ಅಂತಾರಾಜ್ಯಗಳ ಸರಕು ಸಾಗಾಟ ಸರಳ: ದೇಶಾದ್ಯಂತ ಸರಕು ಸಾಗಣಿಕೆಗೆ ಎಲೆಕ್ಟ್ರಾನಿಕ್ ವೇ ಬಿಲ್
ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾಕ್ಕೇರಿದ ನಂತರ ತಂತ್ರಜ್ಞಾನಕ್ಕೆ ಒತ್ತು ನೀಡುತ್ತಿದ್ದು, ನಿತ್ಯ ಹಲವು ಕ್ರಾಂತಿಕಾರಿ ಬದಲಾಣೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದ್ದೆ. ವಿಶೇಷವಾಗಿ ಡಿಜಿಟಲ್ ಇಂಡಿಯಾ ಯೋಜನೆಯಲ್ಲಿ ತಂತ್ರಜ್ಞಾನದ ಸದ್ಭಳಕೆಗೆ ಮುಂದಾಗಿದ್ದು, ನೂತನ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ದೇಶಾದ್ಯಂತ ಸರಕು ಸಾಗಣಿಕೆಗೆ ಎಲೆಕ್ಟ್ರಾನಿಕ್ ವೇ ಬಿಲ್ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ.
ಈ ಯೋಜನೆಯಿಂದ ಸಾಗಾಣಿಕಾ ವೆಚ್ಚದಲ್ಲಿ ಪಾರದರ್ಶಕತೆ ಮತ್ತು ವೇಗವಾದ ಪ್ರಕ್ರಿಯೆ ನಡೆಯಲಿದೆ. ಅಂತಾರಾಜ್ಯಗಳ ಮಧ್ಯೆ ಸರಕು ಸಾಗಣೆ ಮಾಡುವುದು ಸುಲಭವಾಗಲಿದೆ. ಆನ್‌ಲೈನ್ ಶಾಪಿಂಗ್ ಮೂಲಕ ಉತ್ಪನ್ನಗಳನ್ನು ತ್ವರಿತವಾಗಿ ಗ್ರಾಹಕರಿಗೆ ತಲುಪಿಸಲು ಸಹಕಾರಿಯಾಗಲಿದೆ.
ಸರಕು ಹಾಗೂ ಸೇವಾ ತೆರಿಗೆಯಡಿ ಇ-ವೇ ಬಿಲ್ ವ್ಯವಸ್ಥೆ ಜಾರಿ ಮಾಡಲಾಗಿದ್ದು, ವೆಬ್ ಸೈಟ್ ಮೂಲಕ ಒಂದು ಬಾರಿ ತೆರಿಗೆ ಪಾವತಿಸಿದರೆ, ದೇಶದ ಎಲ್ಲ ರಾಜ್ಯದಲ್ಲೂ ತೆರಿಗೆ ಒಳಗೊಳ್ಳಲಿದೆ. ಸಂಪೂರ್ಣ ಆನ್ ಲೈನ್ ವ್ಯವಸ್ಥೆ ಪರಿಚಯಿಸಲಾಗಿದೆ. ಸರಕು ಸಾಗಣಿಕೆಯಲ್ಲಿ ಶೇ.16 ರಷ್ಟು ಅಂತಾರಾಜ್ಯ ಚೆಕ್ ಪೋಸ್ಟ್ ಗಳಲ್ಲಿ ವ್ಯರ್ಥವಾಗುತ್ತಿರುವುದರಿಂದ ಈ ನೂತನ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ತ್ವರಿತವಾಗಿ ಕಾರ್ಯನಿರ್ವಹಿಸಬಹುದು.
ಇ ವೇ ಬಿಲ್ ಪಡೆಯುವುದರಿಂದ ಸಾಗಾಣಿಕೆ ವೇಳೆ ತೆರಿಗೆ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಅಲ್ಲದೆ ಚೆಕ್‌ಪೋಸ್ಟ್‌ಗಳಲ್ಲಿ ಪರವಾನಗಿ ಸಂಬಂಧಿಸಿದ ತೊಡಕುಗಳೂ ನಿವಾರಣೆಯಾಗಲಿದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಶೀಘ್ರದಲ್ಲಿ ಉತ್ಪನ್ನಗಳನ್ನು ತಲುಪಿಸಲು ಸಾಧ್ಯವಾಗಲಿದೆ ಎಂದು ಜಿಎಸ್ ಟಿ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದ್ದೆ.
Leave A Reply