ಮೋದಿ ಕೊಲೆಯಾಗುತ್ತೇ, ಭಾರತದಲ್ಲಿ ಇಸ್ಲಾಂ ಧ್ವಜ ಹಾರಿವುದು ನಿಶ್ಚಿತ: ಉಗ್ರರ ಬೆದರಿಕೆ
ರಾವಲಕೋಟ್ (ಪೋಕ್): ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಹಲವು ಮಹತ್ತರ ಬದಲಾವಣೆಗಳನ್ನು ತಂದಿದ್ದಾರೆ. ವಿಶೇಷವಾಗಿ ದೇಶದ ರಕ್ಷಣೆ ಭಯೋತ್ಪಾದನೆ ತಡೆಗಟ್ಟುವಲ್ಲಿ ಅವರು ಕೈಗೊಂಡ ದಿಟ್ಟ ಕ್ರಮಗಳು ಉಗ್ರ ಹುಟ್ಟಡಗಿಸಿವೆ. ಇದೀಗ ಅದಕ್ಕಾಗಿಯೇ ಭಯೋತ್ಪಾದಕರು ಬಹಿರಂಗ ವೇದಿಕೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲೆ ಮಾಡಲಾಗುತ್ತದೆ ಎಂದು ಬೆದರಿಕೆ ಹಾಕುತ್ತಿದ್ದಾರೆ.
2008ರ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್, ಭಯೋತ್ಪಾದಕ ಸಂಘಟನೆ ಜಮಾತ್ ಉದ್ ದಾವಾ ಹಫೀಜ್ ಪಾಕಿಸ್ತಾನದ ರಾವಲ್ ಕೋಟ್ ನಲ್ಲಿ ನಡೆದ ಪ್ರಚಾರಸಭೆಯಲ್ಲಿ ಬಹಿರಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲೆ ಮಾಡಲಾಗುತ್ತದೆ. ಭಾರತ ಛಿದ್ರ ಛಿದ್ರವಾಗುತ್ತದೆ ಎಂದು ಹೇಳಿದ್ದಾರೆ.
ಇಸ್ಲಾಂ ಧ್ವಜ ಭಾರತ ಮತ್ತು ಅಮೆರಿಕಾದಲ್ಲಿ ಹಾರಲಿದೆ. ನರೇಂದ್ರ ಮೋದಿ ಕೊಲೆಯಾಗುತ್ತಾರೆ. ಭಾರತ ಮತ್ತು ಇಸ್ರೇಲ್ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಈ ದೇಶಗಳ ವಿರುದ್ಧ ಹೋರಾಡಲು ಹೆಚ್ಚು ಹೆಚ್ಚು ಭಯೋತ್ಪಾದಕರನ್ನು ನಾವು ಸಿದ್ಧಪಡಿಸುತ್ತೇವೆ ಎಂದು ಉಗ್ರ ಸಂಘಟನೆ ಜಮಾತ್ ಉದ್ ದಾವಾದ ಹಿರಿಯ ಮುಖಂಡ ಮೌಲಾನಾ ಬಷೀರ್ ಅಹ್ಮದ್ ಕಾಖಿ ಬಹಿರಂಗ ವೇದಿಕೆಯಲ್ಲಿ ಬೆದರಿಕೆ ಒಡ್ಡಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪೂಂಚ್ ಜಿಲ್ಲೆಯ ರಾವಲಕೋಟ್ ಪ್ರದೇಶದಲ್ಲಿ ನಡೆದ ರಮ್ಜಾನ್ ತಿಂಗಳ ವಿಶೇಷ ಪ್ರಾರ್ಥನೆ ವೇಳೆ ಈ ಭಾಷಣ ಮಾಡಿದ್ದಾನೆ. ರಮ್ಜಾನ್ ಜಿಹಾದ್ ಆರಂಭಿಸಲು ಉತ್ತಮ ತಿಂಗಳು. ರಮ್ಜಾನ್ ವೇಳೆ ಧರ್ಮಕ್ಕಾಗಿ ಹೋರಾಡಿ ಹುತಾತ್ಮರಾದರೆ ಸ್ವರ್ಗಕ್ಕೆ ಸೇರಲಾಗುತ್ತದೆ ಎಂದು ಬೊಗಳೆ ಬಿಟ್ಟಿದ್ದಾನೆ.
ನಾವು ಕಾಶ್ಮೀರದಲ್ಲಿ ಜಿಹಾದ್ ಬಲಗೊಳಿಸಬೇಕಿದೆ. ಕಾಶ್ಮೀರದಲ್ಲಿ ಇಸ್ಲಾಂ ಧ್ವಜ ಹಾರಿಸಬೇಕಿದೆ. ಅದಕ್ಕಾಗಿ ಪಾಕ್ ಆಕ್ರಮಿತ ಕಾಶ್ಮೀರದ ಜನರು ತಮ್ಮ ಮಕ್ಕಳನ್ನು ಜಿಹಾದ್ ಕಾರ್ಯಕ್ಕೆ ಕಳುಹಿಸಿಕೊಡಬೇಕು. ರಮ್ಜಾನ್ ತಿಂಗಳಲ್ಲಿ ಜಿಹಾದ್ ಬಲಗೊಳಿಸಲು ಉಗ್ರ ಸಂಘಟನೆ ಜಮಾತ್ ಉದ್ ದಾವಾಕ್ಕೆ ಆಹಾರ, ಹಣ ದಾನ ನೀಡಬೇಕು ಎಂದು ಮನವಿ ಮಾಡಿದ್ದಾನೆ.
Leave A Reply