ಬಯಲಾಗುತ್ತಿದೆ ಭೀಮಾಕೋರೆಗಾಂವ್ ಗಲಭೆ ಹುನ್ನಾರ: ಮಾವೋವಾದಿಗಳ ಪರ ಒಲವು ಇರುವ ಮೂವರ ಬಂಧನ
ದೆಹಲಿ: ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ನಲ್ಲಿ ವಿಜಯೋತ್ಸವ ಕಾರ್ಯಕ್ರಮದ ವೇಳೆ ನಡೆದ ಗಲಭೆ ಪ್ರಕರಣದ ಬೆನ್ನು ಹತ್ತಿರುವ ಪೊಲೀಸರು ಕಾರಣ ಯಾರು ಎಂಬ ಮಾತಿಗೆ ತಕ್ಕ ಉತ್ತರವನ್ನು ಹುಡುಕುತ್ತಿದ್ದಾರೆ. ಗಲಭೆ ಕುರಿತು ದೇಶಾದ್ಯಂತ ಬಿಜೆಪಿ ವಿರುದ್ಧ ಜನರನ್ನು ಎತ್ತಿಕಟ್ಟುವ ಹುನ್ನಾರವನ್ನು ನಡೆಸಿದ್ದ ತುಕ್ಡೆ, ತುಕ್ಡೆ ಗ್ಯಾಂಗ್ ಮತ್ತು ಅಜಾದಿ ಗ್ಯಾಂಗ್ ಮತ್ತು ಮಾವೋವಾದಿಗಳ ಬೆಂಬಲಿಗರಿಗೆ ತಕ್ಕ ಉತ್ತರ ದೊರೆತಿದೆ. ಆದರೆ ಇದೀಗ ಗಲಭೆಗೆ ಕಾರಣರಾದವರೂ ಎಂಬ ಆರೋಪದ ಮೇಲೆ ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿರುವ ಮೂವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಗಲಭೆಗೆ ಕಾರಣರಾಗಿದ್ದಾರೆ ಎಂಬ ಆರೋಪದ ಮೇಲೆ ದೆಹಲಿಯ ಜೆಎನ್ ಯು ವಿದ್ಯಾರ್ಥಿ ರೋನಾ ಜಾಕೋಬ್ ವಿಲ್ಸನ್, ದೆಹಲಿಯ ಅಲುಮ್ನಸ್, ಮುಂಬೈಯ ದಲಿತ ಮುಖಂಡ ಸುದೀರ್ ದಾವಲೆ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಇವರೆಲ್ಲರೂ ಮಾವೋವಾದಿಗಳ ಕುರಿತು ಸಿಂಪತಿ ಹೊಂದಿದವರಾಗಿದ್ದು, ಗಲಭೆ ನಡೆಯುವ ಮುಂಚೆ ನಡೆದ ಮಾವೋವಾದಿಗಳ ಬೆಂಬಲಿತ ಸಂಘವಾದ ಎಲ್ಗರ್ ಪರಿಷದ್ ನ ಸಭೆಯಲ್ಲಿ ಈ ಮೂವರು ಭಾಗಿಯಾಗಿದ್ದರು ಎಂಬ ಆರೋಪ ಇವರ ಮೇಲಿದೆ.
2018ರ ಡಿಸೆಂಬರ್ ನಲ್ಲಿ ನಡೆದ ಎಲ್ಗರ್ ಪರಿಷದ್ ನಲ್ಲಿ ಗಲಭೆಗೆ ಸಂಚು ರೂಪಿಸಲಾಗಿತ್ತು. ಭೀಮಾಕೋರೆಗಾಂವ್ ವಿಜಯೋತ್ಸವದಲ್ಲಿ ಎಲ್ಗರ್ ಪರಿಷದ್ ಸದಸ್ಯರು ನಡೆಸಿದ್ದ ಪ್ರಚೋಧನಾಕಾರಿ ಭಾಷಣವೇ ಗಲಭೆಗೆ ಕಾರಣ ಎಂಬ ದೃಷ್ಟಿಯಲ್ಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
Leave A Reply