ಇಸ್ಲಾಂಗೆ ಮತಾಂತರವಾಗಿದ್ದ ಆ ಮಹಿಳೆ ಮರಳಿ ಹಿಂದೂ ಧರ್ಮಕ್ಕೆ, ಬಯಲಾಯ್ತು ಲವ್ ಜಿಹಾದ್ ಕರಾಳ ಮುಖ!
ಲಖನೌ: ದೇಶದಲ್ಲಿ ಲವ್ ಜಿಹಾದ್ ನಿಂದ ಹಲವು ಹಿಂದೂ ಯುವತಿಯರು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ನರಳುತ್ತಿದ್ದಾರೆ. ಇಷ್ಟಾದರೂ ದಿನೇದಿನೆ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮುಸ್ಲಿಂ ಯುವಕರು ಪ್ರೀತಿಯ ಹೆಸರಿನಲ್ಲಿ ಹಿಂದೂ ಯುವತಿಯರಿಗೆ ಮೋಸ ಮಾಡುತ್ತಲೇ ಇದ್ದಾರೆ.
ಇದಕ್ಕೆ ಉತ್ತರ ಪ್ರದೇಶದಲ್ಲಿ ಜೀವಂತ ನಿದರ್ಶನ ಸಿಕ್ಕಿದ್ದು, ಮುಸ್ಲಿಂ ಯುವಕನನ್ನು ಪ್ರೀತಿಸಿ, ಪ್ರೀತಿಗಾಗಿಯೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ, ಈಗ ಅದು ಪ್ರೀತಿಯಲ್ಲ ಲವ್ ಜಿಹಾದ್ ಎಂದು ತಿಳಿದು ಬಳಿಕ ಈಗ ಘರ್ ವಾಪ್ಸಿ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಮರಳಿ ಬಂದಿದ್ದಾರೆ.
ಹೌದು, ಉತ್ತರಪ್ರದೇಶದ ಅಲಿಗಡದ ಅಚಲ್ ತಾಲ್ ಎಂಬಲ್ಲಿ ಮುಸ್ಲಿಂ ಯುವತಿಯೊಬ್ಬಳು ಶೊಯೆಬ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದಳು. ಮನೆಯವರನ್ನು ಎದುರು ಹಾಕಿಕೊಂಡು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದಳು. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು.
ಆದರೆ ದಿನಗಳೆದಂತೆ ಗಂಡನ ಮನೆಯವರ ಕಿರುಕುಳ ಜಾಸ್ತಿಯಾಯಿತು. ವರದಕ್ಷಿಣೆಗಾಗಿ ಪೀಡಿಸಲಾಯಿತು. ಮತ್ತೂ ಮತ್ತೊಂದು ಹೆಜ್ಜೆ ಹೋಗಿ ಸ್ವಂತ ಮಾವನೇ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ಗಂಡನೂ ತಂದೆಯನ್ನು ಬೆಂಬಲಿಸಿದ. ಇದರಿಂದ ಮಹಿಳೆ ಬೇಸತ್ತಿದ್ದಳು ಎಂದು ತಿಳಿದುಬಂದಿದೆ.
ಯಾವಾಗ ಗಂಡನ ಮನೆಯವರ ಕಿರುಕುಳ ಜಾಸ್ತಿಯಾಯಿತೋ ಮಹಿಳೆ ದೃಢ ನಿರ್ಧಾರ ಮಾಡಿ ಈಗ ಹಿಂದೂ ಮಹಾಸಭಾ ಅಚಲ್ ತಾಲ್ ನ ಆರ್ಯ ಸಮಾಜದ ಮಂದಿರದಲ್ಲಿ ಆಯೋಜಿಸಿದ್ದ ಘರ್ ವಾಪ್ಸಿ ಕಾರ್ಯಕ್ರಮದಲ್ಲಿ ಹಿಂದೂ ಧರ್ಮಕ್ಕೆ ಮರಳಿದ್ದಾರೆ. ತನ್ನ ಇಬ್ಬರು ಮಕ್ಕಳನ್ನೂ ಜತೆಗೇ ಕರೆದುಕೊಂಡು ಬಂದಿದ್ದಾಳೆ. ಆ ಮೂಲಕ ದಿಟ್ಟತನ ಮೆರೆದಿದ್ದಾಳೆ.
Leave A Reply