ಮುಘಲ ಸಾರೈ ರೈಲು ನಿಲ್ದಾಣಕ್ಕೆ ದೀನದಯಾಳ ಉಪಾದ್ಯಯ ಹೆಸರು ನಾಮಕರಣ
ಲಖನೌ: ದೇಶದಲ್ಲಿ ಜನಸಂಘದ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿ, ಭಾರತೀಯ ಜನತಾ ಪಕ್ಷದಂತ ರಾಷ್ಟ್ರಭಕ್ತರ, ಅಭಿವೃದ್ಧಿಯ ದೂರದೃಷ್ಟಿಯನ್ನು ಹೊಂದಿರುವ ಪಕ್ಷದ ಹುಟ್ಟಿಗೆ ಕಾರಣಿಕರ್ತರಾದ ದೀನ ದಯಾಳ ಉಪಾದ್ಯಯ ಅವರ ಹೆಸರನ್ನು ಉತ್ತರ ಪ್ರದೇಶದ ಮುಘಲ ಸಾರೈ ನಿಲ್ದಾಣಕ್ಕೆ ಮರುನಾಮಕರಣ ಮಾಡಲಾಗಿದೆ. ಮುಘಲಸಾರೈ ರೈಲು ನಿಲ್ದಾಣಕ್ಕೆ ಜನಸಂಘದ ಮುಖಂಡರಾಗಿದ್ದ ಪಂಡಿತ ದೀನದಯಾಳ ಉಪಾದ್ಯಯ ಅವರ ಹೆಸರನ್ನು ನಾಮಕರಣ ಮಾಡುವ ಕುರಿತು ಜೂನ್ 4ರಂದು ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಜನಸಂಘದ ಮುಖಂಡರಾಗಿದ್ದ ಪಂಡಿತ ದೀನದಯಾಳ ಉಪಾದ್ಯಯ ಅವರು 1968 ಫೆಬ್ರವರಿ 11 ರಂದು ನಿಗೂಡವಾಗಿ ನಿಧನ ಹೊಂದಿದ್ದರು. ಅವರ ಮೃತ ದೇಹ ಮುಘಲ ಸಾರೈ ರೈಲು ನಿಲ್ದಾಣದಲ್ಲಿ ದೊರೆತಿತ್ತು. 2017ರಲ್ಲಿ ಉತ್ತರ ಪ್ರದೇಶ ಸರ್ಕಾರ ಚಂದೌಲಿ ಜಿಲ್ಲೆಯಲ್ಲಿರುವ ಮುಘಲಸಾರೈ ರೈಲು ನಿಲ್ದಾಣದ ಹೆಸರು ಬದಲಾಯಿಸಿ, ಉಪಾದ್ಯಯ ಹೆಸರು ನಾಮಕರಣ ಮಾಡಲು ಸಚಿವ ಸಂಪುಟ ಸಭೆ ಒಪ್ಪಿಗೆ ಪಡೆದು, ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಕಳುಹಿಸಲಾಗಿತ್ತು.
ಮುಘಲಸಾರೈ ಮಾಜಿ ಪ್ರಧಾನಿ ದಿವಗಂತ ಲಾಲ ಬಹುದ್ದೂರ ಶಾಸ್ತ್ರಿ ಅವರ ಜನ್ಮಸ್ಥಳ. ಬ್ರಿಟೀಷರ ಕಾಲದಲ್ಲೇ ಈ ಠಾಣೆ ನಿರ್ಮಿಸಲಾಗಿದೆ. ದೇಶದ ಅತ್ಯಂತ ಜನಸಂದಣಿ ಹೊಂದಿರುವ ಠಾಣೆಗಳಲ್ಲಿ ಇದು ಒಂದು. ದೆಹಲಿ ಮತ್ತು ಹೌವ್ರಾ ಮಧ್ಯೆ ಇರುವ ಪ್ರಮುಖ ಠಾಣೆಯಾಗಿದೆ.
Leave A Reply