ಯೋಗಿ ಆದಿತ್ಯನಾಥರ ಸ್ಪೀಡ್ ಅಂದರೇನೆ ಅದು, ಮಳೆ ಸಂತ್ರಸ್ತರಿಗೆ ಪರಿಹಾರ ನೀಡಲು ಅದೇಶ
ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸ್ಪೀಡ್ ಅಂದರೇನೆ ಅದು. ಅವರು ಮುಖ್ಯಮಂತ್ರಿಯಾದ ಕೆಲವೇ ತಿಂಗಳಲ್ಲೇ ರೈತರ ಸಾಲ ಮಾಡಿದರು. ಅಕ್ರಮವಾಗಿ ರಾಜ್ಯದಲ್ಲಿ ಮನೆ ಮಾಡಿದ್ದ ಕಸಾಯಿಖಾನೆಗಳನ್ನು ತೆರವುಗೊಳಿಸಿದರು. ರಸ್ತೆ ಬದಿ ಸೇರಿ ಹಲವೆಡೆ ಹೆಣ್ಣು ಮಕ್ಕಳಿಗೆ ತೊಂದರೆ ಕೊಡುತ್ತಿದ್ದವರಿಗೆ ಆ್ಯಂಟಿ ರೋಮಿಯೋ ಸ್ಕ್ವಾಡ್ ರಚಿಸಿ ಪಾಠ ಕಲಿಸಿದರು.
ಅಷ್ಟೇ ಅಲ್ಲ, ಇಡೀ ರಾಜ್ಯಾದ್ಯಂತ ಆವರಿಸಿದ್ದ ಅಪರಾಧವನ್ನು ತಡೆಗಟ್ಟದ್ದು ಯೋಗಿ ಆದಿತ್ಯನಾಥರ ದಿಟ್ಟ ನಿರ್ಧಾರ. ಪ್ರಸ್ತುತ ಯಾವುದೇ ರಾಜ್ಯದಲ್ಲಿ ಅಪರಾಧಿಗಳೇ ಪೊಲೀಸ್ ಠಾಣೆಗೆ ಬಂದು ನಮ್ಮನ್ನು ಅರೆಸ್ಟ್ ಮಾಡಿ, ನಾವು ಜೈಲಿನಲ್ಲೇ ಇರುತ್ತೇವೆ, ಎನ್ ಕೌಂಟರ್ ಮಾಡಿ ಬಿಸಾಕಬೇಡಿ ಎಂದು ಗೋಗರೆಯುತ್ತಿದ್ದರೆ ಅದು ಉತ್ತರ ಪ್ರದೇಶದಲ್ಲಿ ಮಾತ್ರ. ಅರದು ಯೋಗಿ ಆದಿತ್ಯನಾಥರ ನಿರ್ಧಾರದಿಂದ ಹಾಗೂ ಪೊಲೀಸ್ ಇಲಾಖೆಗೆ ನೀಡಿರುವ ಸ್ವಾತಂತ್ರ್ಯದಿಂದ.
ಇಂತಹ ಯೋಗಿ ಆದಿತ್ಯನಾಥರು ಈಗ ಮತ್ತೊಂದು ಶೀಘ್ರ ನಿರ್ಧಾರ ತೆಗೆದುಕೊಂಡಿದ್ದಾರೆ. ಕಳೆದ ಮೇ 29ರಿಂದ ಉತ್ತರ ಪ್ರದೇಶದಲ್ಲಿ ಮೈಕುನ್ ಚಂಡಮಾರುತ ಹಾಗೂ ಭಾರಿ ಮಳೆಗೆ ಇಡೀ ಜನಜೀವನ ಅಸ್ತವ್ಯಸ್ತವಾಗಿತ್ತು. ಸುಮಾರು 15 ಜನ ಮೃತಪಟ್ಟಿದ್ದರು. ಅಪಾರ ಆಸ್ತಿಪಾಸ್ತಿ ಹಾನಿಯಾಗಿತ್ತು. 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.
ಆದರೆ ಮಳೆಯಿಂದ ಜೀವನ ಸಂಕಷ್ಟಕ್ಕೆ ಸಿಲುಕಿಕೊಂಡ ಸಂತ್ರಸ್ತರ ಕಷ್ಟ ಅರಿತ ಯೋಗಿ ಆದಿತ್ಯನಾಥರು ಈಗ ಅವರಿಗೆಲ್ಲ ಪುನರ್ವಸತಿ ಕಲ್ಪಿಸಲು ಮುಂದಾಗಿದ್ದಾರೆ. ಮೃತಪಟ್ಟವರು, ಗಾಯಗೊಂಡವರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು. ಮಳೆಯಿಂದ ಆಸ್ತಿ-ಪಾಸ್ತಿ ನಷ್ಟ ಹೊಂದಿದವರಿಗೆ ಶೀಘ್ರವೇ ಪರಿಹಾರ ಧನ ವಿತರಿಸಬೇಕು ಎಂದು ಸೂಚಿಸಿದ್ದಾರೆ.
ಯಾವುದೇ ರಾಜ್ಯ ಸರ್ಕಾರ ಒಂದು ನೆರೆ ಹಾವಳಿಯಿಂದ ಎದ್ದು ಬರಲು ಕನಿಷ್ಠ ತಿಂಗಳಾದರೂ ಬೇಕು. ಆದರೆ ಯೋಗಿ ಆದಿತ್ಯನಾಥರ ಸ್ಪೀಡ್ ಅದಲ್ಲ, ಅವರು ನೆರೆ ಬಂದ ಒಂದೇ ವಾರದಲ್ಲಿ ಇಡೀ ರಾಜ್ಯದ ಜನರ ಪರ ನಿಂತಿದ್ದಾರೆ. ದೇಶದಲ್ಲಿ ಇಂತಹ ಮುಖ್ಯಮಂತ್ರಿಗಳ ಸಂತತಿ ಜಾಸ್ತಿಯಾಗಲಿ ಎಂಬುದೇ ನಮ್ಮ ಆಶಯ.
Leave A Reply