ಮಕ್ಕಳ ರಕ್ಷಣೆಗೆ ಮುಂದಾದ ಕೇಂದ್ರ ಸರ್ಕಾರ, ದೇಶಾದ್ಯಂತ ಸಹಾಯವಾಣಿ ವಿಸ್ತರಿಸಲು ಚಿಂತನೆ
ನರೇಂದ್ರ ಮೋದಿ ಅವರ ಸರ್ಕಾರ ರಚನೆಯಾದ ಬಳಿಕ ಮಹಿಳೆಯರು, ಹಿರಿಯರು, ಕಿರಿಯರು ಎನ್ನದೆ ಎಲ್ಲರಿಗೂ ಅನುಕೂಲವಾಗುವ ಹಾಗೆ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ರೈತರಿಗಾಗಿ ಕೃಷಿ ಸಿಂಚಾಯಿ, ಮಹಿಳೆಯರಿಗೆ ಶೌಚಾಲಯ ನಿರ್ಮಾಣ, ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ್ ಯೋಜನೆಗಳು ಸೇರಿ ಹಲವು ಯೋಜನೆ ಕಾಣಸಿಗುತ್ತವೆ.
ಇದೇ ರೀತಿಯಲ್ಲಿ ಮಕ್ಕಳಿಗಾಗಿಯೂ ಒಂದು ಯೋಜನೆ ಜಾರಿಗೊಳಿಸುವ ಕೇಂದ್ರ ಸರ್ಕಾರ, ದೇಶದ ಹಲವೆಡೆ ಮಕ್ಕಳ ಸಹಾಯವಾಣಿ ಸ್ಥಾಪಿಸಿದೆ. ಅಲ್ಲದೆ ಈಗ ಇದನ್ನು ವಿಸ್ತರಿಸಲು ಚಿಂತನೆ ನಡೆಸಿದ್ದು, ಬಾಲ ಕಾರ್ಮಿಕರ ವಿರೋಧಿ ದಿನಾಚರಣೆ ಅಂಗವಾಗಿ ಈ ಮಕ್ಕಳ ಸಹಾಯವಾಣಿ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಲು ಮುಂದಾಗಿದೆ.
ಹೌದು, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಈ ಕುರಿತು ಯೋಜನೆ ರೂಪಿಸಿದ್ದು, ದೇಶಾದ್ಯಂತ 435 ಕಡೆ ನೂತನವಾಗಿ ಮಕ್ಕಳ ಸಹಾಯವಾಣಿ ಸ್ಥಾಪಿಸುವುದಾಗಿ ಘೋಷಣೆ ಹೊರಡಿಸಿದೆ.
ಯಾವುದೇ ಮಕ್ಕಳು ತಮ್ಮನ್ನು ಒತ್ತಾಯ ಪೂರ್ವಕವಾಗಿ ಕೆಲಸ ಮಾಡಿಸುತ್ತಿದ್ದರೆ, ಯಾವುದೇ ಮಕ್ಕಳು ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ ದೂರು ನೀಡಲು ಈ ಸಹಾಯವಾಣಿ ಸಹಕಾರಿಯಾಗಲಿದ್ದು, 2014ರಿಂದ ಇದುವರೆಗೆ 1.8 ಕೋಟಿ ಕರೆಗಳು ಬಂದಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
ಒಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಸರ್ವರ ಏಳಿಗೆಗಾಗಿ ಹಲವು ಯೋಜನೆ ರೂಪಿಸುತ್ತಿದ್ದು, ನಾವೂ ಸಹ ಬಾಲ ಕಾರ್ಮಿಕರ ರಕ್ಷಣೆಗಾಗಿ ಸಹಾಯವಾಣಿ ಬಳಸೋಣ. ಆ ಮೂಲಕ ದೇಶವನ್ನು ಬಾಲ ಕಾರ್ಮಿಕ ಮುಕ್ತವನ್ನಾಗಿಸೋಣ.
Leave A Reply