ಅಂತಾರಾಷ್ಟ್ರೀಯ ಶಾಂತಿ ಸ್ಥಾಪನೆಗೆ ಭಾರತದ ಕೊಡುಗೆ ಅಪಾರ: ವಿಶ್ವಸಂಸ್ಥೆ ಮೆಚ್ಚುಗೆ
ವಿಶ್ವ ಸಂಸ್ಥೆ: ಜಾಗತಿಕ ಮಟ್ಟದಲ್ಲಿ ಶಾಂತಿ ಪಾಲನೆಗೆ ಭಾರತ ನೀಡುತ್ತಿರುವ ಭಾರತೀಯರ ಯೋಧರಿಗೆ ವಿಶ್ವಸಂಸ್ಥೆ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಧನ್ಯವಾದ ಹೇಳಿದ್ದಾರೆ. ಶಾಂತಿ ಪಾಲನೆ ವೇಳೆ, ಹೋರಾಟದ ವೇಳೆ ಪ್ರಾಣತ್ಯಾಗ ಮಾಡಿದ 163 ಭಾರತೀಯ ಯೋಧರಿಗೆ ಗುಟೆರೆಸ್ ಇದೇ ವೇಳೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ವಿಶ್ವದ ಶಾಂತಿ ಸ್ಥಾಪನೆಗೆ ಬಲಿಷ್ಠ ಮತ್ತು ನಿಷ್ಠ ಯೋಧರನ್ನು ಕೊಡುಗೆ ನೀಡಿರುವುದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಿದ್ದಾರೆ. ಲಿಬಿಯಾದಲ್ಲಿರುವ 125 ಮಂದಿ ಬಲದ ಭಾರತೀಯ ಮಹಿಳಾ ಯೋಧರ ಘಟಕದ ಕುರಿತು ಶ್ಲಾಘಿಸಿರುವ ಗುಟೆರೆಸ್, ಇವರು ಎಲ್ಲರಿಗೂ ಸ್ಫೂರ್ತಿ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
‘ವಿಶ್ವ ಸಂಸ್ಥೆ ಶಾಂತಿ ಪಾಲನಾ ಕಾರ್ಯಕ್ರಮದಲ್ಲಿ ಭಾರತೀಯ ಪಡೆಗಳ ಬೆಂಬಲಕ್ಕೆ ಧನ್ಯವಾದ ತಿಳಿಸುತ್ತೇನೆ. ಅಂತಾರಾಷ್ಟ್ರೀಯ ಶಾಂತಿ ಹಾಗೂ ಭದ್ರತೆ ವಿಚಾರದಲ್ಲಿ ಮಹತ್ವದ ಕೊಡುಗೆ ನೀಡಿದ್ದೀರಿ’ ಎಂದು ಗುಟೆರೆಸ್ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಶಾಂತಿ ಪಾಲನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಗುಟೆರೆಸ್, ದಕ್ಷಿಣ ಸುಡಾನ್ ಹಾಗೂ ಕಾಂಗೋ ಸೇರಿ ಜಗತ್ತಿನ ನಾನಾ ಭಾಗಗಳಲ್ಲಿ 7,700ಕ್ಕೂ ಹೆಚ್ಚು ಭಾರತೀಯ ಯೋಧರು ಶಾಂತಿ ಪಾಲನಾ ಕರ್ತವ್ಯದಲ್ಲಿ ಭಾಗಿಯಾಗಿದ್ದಾರೆ. 1948ರಿಂದಲೂ ಇದುವರೆಗೆ 3,737 ಶಾಂತಿ ಪಾಲನಾ ಪಡೆಗಳ ಯೋಧರು ಹುತಾತ್ಮರಾಗಿದ್ದಾರೆ. ಇವರಲ್ಲಿ ಭಾರತದವರೇ 163 ಯೋಧರು ಇದ್ದಾರೆ.
Leave A Reply