ಗೋಮಾತೆಯನ್ನು ಮಳೆಯಲ್ಲಿ ನಿಲ್ಲಿಸಿದವನಿಗೆ 10 ದಿನ ಜೈಲುವಾಸ, 3 ಸಾವಿರ ದಂಡ ವಿಧಿಸಿದ ಕೋರ್ಟ್
ಮುಂಬೈ: 28 ಗೋವುಗಳನ್ನು ಮಳೆಯಲ್ಲಿ ನಿಲ್ಲಿಸಿ, ಯಾವುದೇ ಸೂಕ್ತ ವ್ಯವಸ್ಥೆ ಕಲ್ಪಿಸದ ವ್ಯಕ್ತಿಗೆ ಮುಂಬೈ ಮೆಟ್ರೋಪಾಲಿಟಿಯನ್ ಕೋರ್ಟ್ ಶಿಕ್ಷೆ ನೀಡುವ ಮೂಲಕ ಗೋಮಾತೆಯ ರಕ್ಷಣೆಯ ಮಹತ್ವ ಸಾರಿದೆ. 76 ವರ್ಷದ ಗೋಪಾಲ ಪುಲ್ಸುಂಗೆ ಶಿಕ್ಷೆಗೆ ಒಳಪಟ್ಟವರು. ಇವರು 28 ಗೋವುಗಳಿಗೆ ಆಶ್ರಯ ಕಲ್ಪಿಸದೇ ಮಳೆಯಲ್ಲಿಯೇ ಕಟ್ಟಿ ನಿಲ್ಲಿಸಿದ್ದರಿಂದ ಈ ಶಿಕ್ಷೆಯನ್ನು ನೀಡಲಾಗಿದೆ.
ಪ್ರಾಣಿಗಳ ಮೇಲೆ ಕ್ರೌರ್ಯ ನಿಯಂತ್ರಣ ಕಾಯಿದೆ ಪ್ರಕಾರ ‘ಪ್ರಾಣಿಗಳಿಗೆ ಹಿಂಸೆ ನೀಡಿದ ಆರೋಪದಲ್ಲಿ 10 ದಿನಗಳ ಜೈಲುವಾಸ ಮತ್ತು ಮೂರು ಸಾವಿರ ದಂಢ ವಿಧಿಸಲಾಗಿದೆ. ಎಎಚ್ ಕಾಶಿಕರ್ ಎಂಬುವವರು ನೀಡಿರುವ ದೂರನ್ನು ವಿಚಾರಣೆ ನಡೆಸಿದ ಕೋರ್ಟ್ ಈ ಮಹತ್ವದ ತೀರ್ಪನ್ನು ನೀಡಿದೆ.
ಜೀವನಕ್ಕಾಗಿ ಗೋವುಗಳನ್ನು ಆಶ್ರಯಿಸಿರುವ ವ್ಯಕ್ತಿಯ ಅವುಗಳಿಗೆ ಸೂಕ್ತ ರಕ್ಷಣೆ ನೀಡದಿರುವ ಕುರಿತು 2013ರಲ್ಲೇ ದೂರು ದಾಖಲಿಸಲಾಗಿತ್ತು. ಗೋವುಗಳನ್ನು ಸಾಕಿದ ಗೋಪಾಲ ಪುಲ್ಸುಂಗೆ ಅವರ ನಿತ್ಯ ಗೋವುಗಳನ್ನು ಪಾದಚಾರಿ ಮಾರ್ಗದಲ್ಲಿ ಕಟ್ಟುತ್ತಿದ್ದರು. ಅಲ್ಲದೇ ಮಳೆಯಲ್ಲೂ ಅವುಗಳನ್ನು ಅಲ್ಲಿಯೇ ನಿಲ್ಲಿಸುತ್ತಿದ್ದರು. ಇದರಿಂದ ಗೋವುಗಳಿಗೆ ತೀವ್ರ ಹಿಂಸೆಯಾಗುತ್ತಿದೆ ಎಂದು ದೂರು ನೀಡಲಾಗಿತ್ತು. ಈ ಕುರಿತು ನಾಲ್ಕು ಸಾಕ್ಷಿಗಳನ್ನು ಪಡೆದಿರುವ ಕೋರ್ಟ್ ಆರೋಪ ಸಾಬೀತಾಗಿದೆ ಎಂದು ತಿಳಿಸಿದೆ.
2013 ಜೂನ್ 28ರಂದು 28 ಗೋವುಗಳನ್ನು ಕಾಲಾಚೌಕಿ ಪ್ರದೇಶದ ಮೆಟ್ರೋ ಪಾಲಿಟಿಯನ್ ರೈಲು ಸೇತುವೆ ಬಳಿ ಕಟ್ಟಿದ್ದರು. ಅವುಗಳಿಗೆ ಯಾವುದೇ ರಕ್ಷಣೆ ನೀಡಿಲ್ಲ. ಇದರಿಂದ ಗೋವುಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಪೀಪಲ್ ಆನಿಮಲ್ ಆರ್ಗನೈಸೇಷನ್ ಸಂಸ್ಥೆಯ ಚೇತನ ಶರ್ಮಾ ಅವರು ಇವರ ವಿರುದ್ಧ ದೂರು ನೀಡಿದ್ದರು.
Leave A Reply