ದೇಶದ ಅನ್ನದಾತರಿಗೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ

ದೆಹಲಿ: ಉತ್ತರ ಪ್ರದೇಶ, ಪಂಜಾಬ್, ರಾಜಸ್ಥಾನ, ಮಹಾರಾಷ್ಟ್ರ ಸೇರಿ ದೇಶದ ನಾನಾ ರಾಜ್ಯಗಳಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಭರ್ಜರಿ ಕೊಡುಗೆ ನೀಡಿದೆ. ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ನೀಡಬೇಕಿದ್ದ ಬಾಕಿ ಹಣವನ್ನು ನೀಡಲು ವಿಳಂಬ ಮಾಡುತ್ತಿರುವುದಕ್ಕೆ ಕಂಪನಿಗಳಿಗೆ 1.500 ಕೋಟಿ ಉತ್ಪಾದನೆ ಆಧಾರಿತ ಸಬ್ಸಿಡಿ ಘೋಷಣೆ ಮಾಡಿದ್ದ ಕೇಂದ್ರ ಸರ್ಕಾರ, ಇದೀಗ 7 ಸಾವಿರ ಕೋಟಿ ವಿಶೇಷ ಅನುದಾನ ನೀಡಲು ನಿರ್ಧರಿಸಿದೆ ಎಂಬ ಸಿಹಿ ಸುದ್ದಿ ಹೊರ ಬಿದ್ದಿದೆ.
ಸಕ್ಕರೆ ದರ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಕ್ಕರೆ ಕಾರ್ಖಾನೆಗಳು ದೇಶಾದ್ಯಂತ ರೈತರಿಗೆ 22 ಸಾವಿರ ಕೋಟಿಗೂ ರೂಪಾಯಿಗೂ ಹೆಚ್ಚು ಬಾಕಿ ಪಾವತಿಸಬೇಕಿದೆ. ಉತ್ತರ ಪ್ರದೇಶ ರಾಜ್ಯದಲ್ಲೊಂದೆ 12 ಸಾವಿರ ಕಬ್ಬಿನ ಹಣದ ಕೋಟಿ ಬಾಕಿ ಇದೆ. ಆದ್ದರಿಂದ ರೈತರ ಬಾಕಿ ಹಣ ಪಾವತಿಸಲು ಕಾರ್ಖಾನೆಗಳಿಗೆ ಕೇಂದ್ರ ಸರ್ಕಾರ ನೆರವಿಗೆ ಬಂದಿದ್ದು, ಸಕ್ಕರೆ ಕಾರ್ಖಾನೆಗಳಿಗೆ ಏಳು ಸಾವಿರ ವಿಶೇಷ ಕೊಡುಗೆ ಘೋಷಿಸುವ ಮೂಲಕ ಭರ್ಜರಿ ಕೊಡುಗೆ ನೀಡಿದೆ.
ಕಬ್ಬು ಬೆಳೆಗಾರರಿಗೆ ಸೂಕ್ತ ನ್ಯಾಯ ದೊರಕಲಿ ಎಂಬ ಉದ್ದೇಶದಿಂದ ಕೇಂದ್ರ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ರೈತರ ನೆರವಿಗೆ ಬಂದಿದೆ. ಕಬ್ಬಿನ ಬೆಳೆಯ ನಾನಾ ರೀತಿಯ ಲಾಭಗಳನ್ನು ಪಡೆಯಲು ಯೋಜನೆ ರೂಪಿಸುತ್ತಿದೆ. ಕಬ್ಬಿನ ಕಾರ್ಖಾನೆಗಳ ಸಮಸ್ಯೆಗೆ ಸ್ಪಂದಿಸಲು ನಿರ್ಧರಿಸಿದ್ದು, ಎಥೆನಾಲ್ ಉತ್ಪಾದನೆ ಹೆಚ್ಚಿಸಲು ಮತ್ತು ತತ್ಸಬಂಧ ಘಟಕಗಳ ವಿಸ್ತರಣೆಗೆ 4,500 ಕೋಟಿ ಸಾಲದ ಮೇಲಿನ ಬಡ್ಡಿ ಶೇ.6ರಷ್ಟು ಸಬ್ಸಿಡಿ ನೀಡುವ ಪ್ರಸ್ತಾಪ ಮಂಡಿಸಿದ್ದು, ಸಬ್ಸಿಡಿ ಘೋಷಣೆಯಾದರೆ, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಮಸ್ಯೆ ತಕ್ಕ ಮಟ್ಟಿಗೆ ಸುಧಾರಿಸಲಿದ್ದು,ಕಬ್ಬು ಬೆಳೆಗಾರರಿಗೆ ಅನುಕೂಲವಾಗಲಿದೆ.
Leave A Reply