ಚೀನಾ ನೆಲದಲ್ಲಿ ನಿಂತು, ಅದೇ ರಾಷ್ಟ್ರಕ್ಕೆ ನರೇಂದ್ರ ಮೋದಿ ಅವರು ಹೇಗೆ ತಪರಾಕಿ ನೀಡಿದ್ದಾರೆ ನೋಡಿ!
ಶಾಂಘೈ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಇಡೀ ವಿಶ್ವದಲ್ಲೇ ಭಾರತದ ಖ್ಯಾತಿ ದ್ವಿಗುಣವಾಗುತ್ತಿದೆ. ಅದಕ್ಕೆ ಕಾರಣ ಮೋದಿ ಪ್ರಭಾವ ಹಾಗೂ ದೇಶ ಅಭಿವೃದ್ಧಿಯಾಗುತ್ತಿರುವುದೇ ಇದೆ. ಹಾಗಂತ ಎಂದಿಗೂ ನರೇಂದ್ರ ಮೋದಿ ಅವರು ವಿಶ್ವದ ಎದುರು ಕೈಚಾಚಿ ನಿಲ್ಲುವುದಾಗಲಿ, ಯಾರನ್ನೇ ಬೇಡಿಕೊಳ್ಳುವುದಾಗಲಿ ಮಾಡಿಲ್ಲ. ಇಂತಹ ಸ್ವಾಭಿಮಾನಿ ಪ್ರಧಾನಿ ಇರುವುದರಿಂದಲೇ ಭಾರತ ವಿಶ್ವವಿಖ್ಯಾತವಾಯಿತು ಎಂದರೂ ಅತಿಶಯೋಕ್ತಿಯೇನಲ್ಲ.
ಈಗ ಪ್ರಧಾನಿ ನರೇಂದ್ರ ಮೋದಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಂದು ಮಹತ್ತರ ನಿರ್ಧಾರವನ್ನು ಕೈಗೊಂಡಿದ್ದು, ಚೀನಾ ನೆಲ್ಲದಲ್ಲಿ ನಿಂತು, ಅದೇ ನೆಲದಲ್ಲಿ ಆ ರಾಷ್ಟ್ರಕ್ಕೆ ತಪರಾಕಿ ನೀಡುವ ಮೂಲಕ ನರೇಂದ್ರ ಮೋದಿ ಎಲ್ಲರ ಗಮನ ಸೆಳೆದಿದ್ದಾರೆ ಹಾಗೂ ಭಾರತದ ದೃಢ ನಿರ್ಧಾರದ ಬಗ್ಗೆ ಸಂದೇಶ ಸಾರಿದ್ದಾರೆ.
ಹೌದು, ಭಾನುವಾರವಷ್ಟೇ ಚೀನಾದ ಕಿಂಗ್ಡಾವೋದಲ್ಲಿ ನಡೆದ 18ನೇ ಶಾಂಘೈ ಸಹಕಾರ ಸಂಸ್ಥೆಯ 18ನೇ ಸಭೆಯಲ್ಲಿ ಪಾಲ್ಗೊಂಡ ನರೇಂದ್ರ ಮೋದಿ ಅವರು ಚೀನಾದ ಮಹತ್ತರ ಒಂದು ಪ್ರದೇಶ, ಒಂದು ರಸ್ತೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಎಸ್ಸಿಒ 8 ಸದಸ್ಯ ರಾಷ್ಟ್ರಗಳಲ್ಲಿ ಏಳು ರಾಷ್ಟ್ರಗಳು ಚೀನಾದ ಒಆರ್ ಒಪಿ ಯೋಜನೆಗೆ ಬೆಂಬಲೆ ಸೂಚಿಸಿವೆ. ಆದರೆ ನರೇಂದ್ರ ಮೋದಿ ಅವರು ಮಾತ್ರ ಪಾಕ್ ಆಕ್ರಮಿತ ಕಾಶ್ಮೀರ ಸೇರಿ ಭಾರತದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಲು ಅನುಮತಿ ನೀಡದೇ ಇರುವ ಮೂಲಕ ದಿಟ್ಟತನ ಮೆರೆದಿದ್ದಾರೆ.
ಹಾಗಂತ ನರೇಂದ್ರ ಮೋದಿ ಅವರೇನು ಚೀನಾದ ವಿರೋಧ ಕಟ್ಟಿಕೊಟ್ಟಿಲ್ಲ. ಬದಲಾಗಿ ಎಸ್ಸಿಒ ಸಭೆಯ ನಡುವೆಯೇ ಚೀನಾ ಜತೆ ಎರಡು ಒಪ್ಪಂದ ಮಾಡಿಕೊಂಡಿದ್ದಾರೆ. ಬ್ರಹ್ಮಪುತ್ರ ನದಿ ನೀರಿನ ದತ್ತಾಂಶ ನೀಡುವ ಹಾಗೂ ಭಾರತದಿಂದ ಚೀನಾಕ್ಕೆ ಬಾಸುಮತಿ ಅಕ್ಕಿ ಹೊರತಾದ ಅಕ್ಕಿ ರಫ್ತು ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಒಆರ್ ಒಬಿ ವಿಷಯದಲ್ಲಿ ಮಾತ್ರ ಮೋದಿ ತಮ್ಮ ಕಠಿಣ ನಿಲುವನ್ನು ಸಡಿಲಗೊಳಿಸದೆ ಹೆಮ್ಮೆ ಮೂಡಿಸಿದ್ದಾರೆ. ಅದೂ ಚೀನಾದ ನೆಲದಲ್ಲೇ ನಿಂತು, ಚೀನಾಕ್ಕೆ ತಪರಾಕಿ ನೀಡುವುದು ಎಂದರೆ ಸುಮ್ಮನೆಯಾ?
Leave A Reply