ನರೇಂದ್ರ ಮೋದಿ ಅವರ ಸ್ಟಾರ್ಟ್ ಅಪ್ ಯೋಜನೆ ಉದ್ಯಮಿಗಳಿಗೆ ಹೇಗೆ ಅನುಕೂಲವಾಗುತ್ತಿದೆ ಗೊತ್ತಾ?
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ದೇಶದ ಉದ್ಯಮ, ದೇಸೀಯ ಉತ್ಪಾದನೆ, ಉದ್ಯೋಗ ಸೃಷ್ಟಿ ಸೇರಿ ಹಲವು ಕ್ರಾಂತಿಕಾರ ಬದಲಾವಣೆಗಳಾಗುತ್ತಿವೆ.
ಇದೇ ದಿಸೆಯಲ್ಲಿ ದೇಶದ ಉದ್ಯಮಗಳ ಜತೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಾತನಾಡಿದ್ದು, ದೇಶದ ಬದಲಾವಣೆಯಲ್ಲಿ ಸ್ಟಾರ್ಟ್ ಅಪ್ ಗಳ ಪಾತ್ರ ಮಹತ್ತರವಾಗಿದ್ದು, ಭಾರತ ರೂಪಾಂತರವಾಗುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದ್ದಾರೆ.
ಪ್ರಸ್ತುತ ಕೇಂದ್ರ ಸರ್ಕಾರ ಭಾರತದಲ್ಲಿ ಸ್ಟಾರ್ಟ್ ಅಪ್ ಕೈಗೊಳ್ಳಲು ಹಣಕಾಸು ಸೇರಿ ಹಲವು ವಿಷಯಗಳಲ್ಲಿ ಪ್ರೊತ್ಸಾಹ ನೀಡುತ್ತಿದೆ. ಇದರ ಭಾಗವಾಗಿ ದೇಶದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 10 ಸಾವಿರ ಕೋಟಿ ರೂಪಾಯಿ ನಿಧಿ ಹೂಡಲಾಗಿದೆ. ಇದನ್ನು ಒಂದು ಲಕ್ಷ ಕೋಟಿ ರೂಪಾಯಿಗೆ ವಿಸ್ತರಣೆ ಮಾಡುವ ಗುರಿ ಇದೆ ಎಂದು ಪ್ರಧಾನಿ ತಿಳಿಸಿದ್ದಾರೆ.
ಮೊದಲೆಲ್ಲ ಉದ್ಯಮ ಕೈಗೊಳ್ಳುವುದು ಮಹಾನಗರ ಪ್ರದೇಶದಲ್ಲಿ ಹಾಗೂ ಇದಕ್ಕಾಗಿ ಕಠಿಣ ನಿಯಮಗಳಿದ್ದವು. ಆದರೆ ಕೇಂದ್ರ ಸರ್ಕಾರ ಸ್ಟಾರ್ಟ್ ಅಭಿವೃದ್ಧಿಯನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿದ್ದು, ಪ್ರಸ್ತುತ ಮಹಾನಗರದಲ್ಲೇ ಉದ್ಯಮ ಆರಂಭಿಸಬೇಕು ಎಂಬ ನಿಯಮವಿಲ್ಲ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಸುಮಾರು 28 ರಾಜ್ಯಗಳು ಹಾಗೂ ಆರು ಕೇಂದ್ರಾಡಳಿತ ಪ್ರದೇಶಗಳ 419 ಜಿಲ್ಲೆಗಳಲ್ಲಿ ಸ್ಟಾರ್ಟ್ ಅಪ್ ಕೈಗೊಳ್ಳಲಾಗಿದೆ. ಇದರಲ್ಲಿ ಶೇ.45ರಷ್ಟು ಜನ ಮಹಿಳೆಯರೇ ಇರುವುದು ಹೆಮ್ಮೆಯ ಸಂಗತಿಯಾಗಿದೆ. ಹೀಗೆ ಗ್ರಾಮೀಣ ಪ್ರದೇಶದಲ್ಲಿ ಒಂದು ಪುಟ್ಟ ಸ್ಟಾರ್ಟ್ ಅಪ್ ಆರಂಭವಾದರೆ ಸರಾಸರಿ 12 ಜನರಿಗೆ ಉದ್ಯೋಗ ಸಿಗುತ್ತದೆ. ಈಗಾಗಲೇ ಈ ಪರ್ವ ಆರಂಭವಾಗಿದ್ದು, ದೇಶ ರೂಪಾಂತರಗೊಳ್ಳುತ್ತಿದೆ. ಯುವಕರು ಮತ್ತಷ್ಟು ಉದ್ಯಮ ಕ್ಷೇತ್ರದಲ್ಲಿ ತೊಡಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಆದಾಗ್ಯೂ ಸ್ಟಾರ್ಟ್ ಅಪ್ ಗೆ ಮತ್ತಷ್ಟು ಉತ್ತೇಜನ ನೀಡಲು ಕೇಂದ್ರ ಸರ್ಕಾರ ಸ್ಟಾರ್ಟ್ ಅಪ್ ಇಂಡಿಯಾ ಕ್ರಿಯಾಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ ತೆರಿಗೆಯಿಂದ ವಿನಾಯಿತಿ, ನಿಯಮಗಳಲ್ಲಿ ಸಡಿಲಿಕೆ ಮಾಡುವುದು ನಮ್ಮ ಮುಂದಿನ ಗುರಿಯಾಗಿದೆ ಎಂದು ವಿವರಿಸಿದ್ದಾರೆ.
ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ಆಡಳಿತಕ್ಕೆ ಬಂದ ಮೇಲೆ ದೇಶದಲ್ಲಿ ಮಹತ್ತರ ಬದಲಾವಣೆಯಾಗುತ್ತಿದ್ದು, ಉದ್ಯಮಗಳು ಹಳ್ಳಿಗಳಿಗೂ ಕಾಲಿಡುತ್ತಿರುವುದು ಉತ್ತಮ ಬೆಳವಣಿಗೆಯಾಗಿವೆ. ಈಗಾಗಲೇ ಮೋದಿ ಆರಂಭಿಸಿದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ ಸೇರಿ ಹಲವು ಸ್ಟಾರ್ಟ್ ಅಪ್ ಗಳು ಗಮನ ಸೆಳೆದಿವೆ.
Leave A Reply