ಅರ್ಜುನ್ ಅಮೃತಾ ಮದುವೆ ಹೇಗಿತ್ತು? ಇಲ್ಲಿದೆ ಅರ್ಜುನ್ ಅಮೃತಾಳ ಜಾತಕ!
Posted On July 21, 2017
ನಾಯಕಿ ನಾಯಕನ ಬಗ್ಗೆ ಅಪಾರ್ಥ ಮಾಡಿಕೊಳ್ಳುವುದರ ಮೂಲಕ ಸಿನಿಮಾಗೆ ಚಾಲನೆ ಸಿಗುತ್ತದೆ. ಹೀಗೆ ಮೆಲ್ಲನೆ ಸಾಗುವ ಸಿನಿಮಾ ಬೇರೆ ಬೇರೆ ವಿಷಯಗಳನ್ನು ಮೆಲುಕು ಹಾಕುವುದರ ಮೂಲಕ ಪ್ರೇಕಕ್ಷರಲ್ಲಿ ಕುತೂಹಲವನ್ನು ಹೆಚ್ಚು ಮಾಡುತ್ತಾ ಸಾಗುತ್ತದೆ. ಸಿನಿಮಾದಲ್ಲಿ ಕಾಮಿಡಿ, ಬೇಜಾರು, ಖುಷಿ ಎಲ್ಲದರ ಮಿಶ್ರಣವನ್ನು ಸರಿಯಾಗಿ ಒಂದು ಪ್ಯಾಕೇಜ್ ನಲ್ಲಿ ಕೊಡುವುದರ ಮೂಲಕ ಚಿತ್ರದ ನಿರ್ದೇಶಕ ರಘು ಶೆಟ್ಟಿ ಯಶಸ್ವಿಯಾಗಿದ್ದಾರೆ. ಮದುವೆ ಹೇಗೆ ನಡೆಯುತ್ತದೆ? ಯಾರಾ ಮದುವೆ ನಡೆಯುತ್ತದೆ? ಅರ್ಜುನ್ ಅಮೃತಾಳನ್ನು ಮದುವೆ ಆಗುವನೆ ಎಂಬುವ ಕುತೂಹಲವೇ ಚಿತ್ರದ ಕಥಾವಸ್ತು!

ಕೇವಲ ಕಾಮಿಡಿ ಮಾತ್ರವಲ್ಲ ಯಾವುದೇ ಪಾತ್ರವನ್ನು ಸರಿಯಾಗಿ ನಿಭಾಯಿಸಬಲ್ಲೇ ಎಂದು ನಮ್ಮ ತುಳು ಚಿತ್ರ ರಂಗದ ಕುಸುಲ್ದರಸೆ ನವೀನ್ ಡಿ ಪಡೀಲ್ ಏಸ ಚಿತ್ರದ ನಂತರ ಮತ್ತ್ಮೊಮ್ಮೆ ಸಾಬೀತು ಪಡಿಸಿದ್ದಾರೆ. ಚಿತ್ರದಲ್ಲಿ ಭೋಜ್ ರಾಜ್ ವಾಮಂಜೂರ್, ಅರವಿಂದ್ ಬೋಳಾರ್, ಸತೀಶ್ ಬಂದಾಳೆ, ಉಮೇಶ್ ಮಿಜಾರ್ ಅವರ ಕಾಮಿಡಿ ಚೆನ್ನಾಗಿ ಮೂಡಿ ಬಂದಿದ್ದು ನಿಮ್ಮನ್ನು ನಗಿಸುವುದರಲ್ಲಿ ಎರಡು ಮಾತಿಲ್ಲ. ಚಿತ್ರದ ನಾಯಕ ಅನೂಪ್ ಸಾಗರ್ ನಾಯಕಿ ಆರಾಧ್ಯ ಶೆಟ್ಟಿ ಚೆನ್ನಾಗಿ ನಟಿಸಿದ್ದು ತುಳು ಸಿನಿಮಾ ರಂಗದ ಭರವಸೆಯ ಜೋಡಿ ಎಂದು ಭೇಷ್ ಅನ್ನಿಸಿ ಕೊಂಡಿದ್ದಾರೆ.

ಚಿತ್ರದ ಹಾಡುಗಳು ಹಾಗೂ ಅದರ ಚಿತ್ರೀಕರಣ ಬಹಳಷ್ಟು ಸುಂದರವಾಗಿ ಮೂಡಿಬಂದಿದ್ದು ಚಿತ್ರದ ಕ್ಯಾಮರ ತಂಡದ ಕೆಲಸ ಮೆಚ್ಚಲೇ ಬೇಕು. ಚಿತ್ರದಲ್ಲಿ ನಾಯಕನ ಸ್ನೇಹಿತನಾಗಿ ಕಾಣಿಸಿಕೊಳ್ಳುವ ಅನುರಾಗ್ ಬಂಗೇರ ಉತ್ತಮವಾಗಿ ಅಭಿನಯಿಸಿದ್ದು ತಮ್ಮ ಸಿನಿಮಾ ರಂಗದ ಪ್ರಯಾಣದ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡಿದ್ದಾರೆ. ನಾಯಕ-ನಾಯಕಿಯ ಹಾಗೂ ಚಿತ್ರದ ಎಲ್ಲ ಕಲಾವಿದರ ಉಡುಪುಗಳ ವೈವಸ್ಥೆ ಹಾಗೂ ಅದರ ಅಂದ-ಚೆಂದವನ್ನು ಡಿಸೈನರ್ ಮಂತ್ರದ ಜೀವನ ಗಟ್ಟಿ ಹೆಚ್ಚಿಸಿಕೊಟ್ಟಿದಾರೆ.

ಒಟ್ಟಿನಲ್ಲಿ ಕಾಮಿಡಿ ಮಾತ್ರವಲ್ಲದೆ ಸಂತೋಷ, ಬೇಜಾರು, ಸಂಭ್ರವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ. ತುಳು ಚಿತ್ರರಂಗದಲ್ಲಿ ಕಾಮಿಡಿ ಮಾತ್ರವಲ್ಲದೆ ಇಂತಹ ಸಿನಿಮಾಗಳು ಹೆಚ್ಚಾಗಿ ಬರಬೇಕು ಎನ್ನುವುದು ಸಿನಿಪ್ರಿಯರ ಅನಿಸಿಕೆ. ಪ್ರೇಕ್ಷಕರ ಪ್ರಕಾರ ಸಿನಿಮಾ ಸ್ವಲ್ಪ ಮಟ್ಟಿಗೆ ನಿಧಾನವಾದರು ಸಿನಿಮಾದಲ್ಲಿ ಹೊಸತನವಿದೆ ಅನ್ನುವ ಮಾತು ಕೇಳಿ ಬರುತ್ತಿದೆ. ಅರ್ಜುನ್-ಅಮೃತಾ ಮದುವೆ ನೋಡಲು ಹೋದವರಿಗೆ ಯಾರಾ ಮದುವೆ ನೋಡಲು ಸಿಗುತ್ತದೆ ಅನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್! ಅಂತು-ಇಂತು ಇಷ್ಟು ದಿನದಿಂದ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದ ಚಿತ್ರ ಇಂದು ತೆರೆ ಕಂಡಿದೆ.
- Advertisement -
Trending Now
“ನಾನು ಪಾಳೇಗಾರ ಅಲ್ಲ, ಕ್ಷೇತ್ರದ ಕಾವಲುಗಾರ!“ -ವೇದವ್ಯಾಸ ಕಾಮತ್ ಕಿಡಿ
February 17, 2025
Leave A Reply