ಬಿಎಸ್ ಎಫ್ ದಾಳಿಗೆ ಪತರಗುಟ್ಟಿದ ಪಾಕ್, ಸೌಹಾರ್ದತೆ ಕಾಯ್ದುಕೊಳ್ಳುತ್ತೇನೆ ಎಂದು ಭರವಸೆ

ದೆಹಲಿ: ಪಾಕಿಸ್ತಾನ ತನ್ನ ಹಳೇ ಚಾಳಿ ಮುಂದುವರಿಸಿದ್ದು, ಭಾರತದ ಗಡಿಯಲ್ಲಿ ತನ್ನ ಅಪ್ರಚೋಧಿತ ದಾಳಿ ಮಾಡುತ್ತಾ ಪದೇ ಪದೆ ಭಾರತೀಯ ಯೋಧರನ್ನು ಕೆಣಕುವ ದುಸ್ಸಾಹಸಕ್ಕೆ ಕೈ ಹಾಕುತ್ತಿದೆ. ಕಳೆದ ಎರಡು ದಿನದ ಹಿಂದೆ ಪಾಕಿಸ್ತಾನದ ಅಪ್ರಚೋಧಿತ ದಾಳಿಯಿಂದ ಭಾರತದ ಇಬ್ಬರು ಬಿಎಸ್ ಎಫ್ ಯೋಧರು ಮೃತಪಟ್ಟಿದ್ದರು. ಪಾಕಿಸ್ತಾನದ ಈ ಪುಂಡಾಟಕ್ಕೆ ಗಡಿ ಭದ್ರತಾ ಪಡೆ ತೀಕ್ಷ್ಣ ಎಚ್ಚರಿಕೆಯನ್ನು ನೀಡಿದ್ದು, ಕದನ ವಿರಾಮ ನಿಲ್ಲಿಸದಿದ್ದರೇ ಪ್ರತಿಕಾರ ತೀರಿಸಿಕೊಳ್ಳಬೇಕಾಗುತ್ತದೆ ಎಂಬ ಕಟ್ಟೆಚ್ಚರ ನೀಡಿದೆ. ಅಲ್ಲದೇ ಸೋಮವಾರ ಬಿಎಸ್ ಎಫ್ ನಡೆಸಿದ ಪ್ರತಿದಾಳಿ ತಡೆಯದೇ ಶಾಂತಿ ಮಾತುಕತೆಗೆ ಒಪ್ಪಿ, ಬೀಳಿ ಧ್ವಜ ಪ್ರದರ್ಶಿಸಿ, ಶರಣಾಗಿದೆ.
ಸೋಮವಾರ ಗಡಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ಸೈನ್ಯದ ರೇಂಜರ್ ಗಳ ಮಧ್ಯೆ ನಡೆದ ಪೂರ್ವ ನಿರ್ಧರಿತವಲ್ಲದ ಧ್ವಜ ಸಭೆಯಲ್ಲಿ ಈ ಎಚ್ಚರಿಕೆ ನೀಡಿದ್ದು, ಸಭೆಯಲ್ಲಿ ಎರಡು ಪಡೆಗಳು ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡಿಕೊಳ್ಳಲು ನಿರ್ಧಾರ ಮಾಡಿದೆ.
ನಾಲ್ಕು ದಿನದಿಂದ ಗಡಿ ಗ್ರಾಮಗಳ ಮೇಲೆ ಪಾಕಿಸ್ತಾನದ ನಡೆಸುತ್ತಿದ್ದ ಅಪ್ರಚೋದಿತ ದಾಳಿಯಿಂದ ಕುಪಿತಗೊಂಡಿದ್ದ ಭಾರತದ ಗಡಿ ಭದ್ರತಾ ಪಡೆ, ಪ್ರತಿಕಾರವಾಗಿ ಪಾಕಿಸ್ತಾನದ ಠಾಣೆಗಳ ಮೇಲೆ ಮೋರ್ಟರ್ ಶೆಲ್ ಗಳಿಂದ ದಾಳಿ ನಡೆಸಿತ್ತು. ಭಾರತದ ದಾಳಿಗೆ ಕಂಗೆಟ್ಟ ಪಾಕಿಸ್ತಾನದ ರೆಂಜರ್ ಗಳು ಬಿಳಿ ಬಾವುಟ ಪ್ರದರ್ಶಿಸಿ ಕದನ ವಿರಾಮಕ್ಕೆ ಕೋರಿ, ಶಿರಬಾಗಿದ್ದವು. ಪಾಕಿಸ್ತಾನ ಮನವಿಗೆ ಪ್ರತಿಕ್ರಿಯಿಸಿದ ಭಾರತ ‘ ಅಕ್ಟ್ರಾಯ ಗಡಿ ಹೊರ ಠಾಣೆ ಎದುರು ಸಾಯಂಕಾಲ 5.30ಕ್ಕೆ ಬಿಎಸ್ ಎಫ್ ಪಾಕ್ ರೇಂಜರ್ ಗಳ ಮಧ್ಯೆ ಕಮಾಂಡರ್ ಗಳ ಮಟ್ಟದ ಸಭೆ ನಡೆಯಿತು. ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳಬೇಕು ಇಲ್ಲಿದ್ದಿದ್ದರೇ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂಬ ಸಂದೇಶವನ್ನು ಭಾರತದ ಅಧಿಕಾರಿಗಳು ನೀಡಿದ್ದಾರೆ.
Leave A Reply