ಇಸ್ಲಾಂ ಕುರಿತು ಜಮ್ಮುವಿನಲ್ಲಿ ಈ ಹಿಂದೂವಿಗೆ ಇರುವ ಸಹಿಷ್ಣುತೆ ಕುರಿತು ಯಾರೂ ಏಕೆ ಸುದ್ದಿ ಮಾಡಲ್ಲ?
ಶ್ರೀನಗರ: ದೇಶದಲ್ಲಿ ಹಿಂದೂಗಳು ಎಂದರೆ ಅಸಹಿಷ್ಣುಗಳು, ಪರ ಧರ್ಮೀಯರನ್ನು ಸಹಿಸುವುದಿಲ್ಲ ಎಂದೇ ಕೆಲವರು ಬಿಂಬಿಸುತ್ತಾರೆ. ದೇಶ, ರಾಷ್ಟ್ರೀಯತೆ ಹಾಗೂ ಪರಧರ್ಮೀಯರ ಸೈರಣೆ ಮಾಡುವುದು ಹಿಂದೂಗಳಿಗೆ ಬರುವುದಿಲ್ಲ ಎಂಬ ಮಿಥ್ಯವನ್ನು ಬಿತ್ತುತ್ತಿದ್ದಾರೆ. ಆದರೆ ಅವರಿಗೇನು ಗೊತ್ತು ಹಿಂದೂಗಳು ಇತಿಹಾಸದಲ್ಲಿ ಎಂದಿಗೂ ಪರ ಧರ್ಮೀಯರ ಮೇಲೆ ದಾಳಿ ಮಾಡಿಲ್ಲ ಎಂದು? ಅಥವಾ ಗೊತ್ತಿದ್ದರೂ ಹಿಂದೂಗಳನ್ನು ಕೆಟ್ಟದಾಗಿ ಬಿಂಬಿಸುತ್ತಾರೇನೋ?
ಆದರೂ ಹಿಂದೂಗಳು ಮಾತ್ರ ಪರ ಧರ್ಮೀಯರನ್ನು, ಪರ ಧರ್ಮವನ್ನು ಗೌರವಿಸುತ್ತಲೇ ಬಂದಿದ್ದಾರೆ. ಈಗ ಹಿಂದೂಗಳ ಇಂಥ ಧರ್ಮ ಸಹಿಷ್ಣುಗೆ ಜಮ್ಮುವಿನಲ್ಲಿ ಜೀವಂತ ನಿದರ್ಶನವೊಂದು ದೊರೆತಿದೆ.
ಹೌದು, ಜಮ್ಮುವಿನಲ್ಲಿ ವಾಸಿಸುತ್ತಿರುವ ಸುರೇಶ್ ಅಬ್ರೋಲ್ ಅವರು ಇಸ್ಲಾಂ ಧರ್ಮದ ಮೇಲಿರುವ ಗೌರವದ ಹಿನ್ನೆಲೆಯಲ್ಲಿ ಇಸ್ಲಾಂ ಹಾಗೂ ಕುರ್ರಾನ್ ಕುರಿತ ಪುರಾತನ ಹಸ್ತಪ್ರತಿ ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಜಮ್ಮು-ಕಾಶ್ಮೀರ ಸಾಂಸ್ಕೃತಿಕ ಅಕಾಡೆಮಿ ಆಯೋಜಿಸಿದ್ದ ಇಸ್ಲಾಮಿಕ್ ವಸ್ತು ಪ್ರದರ್ಶನದಲ್ಲಿ ಈ ಹಿಂದೂ ಸಂಗ್ರಹಿಸಿರುವ ಹಸ್ತಪ್ರತಿಗಳು ಎಲ್ಲರ ಗಮನ ಸೆಳೆದಿವೆ.
ಸುರೇಶ್ ಅಬ್ರೋಲ್ ಬರೋಬ್ಬರಿ ಒಂದು ಶತಮಾನದ ಹಿಂದಿನ ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದು, ಇಸ್ಲಾಂ ಧರ್ಮದ ಪ್ರಾಮುಖ್ಯತೆ, ಇಸ್ಲಾಮಿನ ಸಂದೇಶ ಸಾರುವ ಹಲವು ಹಸ್ತಪ್ರತಿಗಳನ್ನು ಸಂಗ್ರಹಿಸಿದ್ದಾರೆ.
ಆದರೆ ದೇಶದಲ್ಲಿ ಹಿಂದೂಗಳು ಗೋರಕ್ಷಣೆಗೆ ಮುಂದಾದರೆ ಅದನ್ನು ದೌರ್ಜನ್ಯ ಎನ್ನುತ್ತಾರೆ, ಹಿಂದುತ್ವ ಎಂದರೆ ಬೇರೆ ಧರ್ಮದ ಬಗ್ಗೆ ಸೈರಣೆ ಇಲ್ಲದವರು ಎಂದು ಸುಖಾಸುಮ್ಮನೆ ಆರೋಪ ಮಾಡುತ್ತಾರೆ. ಆದರೆ ಇದೇ ಹಿಂದೂವೊಬ್ಬ ಇಸ್ಲಾಂ ಧರ್ಮದ ಮೇಲಿನ ಗೌರವದಿಂದ ಹೀಗೆ ನೂರಾರು ವರ್ಷಗಳ ಹಸ್ತಪ್ರತಿ ಸಂಗ್ರಹಿಸಿ ಸೌಹಾರ್ದತೆ ಮೆರೆದಿರುವ ಕುರಿತು ಬಹುತೇಕ ಮಾಧ್ಯಮಗಳು ವರದಿ ಮಾಡಲ್ಲ. ಯಾವ ಜಾತ್ಯತೀತ, ಪ್ರಗತಿಪರರೂ ಇದನ್ನು ಶ್ಲಾಘಿಸುವುದಿಲ್ಲ.
Leave A Reply