ಸೈನಿಕರ ಕುರಿತು ರಾಹುಲ್ ಗಾಂಧಿ ಹೇಳಿದ ಸುಳ್ಳು ಹೇಗೆ ಬಹಿರಂಗವಾಗಿದೆ ನೋಡಿ!
ರಾಹುಲ್ ಗಾಂಧಿ. ಈ ಮನುಷ್ಯ ನರೇಂದ್ರ ಮೋದಿ ಅವರನ್ನು ಟೀಕಿಸುವುದಕ್ಕಾಗಿಯೇ ಜನಿಸಿದ್ದಾರೆ ಎಂಬಂತೆ ಆಡುತ್ತಾರೆ. ಅದು ಯಾವುದೇ ವಿಷಯವೇ ಇರಲಿ, ಇವರು ನರೇಂದ್ರ ಮೋದಿ ಅವರನ್ನು ಟೀಕಿಸಬೇಕು. ಅದಷ್ಟೇ ಗುರಿ. ಅದಕ್ಕಾಗಿ ರಾಹುಲ್ ಗಾಂಧಿಯವರು ಎಂತಹ ಮಟ್ಟಕ್ಕಾದರೂ ತಲುಪಿಬಿಡುತ್ತಾರೆ.
ಇಂತಹ ರಾಹುಲ್ ಗಾಂಧಿ ಮಾಡಿದ ಪ್ರಮಾದವೊಂದು ಈಗ ದೇಶಾದ್ಯಂತ ಸುದ್ದಿಯಾಗಿದ್ದು, ರಾಹುಲ್ ಗಾಂಧಿ ಒಬ್ಬ ಸುಳ್ಳುಕೋರರಾಗಿ ಮಾರ್ಪಟ್ಟಿದ್ದಾರೆ. ಹೌದು, ಇತ್ತೀಚೆಗೆ ಸೈನಿಕರ ಸಮವಸ್ತ್ರ ಖರೀದಿಗೂ ಸರ್ಕಾರದ ಬಳಿ ದುಡ್ಡಿಲ್ಲ ಎಂಬ ವದಂತಿ ಹರಡಿತ್ತು.
ಆದರೆ, ಇದನ್ನು ಪರಿಶೀಲಿಸದ ಪ್ರಖಾಂಡ ಪಂಡಿತ ರಾಹುಲ್ ಗಾಂಧಿಯವರು, ಮೇಕ್ ಇನ್ ಇಂಡಿಯಾ ಎಂದರೆ ನಮ್ಮ ದೇಶದ ಸೈನಿಕರು ತಮ್ಮ ಬಟ್ಟೆಯನ್ನು ತಾವೇ ಖರೀದಿಸಬೇಕಾ ಎಂದು ಟ್ವೀಟ್ ಮಾಡಿದರು. ರಾಹುಲ್ ಗಾಂಧಿಯವರನ್ನು ನೋಡಿ ದಿಗ್ವಿಜಯ್ ಸಿಂಗ್ ಅವರು ಸಹ ಮೋದಿ ವಿರೋಧಿಸಿ ಟ್ವೀಟ್ ಮಾಡಿದರು.
ಆದರೆ ಇವರಿಬ್ಬರ ಟ್ವೀಟ್ ಸುಳ್ಳೇ ಸುಳ್ಳು ಎಂಬದು ಇಂಡಿಯಾ ಟುಡೇ ನಡೆಸಿದ ಸತ್ಯ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಹೌದು, ಸರ್ಕಾರಕ್ಕೆ ದೇಶದ ಸೈನಿಕರಿಗೆ ಸಮವಸ್ತ್ರ ಖರೀದಿಸಲು ದುಡ್ಡಿಲ್ಲವಾ ಎಂದು ಸತ್ಯದರ್ಶನ ಮಾಡಲು ಹೊರಟಿದೆ. ಆಗ ರಾಹುಲ್ ಗಾಂಧಿಯವರು ಹೇಳಿದ ವಿಚಾರದಲ್ಲಿ ಹುರುಳಿಲ್ಲ ಎಂಬುದು ಬಹಿರಂಗವಾಗಿದೆ.
ಇದಕ್ಕಾಗಿ ಇಂಡಿಯಾ ಟುಡೇ 2017ರಲ್ಲಿ ಕೇಂದ್ರ ಸರ್ಕಾರ 7ನೇ ವೇತನ ಆಯೋಗದ ಶಿಫಾರಸಿನಂತೆ ಸೈನಿಕರಿಗೆ ವೇತನ ಹೆಚ್ಚಿಸಿದೆ. ಬಜೆಟ್ಟಿನಲ್ಲೂ ಹಣ ಮೀಸಲಿಟ್ಟಿದೆ, ಅಷ್ಟೇ ಅಲ್ಲ, ಸೈನಿಕರ ಸಮವಸ್ತ್ರಕ್ಕೂ ಹಣ ಮೀಸಲಿಟ್ಟಿದೆ. ಅದೂ ಅಧಿಕಾರಿಗಳ ಹಂತದ ಸೈನಿಕರಿಗೆ ವಾರ್ಷಿಕ 20 ಸಾವಿರ ರೂಪಾಯಿ, ಹಾಗೂ ಇದಕ್ಕಿಂತ ಕೆಳಹಂತದ 10 ಸಾವಿರ ರೂಪಾಯಿ ವಾರ್ಷಿಕ ಹಣ ಸಮವಸ್ತ್ರಕ್ಕಾಗಿಯೇ ಬಿಡುಗಡೆ ಮಾಡಿದೆ ಎಂಬುದು ಬಹಿರಂಗವಾಗಿದೆ. ಆ ಮೂಲಕ ರಾಹುಲ್ ಗಾಂಧಿಯವರ ಅಚಾತುರ್ಯ ಢಾಳಾಗಿದೆ.
Leave A Reply