ಮೋದಿ ವಿರೋಧಿಗಳೇ ಎಸ್ಸಿ, ಎಸ್ಟಿಯವರಿಗೆ ಅಮಿತ್ ಶಾ ಎಂತಹ ಭರವಸೆ ನೀಡಿದ್ದಾರೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ಎಂದರೆ ಸಾಕು, ಇವರೆಲ್ಲ ಮೇಲ್ವರ್ಗಕ್ಕೆ ಸೇರಿದವರು, ಮೇಲ್ವರ್ಗದ ಪರ ಇರುವವರು, ಎಸ್ಸಿ, ಎಸ್ಟಿ ವಿರೋಧಿಗಳು ಎಂಬ ಮಿಥ್ಯೆ ಇದೆ ಹಾಗೂ ಅದನ್ನು ವ್ಯವಸ್ಥಿತವಾಗಿ ಕೆಲವರು ಸಾರಿಕೊಂಡು ಬರುತ್ತಿದ್ದಾರೆ.
ಆದರೆ ನರೇಂದ್ರ ಮೋದಿ ಅವರು ಮಾತ್ರ ಎಂದಿಗೂ ಜಾತಿ, ಧರ್ಮ, ಮತ ನೋಡದೆ ಎಲ್ಲರ ಏಳಿಗಾಗಿ ಹಗಲು, ರಾತ್ರಿ ಶ್ರಮಿಸುತ್ತಿದ್ದಾರೆ. ಅದು ಒಬ್ಬ ನಾಯಕನಿಗೆ ಇರಬೇಕಾದ, ಅದರಲ್ಲೂ ಭಾರತದಂತಹ ಜಾತ್ಯತೀತ ರಾಷ್ಟ್ರದಲ್ಲಿ ಒಬ್ಬ ಪ್ರಧಾನಿಗೆ ಇರಬೇಕಾದಂತಹ ಪ್ರಮುಖ ಗುಣವಾಗಿದೆ.
ಇತ್ತೀಚೆಗೆ ಎಸ್ಸಿ, ಎಸ್ಟಿ ಸಮುದಾಯದ ದೌರ್ಜನ್ಯ ವಿರೋಧ ಕಾಯಿದೆ ಜಾರಿ ಮಾಡಲು ಹೊರಟಾಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಮೋದಿ ಅವರು ಎಸ್ಸಿ, ಎಸ್ಟಿ ಕಾಯಿದೆ ದೌರ್ಬಲ್ಯಗೊಳಿಸುತ್ತಾರೆ ಎಂದೇ ಕೆಲವರು ಗುಲ್ಲೆಬ್ಬಿಸಿದ್ದರು. ಆದರೆ ಕೊನೆಗೆ ಕಾಯಿದೆ ಜಾರಿಗೆ ಸುಪ್ರೀಂ ಕೋರ್ಟೇ ಒಪ್ಪಿಗೆ ಸೂಚಿಸಿದಾಗ ಎಸ್ಸಿ, ಎಸ್ಟಿ ಸಮುದಾಯದವರು ಮೋದಿ ಕುರಿತು ನಂಬಲು ಶುರು ಮಾಡಿದರು.
ಇಂತಹ ನರೇಂದ್ರ ಮೋದಿ ಸರ್ಕಾರದ ಕುರಿತು ಅಮಿತ್ ಶಾ ಅವರು ಮಾತನಾಡಿದ್ದು, ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯಿದೆ ಹಾಗೂ ಮೀಸಲಾತಿಗೆ ಯಾವುದೇ ಧಕ್ಕೆಯಾಗುವುದಿಲ್ಲ. ದೇಶದಲ್ಲಿರುವ ಎಸ್ಸಿ, ಎಸ್ಟಿ ಸಮುದಾಯ ಈ ಕುರಿತು ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ ಎಂದು ಭರವಸೆ ನೀಡಿದ್ದಾರೆ. ಆ ಮೂಲಕ ಕೆಲವರು ಹಬ್ಬಿಸಿದ್ದ ಗಾಳಿ ಸುದ್ದಿಗೆ ಮಂಗಳ ಹಾಡಿದ್ದಾರೆ.
2019ರ ಚುನಾವಣೆ ಸಮೀಪಿಸುತ್ತಿರುವುದರಿಂದ ಕಾಂಗ್ರೆಸ್ ಸುಖಾಸುಮ್ಮನೆ ಗಾಳಿ ಸುದ್ದಿ ಹಬ್ಬಿಸುತ್ತಿದೆ. ಎಸ್ಸಿ, ಎಸ್ಟಿ ಕಾಯಿದೆ ದುರ್ಬಲಗೊಳಿಸುವುದು, ಮೀಸಲಾತಿ ರದ್ದುಗೊಳಿಸುವ ಕುರಿತು ಬಿಜೆಪಿ ನಿಲುವು ಹೊಂದಿದೆ ಎಂದು ಜನರನ್ನು ದಾರಿತಪ್ಪಿಸಲು ಕಾಂಗ್ರೆಸ್ ಮುಂದಾಗಿದೆ. ಆದರೆ ದೇಶದ ಎಸ್ಸಿ, ಎಸ್ಟಿ ಸಮುದಾಯದವರು ಒಂದು ನೆನಪಿಟ್ಟುಕೊಳ್ಳಿ, ಬಿಜೆಪಿ ಅಧಿಕಾರದಲ್ಲಿ ಇರುವವರೆಗೂ ಎಸ್ಸಿ, ಎಸ್ಟಿ ಕಾಯಿದೆ ಹಾಗೂ ಮೀಸಲಾತಿಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಘೋಷಿಸಿದ್ದಾರೆ.
Leave A Reply