧಪಡಿಸುತ್ತದೆ. ಅಷ್ಟರಮಟ್ಟಿಗೆ ಮೋದಿ ಖ್ಯಾತಿ ವಿಶ್ವವ್ಯಾಪಿಯಾಗಿದೆ. ಭಾರತದ ಕೀರ್ತಿ ಪತಾಕೆಯೂ ಬಾನೆತ್ತರಕ್ಕೆ ಹಾರುತ್ತಿದೆ.
ಇಂತಹ ವಿಶ್ವನಾಯಕ ನರೇಂದ್ರ ಮೋದಿ ಅವರಿಗೆ ಸಿಂಗಾಪುರದಲ್ಲಿ ಮತ್ತೊಂದು ಗೌರವ ಲಭಿಸಿದ್ದು, ಇನ್ನು ಮುಂದೆ ಸಿಂಗಾಪುರದಲ್ಲಿ ನರೇಂದ್ರ ಮೋದಿ ಹೆಸರಿನಲ್ಲಿ ಪುಷ್ಪ ಅರಳಿದೆ.
ಹೌದು, ನರೇಂದ್ರ ಮೋದಿ ಅವರು ಸಿಂಗಾಪುರದ ರಾಷ್ಟ್ರೀಯ ಆರ್ಕಿಡ್ ಉದ್ಯಾನವನಕ್ಕೆ ಭೇಟಿ ನೀಡಿದ್ದು, ಇದರ ಸವಿನೆನಪಿಗಾಗಿ ಆರ್ಕಿಡ್ ಹೂವೊಂದಕ್ಕೆ ನರೇಂದ್ರ ಮೋದಿ ಅಂತ ಹೆಸರಿಟ್ಟಿದ್ದು, ಇನ್ನು ಮೇಲೆ ಈ ಹೂ ನರೇಂದ್ರ ಮೋದಿ ಅಂತಲೇ ಕರೆಸಿಕೊಳ್ಳಲಿದೆ.
ಸಿಂಗಾಪುರದ ರಾಷ್ಟ್ರೀಯ ಆರ್ಕಿಡ್ ಉದ್ಯಾನವನಕ್ಕೆ ನರೇಂದ್ರ ಮೋದಿ ಅವರು ಭೇಟಿ ಮಾಡಿದ ಸಂದರ್ಭದಲ್ಲಿ ಪುಷ್ಪವೊಂದಕ್ಕೆ ಡೆಂಡ್ರೊಬಿಯಮ್ ನರೇಂದ್ರ ಮೋದಿ ಎಂದು ಹೆಸರಿಡಲಾಗಿದೆ ಎಂಬುದಾಗಿ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಸಿಂಗಾಪುರ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪುರಾತನ ಹಿಂದೂ ದೇವಾಲಯ ಶ್ರೀ ಮಾರಿಯಮ್ಮನ್ ಗೂ ಭೇಟಿ ನೀಡಿದ್ದಾರೆ. ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಖ್ಯಾತಿ ಜಾಸ್ತಿಯಾಗಿದ್ದು, ಅವರೂ ವಿಶ್ವನಾಯಕರಾಗುತ್ತಿದ್ದಾರೆ.
Leave A Reply