• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಅಡುಗೆ-ಆಹಾರ ಅಭಿಪ್ರಾಯ ಸುದ್ದಿ 

9ನೇ ತರಗತಿಯ ಮಕ್ಕಳಿಗೆ ಮಸೀದಿ, ಚರ್ಚ್ ಗೆ ಹೋಗಿ ಅಧ್ಯಯನ ಮಾಡಿ ಎಂದು ಪಾಠ!

Hanumantha Kamath Posted On June 6, 2018
0


0
Shares
  • Share On Facebook
  • Tweet It

ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ರಾಜ್ಯ ಸರಕಾರ ಶಿಕ್ಷಣದ ವಿಷಯದಲ್ಲಿ ಗೊಂದಲವನ್ನು ಉಂಟುಮಾಡಿದೆ. ಕೇಳಿದ್ರೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಅದು ಹಿಂದಿನ ರಾಜ್ಯ ಸರಕಾರ ಮಾಡಿದ್ದು ಎನ್ನುತ್ತಿದ್ದಾರೆ. ಅವರು ಏನು ಹೇಳಿದ್ರು ವಿಷಯ ಮಾತ್ರ ಮುಂದೆ ವಿವಾದವನ್ನು ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಧರ್ಮವನ್ನು ಒಡೆಯುವುದು, ಅಲ್ಪಸಂಖ್ಯಾತರ ಒಲೈಕೆ ಮಾಡುವುದು, ಸರಕಾರಿ ಶಾಲೆಯಿಂದ ಟ್ರಿಪ್ ಆಯೋಜಿಸುವಾಗ ಕೆಲವು ಮಕ್ಕಳನ್ನು ಮಾತ್ರ ಕರೆದುಕೊಂಡು ಹೋಗುವುದು, ಶಾದಿ ಭಾಗ್ಯ ಹೀಗೆ ಮಾಡಿ ಕಳೆದ ಬಾರಿ ತನ್ನ ಕಾಲ ಮೇಲೆ ಚಪ್ಪಡಿ ಎಳೆದುಕೊಂಡ ರಾಜ್ಯದಲ್ಲಿದ್ದ ಕಾಂಗ್ರೆಸ್ ಸರಕಾರ ಆವಾಗಲೇ ಒಂಭತ್ತನೇ ತರಗತಿಯ ಮಕ್ಕಳ ಪಠ್ಯಪುಸ್ತಕದಲ್ಲಿ ಹೀಗೆ ಮಾಡಬಹುದು ಎಂದು ಯೋಚಿಸಿತ್ತು.

ಪಠ್ಯಪುಸ್ತಕ ಎಂದರೆ ಮ್ಯಾಗಝೀನ್ ಅಲ್ಲ.

ಒಂಭತ್ತನೆಯ ತರಗತಿ ಎಂದರೆ ಸುಮಾರು 14 ವರ್ಷ ವಯಸ್ಸು. ಮನಸ್ಸು ಹೊಸತನ್ನು, ಗೊತ್ತಿಲ್ಲದನ್ನು ಕಲಿಯಲು ಹಾತೊರೆಯುವ ಕಾಲ. ನಮ್ಮ ರಾಜ್ಯ ಸರಕಾರ ನೇಮಿಸಿದ್ದ ಪ್ರೌಢಶಾಲಾ ಪಠ್ಯಪುಸ್ತಕ ರಚನಾ ಮಂಡಳಿಯ ಬುದ್ಧಿಜೀವಿಗಳು ಒಂಭತ್ತನೆಯ ತರಗತಿಯ ಮಕ್ಕಳಿಗೆ ಹೊಸ ಕೆಲಸವೊಂದನ್ನು ನೀಡಿದ್ದಾರೆ. ಅದೇನೆಂದರೆ ನಿಮ್ಮ ಹತ್ತಿರದ ಮಸೀದಿ ಮತ್ತು ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಹೋಗಿ ಅಲ್ಲಿ ನಡೆಯುವ ವಿಧಿ ವಿಧಾನವನ್ನು ಕಲಿತು ಬನ್ನಿ ಎನ್ನುವುದು.
ಒಂಭತ್ತನೆಯ ತರಗತಿಯ ಸಾಮಾಜಿಕ ವಿಜ್ಞಾನದ ಮೊದಲ ಅಧ್ಯಾಯದ ವಿಷಯವೇ ಇಸ್ಲಾಂ ಮತ್ತು ಕ್ರೈಸ್ತ ಮತ. ಈ ಮತಗಳೇನು, ಇದನ್ನು ಯಾರು ಸ್ಥಾಪಿಸಿದ್ದು, ಯಾಕೆ ಸ್ಥಾಪಿಸಿದ್ದು, ಎಲ್ಲಿ ಸ್ಥಾಪಿಸಿದ್ದು ಹೀಗೆ ವಿವರವಾಗಿ ಮಾಹಿತಿ ಕೊಡಲಾಗಿದೆ. ಒಂಭತ್ತನೆ ತರಗತಿಯ ಮಕ್ಕಳ ಪಠ್ಯಪುಸ್ತಕದಲ್ಲಿ ಈ ವಿಷಯ ಇರುವುದರಿಂದ ಇದು ಕೇವಲ ಕೇವಲ ಮಾಹಿತಿ ಅಲ್ಲ. ಬರಿ ಮಾಹಿತಿ ಆದರೆ ಬೇಕಾದರೆ ಓದುವುದು, ಬೇಡದಿದ್ದರೆ ಪಕ್ಕಕ್ಕೆ ಇಡುವುದು ಮಾಡಬಹುದಿತ್ತು. ಆದರೆ ಇದು ಹಾಗಲ್ಲ. ಪಠ್ಯಪುಸ್ತಕ ಎಂದರೆ ಅದು ಕರಪತ್ರ ಅಲ್ಲ. ಯಾವುದೋ ಒಂದು ಧರ್ಮಕ್ಕೆ ಸಂಬಂಧಪಟ್ಟ ಮ್ಯಾಗಝೀನ್ ಅಲ್ಲ. ಇದನ್ನು ಮಕ್ಕಳು ಕಡ್ಡಾಯವಾಗಿ ಓದಲೇಬೇಕು. ಓದಿದರೆ ಸಾಲಲ್ಲ. ಅದನ್ನು ಪರೀಕ್ಷೆಯಲ್ಲಿ ಬರೆಯಬೇಕು. ಉತ್ತಮ ಅಂಕಗಳನ್ನು ಪಡೆಯಬೇಕು. ಈ ಪಠ್ಯಪುಸ್ತಕ ರಚಿಸಿದವರು ಕೇವಲ ಮಾಹಿತಿ ಕೊಟ್ಟು ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಬರೆಯುವುದಕ್ಕಾಗಿ ಮಾತ್ರ ಒಂಭತ್ತನೆಯ ಮಕ್ಕಳನ್ನು ಬಳಸಿಲ್ಲ. ಇದರೊಂದಿಗೆ ಒಂಭತ್ತನೆಯ ತರಗತಿಯ ಮಕ್ಕಳಿಗೆ ಕ್ರೈಸ್ತ ಮತ್ತು ಇಸ್ಲಾಂ ಧರ್ಮ ಸರಿಯಾಗಿ ಮನಸ್ಸಿಗೆ ಹೋಗಲಿ ಮತ್ತು ಅವರಿಗೆ ಆ ಧರ್ಮದ ಬಗ್ಗೆ ಆಸಕ್ತಿ ಮೂಡಲಿ ಎನ್ನುವ ಕಾರಣಕ್ಕೆ ಇನ್ನೊಂದು ತಂತ್ರವನ್ನು ಪಠ್ಯಪುಸ್ತಕ ರಚಿಸಿದವರು ಹೂಡಿದ್ದಾರೆ. ಅದೇನೆಂದರೆ “ಮಕ್ಕಳೇ, ನೀವು ವಾಸಿಸುವ ಪ್ರದೇಶದ ಹತ್ತಿರದಲ್ಲಿರುವ ಮಸೀದಿ ಮತ್ತು ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿ” ಎಂದು ಹೇಳಲಾಗಿದೆ. ಅಷ್ಟೇ ಅಲ್ಲ ಕ್ರೈಸ್ತ ಮತ್ತು ಇಸ್ಲಾಂ ಧರ್ಮದ ಧಾರ್ಮಿಕ ವಿಧಿವಿಧಾನಗಳನ್ನು ಅಧ್ಯಯನ ಮಾಡಿ ಬರೆಯಿರಿ ಎಂದು ಹೇಳಲಾಗಿದೆ. ಇದಕ್ಕಾಗಿ ಶಿಕ್ಷಕರ ನೆರವನ್ನು ಪಡೆಯಿರಿ ಎನ್ನಲಾಗಿದೆ. ಈಗ ಉದ್ಭವಿಸಿರುವ ಪ್ರಶ್ನೆ ಎಂದರೆ ಒಂಭತ್ತನೆ ತರಗತಿಯ ಸಾಮಾಜಿಕ ವಿಜ್ಞಾನ ಪಠ್ಯದ ಇತಿಹಾಸದ ಅಧ್ಯಾಯದಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಹೋಗಿ ಅಲ್ಲಿನ ವಿಧಿವಿಧಾನಗಳನ್ನು ನೋಡಿ ಅಭ್ಯಸಿಸಿ ಎಂದರೆ ಏನರ್ಥ?

ಬುದ್ಧಿಜೀವಿಗಳ ಉದ್ದೇಶ ಈಡೇರುತ್ತಾ.

ಇದು ಪರಸ್ಪರರ ಧರ್ಮಗಳನ್ನು ಅರಿಯುವ ಪ್ರಯತ್ನ ಎಂದು ಎಡಪಕ್ಷಗಳು ಈ ನಡೆಯನ್ನು ಬೆಂಬಲಿಸಿವೆ. ಒಂಭತ್ತನೆಯ ತರಗತಿಯ ಮಕ್ಕಳಿಗೆ ಯಾವುದೋ ಪರಕೀಯ ಮತ ಪ್ರಚಾರ ಮಾಡುವ ಪ್ರಾರ್ಥನಾ ಮಂದಿರಗಳಿಗೆ ಕರೆದುಕೊಂಡು ಹೋಗಿ ಅಲ್ಲಿಂದಲೇ ಮತಾಂತರ ಪ್ರಕ್ರಿಯೆಗಳಿಗೆ ಚಾಲನೆ ಕೊಡುವ ಕುತಂತ್ರ ಎನ್ನುವುದು ಸಂಘ ಪರಿವಾರದ ಅಂಗಸಂಸ್ಥೆಗಳ ಅಭಿಪ್ರಾಯ. ಆ ಅಧ್ಯಾಯದಲ್ಲಿ ಕೇವಲ ಇಸ್ಲಾಂ, ಕ್ರೈಸ್ತ ಮತಗಳನ್ನು ಕಲಿಯಲು ಉತ್ತೇಜಿಸುವ ಮೂಲಕ ಪಠ್ಯರಚನಾಕಾರರು ಸಮಾಜವನ್ನು ಒಡೆಯುವ ತಂತ್ರ ಮಾಡುತ್ತಿದ್ದಾರೆ ಎನ್ನುವುದು ಕೇಸರಿ ಪಡೆಯ ನಿಲುವು. ಆ ಅಧ್ಯಾಯವನ್ನು ಹಿಂದಕ್ಕೆ ಪಡೆಯಬೇಕೆಂದು ಭಜರಂಗದಳ ಪ್ರಾಂತ್ಯ ಸಹಸಂಚಾಲಕ ರಘು ಸಕಲೇಶಪುರ ಅವರು ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಒಂದು ವೇಳೆ ಮಕ್ಕಳಿಗೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಬಗ್ಗೆ ತಿಳಿಸಲೇಬೇಕು ಎಂದಾದಲ್ಲಿ ಅದರೊಂದಿಗೆ ಸನಾತನ ಹಿಂದೂ ಧರ್ಮದ ಬಗ್ಗೆ ಕೂಡ ಹೇಳಬಹುದಿತ್ತು. ಹಾಗೆ ಹೇಳದೇ ಕೇವಲ ಇಸ್ಲಾಂ, ಕ್ರೈಸ್ತ ಧರ್ಮದ ಬಗ್ಗೆ ಮಾತ್ರ ಹೇಳುವ ಮೂಲಕ ಅವರ ರೀತಿ ರಿವಾಜುಗಳನ್ನು ಅಧ್ಯಯನ ಮಾಡಿ ಎಂದು ತಿಳಿಸುವ ಮೂಲಕ ಅವರ ಧಾರ್ಮಿಕ ಕೇಂದ್ರಗಳಿಗೆ ಭೇಟಿ ಕೊಡಿ ಎನ್ನುವ ಪಠ್ಯ ಬೇಕಾ ಎನ್ನುವುದು ಜನಸಾಮಾನ್ಯರ ಪ್ರಶ್ನೆ.

0
Shares
  • Share On Facebook
  • Tweet It




Trending Now
ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
Hanumantha Kamath August 20, 2025
ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
Hanumantha Kamath August 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!
    • ಕೆಂಪುಕಲ್ಲು ಓವರ್ ಲೋಡ್ ಸಾಗಾಟ! ಕೇಸ್ ದಾಖಲು
    • ಮುಂದಿನ ಚುನಾವಣೆಯಲ್ಲಿಯೂ ನನ್ನ ಕೈ ಹಿಡಿಯಿರಿ: ವರುಣಾದಲ್ಲಿ ಸಿಎಂ ಮನವಿ!
    • ಮಂಗಳೂರು: ಈಜುತ್ತಿರುವಾಗಲೇ ಹೃದಯಾಘಾತ: ಮೃತಪಟ್ಟ ಕೋಚ್!
    • ಅಗಸ್ಟ್ 16 ರಂದು ಧರ್ಮಸ್ಥಳ ಚಲೋ ಅಭಿಯಾನ - ಶಾಸಕ ವಿಶ್ವನಾಥ!
    • ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ:- ಶಾಸಕ ಕಾಮತ್
    • ಎದೆಹಾಲು ದಾನದಲ್ಲಿ ದಾಖಲೆ ಬರೆದ ತಮಿಳುನಾಡಿನ ಮಹಿಳೆ!
  • Popular Posts

    • 1
      ಚುನಾವಣೆ ಜಂಟಿ ಎದುರಿಸಿದ ಠಾಕ್ರೆ ಸಹೋದರರಿಗೆ ಶೂನ್ಯ ಸಂಪಾದನೆಯಿಂದ ತೀವ್ರ ಮುಖಭಂಗ!
    • 2
      ಧರ್ಮಸ್ಥಳದ ವಿರುದ್ಧದ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೊತ್ತು, ಸಾಕ್ಷ್ಯವಿಲ್ಲ ಎಂದ ಹೆಗ್ಗಡೆ!
    • 3
      ಇನ್ನು ವಿಮಾನದಂತೆಯೆ ರೈಲಿನಲ್ಲಿಯೂ ಲಗೇಜ್ ತೂಕದ ಪರಿಶೀಲನೆ! ಪ್ರಯಾಣಿಕರು ತಿಳಿದುಕೊಳ್ಳಬೇಕಾದ ವಿಷಯಗಳು...
    • 4
      ಧರ್ಮಸ್ಥಳದ ಷಡ್ಯಂತ್ರದ ಹಿಂದೆ ಸಸಿಕಾಂತ್ ಸೆಂಥಿಲ್ ಕೈವಾಡ ಎಂದ ಜನಾರ್ಧನ ರೆಡ್ಡಿ!

  • Privacy Policy
  • Contact
© Tulunadu Infomedia.

Press enter/return to begin your search