ಸುಬ್ರಮಣಿಯನ್ ಸ್ವಾಮಿ ಬಿಚಿಟ್ಟ ರೋಚಕ ಸತ್ಯ: ರಾಗಾಗಿಲ್ಲ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅರ್ಹತೆ?
ದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾಗಿರುವ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೂ ಸ್ಪರ್ಧಿಸುವ ಅರ್ಹತೆಯನ್ನು ಹೊಂದಿಲ್ಲ ಎಂಬ ಕಾನೂನಾತ್ಮಕ ಸತ್ಯವೊಂದನ್ನು ಬಿಜೆಪಿ ಮುಖಂಡ, ರಾಜ್ಯ ಸಭೆ ಸದಸ್ಯ ಸುಬ್ರಮಣಿಯನ್ ಸ್ವಾಮಿ ಬಿಚ್ಚಿಟ್ಟಿದ್ದಾರೆ.
ಮಹಾತ್ಮಾ ಗಾಂಧಿಜೀಯವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕೊಲೆ ಮಾಡಿದೆ ಎಂದು ಹೇಳಿಕೆ ನೀಡಿ, ಮಾನನಷ್ಟ ಮೊಕ್ಕದಮ್ಮೆ ಎದುರಿಸಲು ಕೋರ್ಟ್ ಗೆ ಹಾಜರಾಗಿರುವ ರಾಹುಲ್ ಗಾಂಧಿ ವಿರುದ್ಧ ಮಹತ್ವದ ಕಾನೂನಾತ್ಮಕವಾದ ಸತ್ಯವನ್ನು ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದು, ಐಪಿಸಿ ಸೆಕ್ಷನ್ 499 ಮತ್ತು 500 ಕ್ರಿಮಿನಲ್ ಡಿಫಮೇಷನ್ ಪ್ರಕರಣ ರಾಹುಲ್ ಗಾಂಧಿ ವಿರುದ್ಧ ಆರ್ ಎಸ್ಎಸ್ ದಾಖಲಿಸಿದೆ. ಈ ಪ್ರಕರಣದ ಕುರಿತು ರಾಷ್ಟ್ರೀಯ ವಾಹಿನಿಯೊಂದರ ಜೊತೆ ಮಾತನಾಡಿರುವ ಸುಬ್ರಮಣಿಯನ್ ಸ್ವಾಮಿ ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಜೈಲಿಗೆ ಹೋಗಬೇಕು. ಯಾವುದೇ ಆಧಾರಗಳಿಲ್ಲದೇ ಒಂದು ವ್ಯಕ್ತಿ ವಿಶೇಷವಾಗಿ ಸಂಘಟನೆಯ ವಿರುದ್ಧ ಕೊಲೆ ಆರೋಪ ಹೊರಿಸಿರುವ ರಾಹುಲ್ ಗಾಂಧಿ ಮಹತ್ತರ ತಪ್ಪು ಮಾಡಿದ್ದಾರೆ. ಈ ಕುರಿತು ಕೋರ್ಟ್ ನಲ್ಲಿ ತೀವ್ರ ವಿಚಾರಣೆ ನಡೆಸಬೇಕು. ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗದಿದ್ದರೇ ಬಂಧಿಸಿ ಕರೆದುಕೊಂಡು ಬಂದು, ಕೋರ್ಟ್ ಗೆ ಹಾಜರುಪಡಿಸಬೇಕು.
ಇಂಡಿಯನ್ ಪಿನಲ್ ಕೋಡ್ 499 ಮತ್ತು 500 ಪ್ರಕಾರ ವಿನಾಕಾರಣ ಯಾವುದೇ ದಾಖಲೆಳಿಲ್ಲದೇ, ಮಾನನಷ್ಟವಾಗುವಂತ ಆರೋಪಗಳನ್ನು ಮಾಡಿದರೆ ಅಂತಹ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಅಲ್ಲದೇ ಜೈಲು ಶಿಕ್ಷೆಯನ್ನು ಹೆಚ್ಚಿಸಲುಬಹುದು. ಒಂದು ವೇಳೆ ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣದಲ್ಲಿ ಜೈಲು ಪಾಲಾದರೆ ಅಥವಾ ದಂಡಕ್ಕೆ ಕಾರಣರಾದರೇ ಅವರಿಗೆ ಲೋಕಸಭೆ ಚುನಾವಣೆ ಸ್ಪರ್ಧಿಸುವ ಅರ್ಹತೆ ಕಳೆದುಕೊಂಡು ಬಿಡುತ್ತಾರೆ ಎಂದು ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
Leave A Reply