ನರೇಂದ್ರ ಮೋದಿ ನಾಯಕತ್ವಕ್ಕೆ ಮತ್ತೊಂದು ಗರಿ, ಭಾರತವೇ ಜಗತ್ತಿಗೆ ಸ್ಫೂರ್ತಿ ಎಂದ ವಿಶ್ವಸಂಸ್ಥೆ ಮುಖ್ಯಸ್ಥ!
ನ್ಯೂಯಾರ್ಕ್: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಕೀರ್ತಿಪತಾಕೆ ದಿನೇದಿನೆ ಬಾನೆತ್ತರಕ್ಕೆ ಹಾರುತ್ತಿದೆ. ಇದಕ್ಕೆ ಜಿಎಸ್‌ಟಿ, ನೋಟು ನಿಷೇ‘ ಸೇರಿ ಹಲವು ವಿಷಯಗಳಲ್ಲಿ ವಿಶ್ವಸಂಸ್ಥೆ ಸೇರಿ ಹಲವು ದೇಶಗಳು, ಸಂಸ್ಥೆಗಳು ಭಾರತವನ್ನು ಹೊಗಳುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಇಂತಹ ವಿಶ್ವನಾಯಕ ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತದ ಮುಕುಟಕ್ಕೆ ಮತ್ತೊಂದು ಗರಿ ಲಭಿಸಿದ್ದುಘ, ಅಂತಾರಾಷ್ಟ್ರೀಯ ಸಮುದಾಯಕ್ಕೆ ‘ಭಾರತವೇ ಸ್ಫೂರ್ತಿ ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಅಂಟೋನಿಯೋ ಗುಟೆರೆಸ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ವಿಶ್ವಸಂಸ್ಥೆ ರಾಯಭಾರಿಗಳು ಹಾಗೂ ಅಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ನಾಯಕತ್ವ, ಅಭಿವೃದ್ಧಿಗಾಗಿ ವಿಶ್ವಸಂಸ್ಥೆ ಜತೆ ಹೊಂದಿರುವ ಸಹಭಾಗಿತ್ವ ಹಾಗೂ ದಕ್ಷಿಣ-ದಕ್ಷಿಣ ಸಹಕಾರ ಸೇರಿ ಹಲವು ವಿಷಯಗಳಲ್ಲಿ ಭಾರತ ಹೊಂದಿರುವ ಬದ್ಧತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪ್ರೇರಣಾದಾಯಕ ಎಂದು ವರ್ಣಿಸಿದ್ದಾರೆ.
ಭಾರತ ವಿಶ್ವಸಂಸ್ಥೆ ಜತೆ ಹೊಂದಿರುವ ಸಹಭಾಗಿತ್ವ ಹಾಗೂ ಬಹುಪಕ್ಷೀಯತೆ ಕುರಿತು ‘ಭಾರತಕ್ಕಿರುವ ಬದ್ಧತೆ ಅಪಾರವಾದುದು. ಜಾಗತಿಕ ವಿಷಯಗಳಲ್ಲಿ ಭಾರತ ತೋರಿಸುತ್ತಿರುವ ಚಟುವಟಿಕೆ ಹಾಗೂ ಬದ್ಧತೆ ಉತ್ತಮವಾಗಿದೆ ಎಂದು ವಿಶ್ಲೇಷಿಸಿದ್ದಾರೆ.
ಸ್ಥಿರ ಅಭಿವೃದ್ಧಿ ಗುರಿ ಮುಟ್ಟುವಲ್ಲಿ ಭಾರತ ವಹಿಸಿದ ಪಾತ್ರ ಪ್ರಮುಖವಾದುದು. ಆರಂಭದಲ್ಲಿ ಈ ಗುರಿಗೆ ತಕ್ಕ ಪ್ರಯತ್ನ ನಡೆಯುತ್ತಿರಲಿಲ್ಲಘ. ಆದರೆ ಭಾರತ ಅಭಿವೃದ್ಧಿಗಾಗಿ ನಡೆಸುತ್ತಿರುವ ಪ್ರಯತ್ನ, ಶ್ರಮ ಹಾಗೂ ಅದರ ಮುಂದಾಲೋಚನೆಯು ಗುರಿ ಮುಟ್ಟಲು ಸೂರ್ತಿಯಾಯಿತು. ಹಾಗಾಗಿ ಭಾರತ ನಮಗೆಲ್ಲ ಪ್ರಮುಖ ಪ್ರೇರಣೆ ಎಂದು ಬಣ್ಣಿಸಿದ್ದಾರೆ.
Leave A Reply