ಮಹಾಘಟ್ ಬಂಧನ್ ಗೆ ಬಿತ್ತು ಬಾರಿ ಹೊಡೆತ, ಪಶ್ಚಿಮ ಬಂಗಾಳದಿಂದಲೇ ಬಿಜೆಪಿ ವಿರೋಧಿ ಪಕ್ಷಗಳಿಗೆ ಶಾಕ್
ಕೊಲ್ಕತ್ತಾ: ದೇಶಾದ್ಯಂತ ಬಿಜೆಪಿ ಅಶ್ವಮೇದದ ವಿಜಯಯಾತ್ರೆಯನ್ನು ಕಟ್ಟಿಹಾಕಲು ಹೊರಟಿರುವ ಕಾಂಗ್ರೆಸ್ ಸೇರಿ ದೇಶದ ಎಲ್ಲ ಮೋದಿ ವಿರೋಧಿ ಪಕ್ಷಗಳು ಸೇರಿ ನಿರ್ಮಿಸುತ್ತಿರುವ ಮಹಾಘಟ್ ಬಂಧನ್ ಗೆ ಅಂಬೇಗಾಲಿಡುವ ಹೊತ್ತಿನಲ್ಲೇ ಬಾರಿ ಹೊಡೆತ ಬಿದ್ದಿದೆ. ಮಹಾಘಟಬಂಧನದ ಬೀಜ ಬಲಿಷ್ಠವಾಗಿ ಬೇರುರೂವಂತೆ ಮಾಡಿದ ಪಶ್ಚಿಮಬಂಗಾಳದ ಮಮತಾ ಬ್ಯಾನರ್ಜಿ ನೆಲದಲ್ಲೇ ಕಾಂಗ್ರೆಸ್, ಸಿಪಿಎಂ ಮತ್ತು ತೃಣಮೂಲ ಕಾಂಗ್ರೆಸ್ ಒಗ್ಗೂಡುವುದು ಕಷ್ಟ ಎಂಬುದನ್ನು ಸಿಪಿಎಂ, ತೃಣಮೂಲ ಕಾಂಗ್ರೆಸ್ ಸ್ಥಳೀಯ ಮುಖಂಡರೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದ ಕಾಂಗ್ರೆಸ್ ಮತ್ತು ಸಿಪಿಎಂ ರಾಜ್ಯ ಘಟಕದ ಮುಖಂಡರು 2019ರ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ತೃಣಮೂಲ ಕಾಂಗ್ರೆಸ್ ಜೊತೆ ಹೊಂದಾಣಿಕೆಯಾಗಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನುಡಿಗಳನ್ನು ಹೇಳಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿವೆ.
ಕಾಂಗ್ರೆಸ್ ಹಿರಿಯ ಮುಖಂಡ, ಪಶ್ಚಿಮ ಬಂಗಾಳ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಓಂ ಪ್ರಕಾಶ ಮಿಶ್ರಾ ‘ನಾವು ಯಾವುದೇ ಕಾರಣಕ್ಕೂ ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತವಾದದ ವಿರೋಧಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಎರಡೂ ಪಕ್ಷಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತದ ವಿರುದ್ಧ ನಿಲುವು ಹೊಂದಿವೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲಾ ಮಟ್ಟದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲೂ ತೃಣಮೂಲ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶವಿದ್ದು, ಅದು 2019ರಲ್ಲಿ ಹೊರ ಹಾಕಲು ಸಿದ್ಧರಾಗಿದ್ದಾರೆ. ಅದರೆ ಇದೇ ವೇಳೆಯಲ್ಲೇ ವಿರೋಧಿಗಳ ಜೊತೆ ಕೈ ಜೋಡಿಸುವುದು ಕಷ್ಟವಾಗುತ್ತದೆ. ಟಿಎಂಸಿ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನಿರಂತರವಾಗಿ ಹಲ್ಲೆಗಳನ್ನು ಮಾಡಿದ್ದಾರೆ. ಆ ಗಾಯಗಳೇ ಇನ್ನು ಮಾಸಿಲ್ಲ. ಅಲ್ಲದೇ ವಿನಾ ಕಾರಣ ನಮ್ಮ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿ ಕಿರುಕುಳ ನೀಡಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದಲ್ಲೂ ಘಟ್ ಬಂಧನ್ ಸಂಭವಿಸಿದರೂ ಸ್ಥಳೀಯವಾಗಿ ಯಾವುದೇ ಕಾರಣಕ್ಕೂ ಘಟ್ ಬಂಧನ್ ಸಾಧ್ಯವಿಲ್ಲ ಎಂಬುದು ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಸ್ಥಳೀಯ ಕಾರ್ಯಕರ್ತರ ಮನದಾಳ.
ಸಿಪಿಎಂ ಹಿರಿಯ ಮುಖಂಡ ಡಾ.ಫೌದ್ ಹಲೀಮ್ ಕೂಡ ತೃಣಮೂಲ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರ ಹಾಕಿದ್ದು, 2019ರಲ್ಲಿ ಎಂಥಹುದ್ದೇ ಸ್ಥಿತಿ ಬಂದರೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಜೊತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ. ನಮ್ಮ ಗುರಿಯೇ ಟಿಎಂಸಿ ಹಠಾವೋ ಬೆಂಗಾಲ ಬಚಾವೋ ಎಂದು ಹೇಳುವ ಮೂಲಕ ಮಹಾಘಟ್ ಬಂಧನದ ಕನಸಿಗೆ ಎಳ್ಳು ನೀರು ಬಿಟ್ಟಿದ್ದಾರೆ.
Leave A Reply