ರಮ್ಜಾನ್ ಕದನ ವಿರಾಮ ಘೋಷಿಸಿದರೂ ಗಡಿ ನುಸುಳಲು ಯತ್ನಿಸಿದ 6 ಉಗ್ರರು ಖಲ್ಲಾಸ್
Posted On June 10, 2018
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀದಲ್ಲಿ ಪವಿತ್ರ ರಮ್ಜಾನ್ ಮಾಸದ ನಿಮಿತ್ತ ಘೋಷಿಸಿದ್ದ ಕದನ ವಿರಾಮದ ಮಧ್ಯೆಯೂ ಭಾರತದ ಗಡಿ ನುಗ್ಗಲು ಯತ್ನಿಸಿದ ಭಯೋತ್ಪಾದಕರನ್ನು ಭಾರತೀಯ ಸೈನಿಕರು ಹೊಡೆದುರುಳಿಸುವ ಮೂಲಕ, ದೇಶವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ.
ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ ನುಸುಳುಕೋರರ ವಿರುದ್ಧ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಆರು ಜನರನ್ನು ಹೊಡೆದುರುಳಿಸಿದೆ. ಮಹತ್ವದ ಸೇನಾ ಕಾರ್ಯಾಚರಣೆ ಗಡಿ ನಿಯಂತ್ರಣ ರೇಖೆಯ ಬಳಿಕ ಕುಪ್ವಾರಾ ಜಿಲ್ಲೆಯ ಕರೆನ್ ಸೆಕ್ಟರ್ ನಲ್ಲಿ ನಡೆಸಲಾಗಿತ್ತು.
ಪವಿತ್ರ ರಮ್ಜಾನ್ ಮಾಸದ ನಿಮಿತ್ತ ಕದನ ವಿರಾಮ ಘೋಷಿಸಿದ್ದರೂ, ಉಗ್ರರು ಗಡಿ ನುಸುಳಲು ಯತ್ನಿಸಿದ್ದರಿಂದ ಸೇನಾ ಯೋಧರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಕಾರ್ಯಾಚರಣೆ ಮುಂದುವರಿಸಲಾಗಿದ ಎಂದು ತಿಳಿದು ಬಂದಿದೆ.
- Advertisement -
Leave A Reply