ಭಾರತದ ವಿರುದ್ಧ ಪಾಕ್ ಸೈನ್ಯದ ಮಾರ್ಗದರ್ಶನದಲ್ಲೇ ಉಗ್ರ ಸಂಘಟನೆಗಳಾದ ಎಲ್ ಇಟಿ, ಜೆಇಎಂ, ಹಿಜ್ಬುಲ್ ಜಂಟಿ ತರಬೇತಿ?
ದೆಹಲಿ: ಭಯೋತ್ಪಾದಕ ತವರು ರಾಷ್ಟ್ರ, ಭಾರತದ ವಿರುದ್ಧ ಸದಾ ಹಲ್ಲು ಮಸೆಯುತ್ತಾ ಉಗ್ರನ್ನು ಸಾಕುತ್ತಿರುವ ಪಾಕಿಸ್ತಾನ ನಿರಂತರವಾಗಿ ಹೊಸ ಹೊಸ ಕುತಂತ್ರಗಳನ್ನು ಮಾಡುತ್ತಿದೆ. ಹೇಗಾದರೂ ಮಾಡಿ ಭಾರತವನ್ನು ಹಣಿಯಲೇ ಬೇಕು ಎಂದು ನಿರ್ಧರಿಸಿರುವ ಪಾಕಿಸ್ತಾನ ಸರ್ಕಾರ ಹಾವು ಮುಂಗೂಸಿಯಂತೆ ತಮ್ಮ ತಮ್ಮ ವೈಮನಸ್ಸಿನಿಂದ ಹೊಡೆದಾಡುತ್ತಿದ್ದ ಭಯೋತ್ಪಾದಕ ಸಂಘಟನೆಗಳಾದ ಲಷ್ಕರ್ ಇ ತಯ್ಯಬ್ಬಾ, ಜೈಷ್ ಇ ಮಹ್ಹಮದ್ಮ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ನ ಉಗ್ರರಿಗೆ ಪಾಕಿಸ್ತಾನದ ಸೈನ್ಯದ ಮಾರ್ಗದರ್ಶನದಲ್ಲೇ ತರಬೇತಿ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ತನಿಖಾ ದಳದ ವಶದಲ್ಲಿರುವ ಉಗ್ರ ಆಶಿಕ್ ಬಾಬಾ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.
ಜೈಷ್ ಇ ಮಹಮ್ಮದ್, ಲಷ್ಕರ್ ಈ ತಯ್ಯಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿ ಮೂರು ಉಗ್ರ ಸಂಘಟನೆಗಳು ಪಾಕಿಸ್ತಾನದ ಸೈನ್ಯದ ಮಾರ್ಗರ್ದಶನದಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೇ ಈ ಮೂರು ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ ಐ ಸಹ ಸಾಥ್ ನೀಡುತ್ತಿದೆ ಎಂದು ವಿಚಾರಣೆ ವೇಳೆ ಆಶಿಕ್ ಬಾಬಾ ಹೇಳಿದ್ದಾನೆ.
ಭಾರತದಲ್ಲಿ ಉಗ್ರರ ಪ್ರತಿನಿಧಿಯಾಗಿ ಉಗ್ರ ಅಬ್ದುಲ್ಲಾ ಎಂಬಾತನನ್ನು ನೇಮಕ ಮಾಡಿದ್ದು, ಆತನ ನೇತೃತ್ವದಲ್ಲೇ ಭಾರತ ವಿರೋಧಿ ಚಟುವಟಿಕೆಗಳಿಗಾಗಿ ನೇಮಿಸಲಾಗಿದೆ. ಆತ ಭಾರತದ ಗಡಿಯಲ್ಲಿ ತನ್ನ ದುಷ್ಕೃತ್ಯ ನಡೆಸಲು ಸಿದ್ಧತೆ ನಡೆಸುತ್ತಿದ್ದಾನೆ ಎಂದು ಆಶಿಕ್ ತಿಳಿಸಿದ್ದಾನೆ.
ಎಂಟು ಸೈನಿಕರನ್ನು ಬಲಿ ಪಡೆದುಕೊಂಡಿದ್ದ 2017ರ ಪುಲ್ವಾಮಾ ಪೊಲೀಸ್ ಡೇರೆಯ ಮೇಲೆ ದಾಳಿಯ ಮಾಸ್ಟರ್ ಮೈಂಡ್ ಜೈಷ್ ಎ ಮಹಮ್ಮದ್ ಸಂಘಟನೆಯ ಮುಫ್ತಿ ವಕ್ಕಾಸ್ ಎಂಬುದನ್ನು ರಾಷ್ಟ್ರಿಯ ತನಿಖಾ ದಳದ ಎದುರು ಬಾಯಿ ಬಿಟ್ಟಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿ ವರದಿ ಮಾಡಿದೆ.
Leave A Reply