ಇನ್ನು ನಿವೃತ್ತಿಯ ದಿನದಂತೆ ಪಿಎಫ್ ಮೊತ್ತ ಕೈ ಸೇರಲಿದೆ!
ಇನ್ನು ನೀವು ನಿವೃತ್ತರಾದ ದಿನದಂದೇ ನಿಮಗೆ ಸಿಗಬೇಕಾದ ಪಿಎಫ್ ಮೊತ್ತ ಹಾಗೂ ಪಿಂಚಣಿಗೆ ಸಂಬಂಧಪಟ್ಟ ಸೌಲಭ್ಯಗಳು ಆವತ್ತೆ ಅಂತಿಮಗೊಳ್ಳಲಿವೆ. ಈ ಮೂಲಕ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಕೇಂದ್ರ ಸರಕಾರ ಬಾಳಿನ ಮುಸ್ಸಂಜೆಯಲ್ಲಿರುವ ಪ್ರಜೆಗಳ ಮುಖದಲ್ಲಿ ದೊಡ್ಡ ಹರುಷ ತಂದಿದೆ. ಇಲ್ಲಿಯ ತನಕ ಏನಾಗಿತ್ತು ಎಂದರೆ ಒಬ್ಬ ನೌಕರ ತನ್ನ ನಿವೃತ್ತಿಯ ನಂತರ ಆಗಾಗ ಪಿಎಫ್ ಆಫೀಸಿಗೆ ಹೋಗಿ ಯಾವಾಗ ತನ್ನ ಹಣ ಸಿಗುತ್ತೆ ಎಂದು ಕಾಯುತ್ತಾ ಕೂರಬೇಕಿತ್ತು. ಅನೇಕ ಬಾರಿ ಚಪ್ಪಲಿ ಸವೆದರೂ ಹಣ ಇಂತದ್ದೇ ದಿನದಂದು ಸಿಗುತ್ತದೆ ಎನ್ನುವ ಯಾವ ಗ್ಯಾರಂಟಿ ಇರಲಿಲ್ಲ. ಇದರಿಂದ ಪ್ರತಿಬಾರಿ ತಮ್ಮ ಹಣೆಬರಹವನ್ನು ಶಪಿಸುತ್ತಾ ಹಿರಿಯರು ಪಿಎಫ್ ಮತ್ತು ಪಿಂಚಣಿ ಹಣ ಮತ್ತು ಗ್ರಾಚುಯಿಟಿ ಸೌಲಭ್ಯದ ಬಗ್ಗೆ ನೋವಿನಿಂದ ಕೊರಗುತ್ತಿದ್ದರು.
ಆದರೆ ನರೇಂದ್ರ ಮೋದಿಯವರು ತಮ್ಮ ಸರಕಾರ ಭಾರತದ ಪ್ರತಿಯೊಬ್ಬ ವ್ಯಕ್ತಿಯನ್ನು ಕೂಡ ವಿಐಪಿ ಎಂದೇ ಪರಿಗಣಿಸಿದ್ದೇವೆ ಎಂದು ಹೇಳಿದ್ದು ಮಾತ್ರವಲ್ಲ, ಈಗ ಮಾಡಿ ಕೂಡ ತೋರಿಸುತ್ತಿದ್ದಾರೆ. ಅದರಂತೆ ಬಾಳ ಮುಸ್ಸಂಜೆಯಲ್ಲಿ ಆರಾಮದಿಂದ ಇರಬೇಕಾಗಿರುವ ನಿವೃತ್ತಿ ಜೀವನವನ್ನು ಸಂತೋಷದಿಂದ ಕಳೆಯಬೇಕಾಗಿರುವ ನಾಗರಿಕರಿಗೆ ಇನ್ನೂ ನಿವೃತ್ತಿಯ ದಿನವೇ ತಮ್ಮ ಎಲ್ಲಾ ದಾಖಲೆ ಪತ್ರಗಳ ವಿಲೇವಾರಿ ನಡೆದು ಅವರು ನೆಮ್ಮದಿಯಿಂದ ಮನೆಗೆ ತೆರಳುವ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರಕಾರ ಹೇಳಿದೆ.
ಈ ಬಗ್ಗೆ ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಅವರು ರಾಜ್ಯಸಭೆಯಲ್ಲಿ ಸದಸ್ಯರೊಬ್ಬರ ಲಿಖಿತ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಇಪಿಎಫ್ ಕಚೇರಿಯಲ್ಲಿ ಕರ್ಥವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಎಂಪ್ಲಾಯೀಸ್ ಪ್ರಾವಿಂಡೆಂಟ್ ಫಂಡ್ 1952 ಮತ್ತು ಎಂಪ್ಲಾಯೀಸ್ ಪೆನ್ಸನ್ ಸ್ಕೀಮ್ 1995 ಅಡಿಯಲ್ಲಿ ಎಲ್ಲಾ ಸೌಲಭ್ಯವನ್ನು ತಕ್ಷಣವೇ ಜಾರಿಗೆ ಬರುವಂತೆ ನೀಡಬೇಕು ಎಂದು ಕೇಂದ್ರ ಸರಕಾರ ಸೂಚಿಸಿರುವುದಾಗಿ ಲಿಖಿತವಾಗಿ ಉತ್ತರ ನೀಡಿದ್ದಾರೆ. ಇನ್ನೂ ಪೇಮೆಂಟ್ ಆಫ್ ಗ್ರಾಚುಯಿಟಿ ಆಕ್ಟ್ 1972 ಪ್ರಕಾರ ಮಾಲೀಕರು ನಿಯಮ ಪ್ರಕಾರ 30 ದಿನಗಳ ಒಳಗೆ ಆ ಸೌಲಭ್ಯವನ್ನು ನೀಡಲು ಕೂಡ ಆದೇಶಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಮೋದಿಯವರು ಅಧಿಕಾರ ವಹಿಸಿಕೊಂಡ ಬಳಿಕದ ಮೊದಲ ದೊಡ್ಡ ಹೆಜ್ಜೆ ಇದಾಗಿತ್ತು ಎಂದು ಹೇಳಿದ ಸಚಿವರು ನಿವೃತ್ತಿ ಹೊಂದಿದ ನಂತರ ಯಾವುದೇ ಆರ್ಥಿಕ ಸಮಸ್ಯೆಯನ್ನು ಹೊಂದದೆ ಹಿರಿಯರು ತಮ್ಮ ನಿವೃತ್ತಿ ಜೀವನವನ್ನು ಎಂಜಾಯ್ ಮಾಡಬೇಕು ಎನ್ನುವುದು ಮೋದಿ ಚಿಂತನೆ ಎಂದು ನಂತರ ಮಧ್ಯಮದವರೊಂದಿಗೆ ಅಭಿಪ್ರಾಯ ಪಟ್ಟರು.
ಕೇಂದ್ರದ ಈ ಸ್ಪಷ್ಟ ಆದೇಶದಿಂದ 48.85 ಲಕ್ಷ ಕೇಂದ್ರದ ನೌಕರರಿಗೆ ಮತ್ತು ಒಟ್ಟು 55.51 ಲಕ್ಷ ಪಿಂಚಣಿದಾರರಿಗೆ ತಮ್ಮ ಜೀವನಕ್ಕೆ ಇನ್ನಷ್ಟು ಭದ್ರತೆ ಕೊಟ್ಟಂತೆ ಆಗಿದೆ. ಕೇಂದ್ರದ ಖಡಕ್ ಸೂಚನೆಯ ಬಳಿಕ ಇಪಿಎಫ್ ಕಚೇರಿಗಳು ಕೂಡ ಉದ್ಯೋಗಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡಿದೆ. ಈ ಮೂಲಕ ಸುಮಾರು ನಾಲ್ಕು ಕೋಟಿ ನಾಗರಿಕರಿಗೆ ಸಹಾಯ ಸಿಗುತ್ತಿದೆ. ಅದರಲ್ಲಿ ಒಂದು ಸೌಲಭ್ಯ ಏನೆಂದರೆ ನಿರ್ದಿಷ್ಟ ಮೊತ್ತವನ್ನು ಉದ್ಯೋಗಿ ತನ್ನ ಆರೋಗ್ಯದ ಖರ್ಚಿಗಾಗಿ ಡ್ರಾ ಮಾಡಬಹುದು ಎನ್ನುವುದು ಗಮನಾರ್ಹ. ಇನ್ನು ಸ್ವಂತ ಮನೆ ಖರೀದಿಗಾಗಿ ಇಪಿಎಫ್ ನ 90% ಹಣವನ್ನು ಡ್ರಾ ಮಾಡುವ ಸೌಲಭ್ಯ ಇದೆ. ಅದರೊಮದಿಗೆ ಜೀವನ ಭದ್ರತೆಗಾಗಿ 50 ಸಾವಿರ ಪ್ರತ್ಯೇಕ ಇಡುವ ಕಾರ್ಯವನ್ನು ಕೂಡ ಇಲಾಖೆ ಮಾಡಲಿದೆ.
Leave A Reply