ಪ್ರತ್ಯೇಕತಾವಾದಿಗಳಿಗೆ ಪಾಕಿಸ್ತಾನದ ಬೆಂಬಲ, ಬಯಲಾದ ಪಾಕ್ ಹೈ ಕಮಿಷನರ್ ಇಫ್ತಾರ್ ಕೂಟದ ಮಾತುಕತೆ

ಇಸ್ಲಾಮಾಬಾದ್: ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕ ಮಾಡುವ ಎಲ್ಲ ಪ್ರಯತ್ನಗಳನ್ನು ಯಾವುದೇ ಮಾರ್ಗದಲ್ಲಾದರೂ ಮಾಡಿಯೇ ಸಿದ್ಧ ಎಂಬಂತೆ ಪಾಕಿಸ್ತಾನ ವರ್ತಿಸುತ್ತಿರುವುದು ಪದೇ ಪದೆ ಸಾಬೀತಾಗುತ್ತಿದೆ. ನಿತ್ಯ ಕಾಶ್ಮೀರದಲ್ಲಿ ದಾಳಿ ನಡೆಸುವುದು, ಪ್ರತ್ಯೇಕತವಾದಿಗಳಿಗೆ ಬೆಂಬಲಿಸುವುದು ಸೇರಿ ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ಇದೀಗ ಪಾಕಿಸ್ತಾನದ ಹೈ ಕಮಿಷನರ್ ನಡೆಸಿರುವ ರಮ್ಜಾನ್ ಮಾಸದ ಇಫ್ತಿಯಾರ್ ಕೂಟದಲ್ಲಿ ಪಾಕಿಸ್ತಾನದ ಪ್ರತ್ಯೇಕತವಾದಿಗಳು ಭಾಗವಹಿಸಿದ್ದು, ಪಾಕಿಸ್ತಾನ ಸರ್ಕಾರವೇ ಪ್ರತ್ಯೇಕತವಾದಿಗಳ ಹೋರಾಟಕ್ಕೆ ಸಾಥ್ ನೀಡುತ್ತಿದೆ ಎಂಬುದಕ್ಕೆ ಸಾಕ್ಷ್ಯ ದೊರಕಿದೆ.
ಕಾಶ್ಮೀರದ ಹುರಿಯತ್ ಮುಖಂಡರು ಪಾಕಿಸ್ತಾನದ ಹೈ ಕಮಿಷನರ್ ಕಚೇರಿ ಏರ್ಪಡಿಸಿದ ಇಫ್ತಿಯಾರ್ ಕೂಟದ ಚಿತ್ರಗಳು ರಾಷ್ಟ್ರೀಯ ವಾಹಿನಿಯೊಂದಕ್ಕೆ ದೊರಕ್ಕಿದ್ದು, ಇಫ್ತಿಯಾರ ಕೂಟದ ನಂತರ ಹುರಿಯತ್ ಮುಖಂಡರು ಮತ್ತು ಪಾಕಿಸ್ತಾನದ ಹೈ ಕಮಿಷನರ್ ಸೋಹೇಲ್ ಮೆಹೆಮೂದ್ ಜೊತೆ ಪ್ರತ್ಯೇಕ ಸಭೆ ನಡೆಸಿರುವ ಚಿತ್ರಗಳು ಬಹಿರಂಗವಾಗಿದ್ದು, ಈ ಸಭೆಯಲ್ಲಿ ಕಾಶ್ಮೀರದ ಪ್ರತ್ಯೇಕತೆ ಮತ್ತು ಪ್ರತ್ಯೇಕತೆ ಹೋರಾಟಕ್ಕೆ ಪಾಕಿಸ್ತಾನದ ಬೆಂಬಲದ ಕುರಿತು ಚರ್ಚಿ ನಡೆಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಿದ್ದಿದೆ. ಈ ಮೂಲಕ ಪಾಕಿಸ್ತಾನ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಕೃತ್ಯಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಮತ್ತೊಮ್ಮೆ ಬಹಿರಂಗವಾಗಿದೆ.
ಪಾಕ್ ಹೈಕಮಿಷನ್ ಸೋಹೈಲ್ ಮಹಮ್ಮದ ಪಕ್ಕದಲ್ಲೇ ಹಿಲಾಲ್ ವಾರ್ ಕಾಣಿಸಿಕೊಂಡಿದ್ದು, ಈತ ಹುರಿಯತ್ ಮುಖಂಡ ಮಿರ್ವಾಜ್ ಫಾರೂಕ್ ಹತ್ತಿರದ ಸಂಬಂಧಿ. ಅಲ್ಲದೇ ಸಭೆಯಲ್ಲಿ ಶಾಹಿ ಇಮಾಮ್ ಬುಕಾರಿ ಸಹ ಕಾಣಿಸಿಕೊಂಡಿದ್ದು, ದೇಶವಿರೋಧಿಗಳ ಇಡೀ ಗುಂಪು ಸಭೆಯಲ್ಲಿ ಭಾಗವಹಿಸಿದ್ದು, ಅದಕ್ಕೆ ಪಾಕ್ ಹೈ ಕಮಿಷನರ್ ಸಾಥ್ ನೀಡಿದ್ದು ಮತ್ತೊಂದು ದೊಡ್ಡ ಸಂಚಿನ ಭಾಗವಾಗಿರುವ ಅನುಮಾನಗಳು ಮೂಡಿವೆ.
Leave A Reply