ರಮ್ಜಾನ್ ನಲ್ಲಿ ದೇವರ ಸಂತೋಷಕ್ಕಾಗಿ ಹೆತ್ತ ಕರುಳನ್ನೇ ಕೊಂದ
![](https://tulunadunews.com/wp-content/uploads/2018/06/ram-1.jpg)
ಜೋಧಪುರ (ರಾಜಸ್ಥಾನ): ಪವಿತ್ರ ರಮ್ಜಾನ್ ಮಾಸ ಆಚರಣೆ ವೇಳೆಯಲ್ಲಿ ದೇವರನ್ನು ಸಂಪ್ರೀತಗೊಳಿಸುವುದಕ್ಕಾಗಿ ಮುಸ್ಲಿಂ ವ್ಯಕ್ತಿಯೊಬ್ಬರ ನಾಲ್ಕು ವರ್ಷದ ಹೆಣ್ಣುಮಗುವನ್ನು ಬಲಿ ನೀಡಿದ್ದಾನೆ. ಜೋಧಪುರದ ಸಿವಾಟನ್ ಕಾ ಮೊಹಲ್ಲಾದ ನಿವಾಸಿ ನವಾಬ್ ಅಲಿ ಖುರೇಶಿ ಎಂಬಾತನೆ ಹೆತ್ತ ಮಗು ರಿಜ್ವಾನ್ ಳನ್ನು ಕೊಲೆ ಮಾಡಿದ ಆರೋಪಿ. ಮಗು ರಿಜ್ವಾನ್‌ಳನ್ನು ಮಾರುಕಟ್ಟೆಗೆ ಕರೆದೊಯ್ದ ಆತ ಅವಳಿಗೆ ಇಷ್ಟದ ತಿಂಡಿ, ತಿನಿಸು ಕೊಡಿಸಿದ್ದಾನೆ.
ರಾತ್ರಿ ಎಲ್ಲರೂ ಮಲಗಿದ ನಂತರ ಮಗುವನ್ನು ರೂಂನಿಂದ ನೆಲ ಮಹಡಿಗೆ ಕರೆದೊಯ್ದು ಶ್ಲೋಕ ಪಠಿಸುತ್ತ ಮಗಳ ಕತ್ತು ಸೀಳಿದ್ದಾನೆ. ಮಗುವನ್ನು ಕೊಲೆ ಮಾಡಿ ಬಂದು ಮಲಗಿದ್ದಾನೆ.
ಬೆಳಗ್ಗೆ ಆರೋಪಿಯ ಪತ್ನಿ ಎದ್ದು ಮಗುವಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಕೊನೆಗೆ ನೆಲಮಹಡಿಯಲ್ಲಿ ಮಗುವಿನ ಮೃತ ದೇಹ ಪತ್ತೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದಾರೆ. ಮಗುವಿನ ತಾಯಿ ಮಗುವಿನ ಕೊಲೆಯಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ತನಿಖೆ ಆರಂಭಿಸಿದ ಪೊಲೀಸರು ‘ಮನೆಗೆ ಒಳಗಿನಿಂದ ಬಾಗಿಲು ಹಾಕಿದೆ. ಆದ್ದರಿಂದ ಮನೆಯಿಂದ ಹೊರಗಿನಿಂದ ಯಾರೂ ಬರುವಂತಿಲ್ಲ. ಆದ್ದರಿಂದ ಮನೆಯವರೇ ಯಾರೋ ಕೊಲೆ ಮಾಡಿರುವುದು ದೃಡಪಟ್ಟಿದೆ. ಈ ವೇಳೆ ಮಗುವಿನ ತಂದೆಯ ಖುರೇಷಿಯನ್ನು ವಿಚಾರಣೆ ನಡೆಸಿದಾಗ, ದೇವರನ್ನು ಸಂತೃಪ್ತಿಗೊಳಿಸಲು ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾನೆ.
Leave A Reply