ಸರ್ಕಾರದ ಬಳಿ ಸೈನಿಕರ ಬಟ್ಟೆ ಖರೀದಿಗೆ ದುಡ್ಡಿಲ್ಲ ಎಂದವರೇ ಕೇಳಿ, ಸೇನೆಗೆ ಆರು ಹೆಲಿಕಾಪ್ಟರ್ ನೀಡಲು ಅಮೆರಿಕ ಒಪ್ಪಿಗೆ!
ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಗಡಿಯಲ್ಲಿ ಸೈನಿಕರ ಆತ್ಮಸ್ಥೈರ್ಯ ಹೆಚ್ಚುತ್ತಿದೆ. ಅದರಲ್ಲೂ ಪ್ರಧಾನಿಯಂಥ ಪ್ರಧಾನಿಯೇ ದೀಪಾವಳಿಗೆ ಗಡಿ ಪ್ರದೇಶಕ್ಕೆ ಬಂದು ಸೈನಿಕರ ಜತೆ ದೀಪಾವಳಿ ಆಚರಿಸಿದರೆ ಯಾರಿಗೆ ತಾನೆ ಸ್ಫೂರ್ತಿ ಬರಲ್ಲ. ಹಾಗಂತ ಮೋದಿ ಅವರು ಬರೀ ಮಾತಿನಲ್ಲೇ ಮನೆ ಕಟ್ಟಿಲ್ಲ, ಬದಲಿಗೆ ಸೇನೆಗೆ ಆರ್ಥಿಕ ಸ್ವಾತಂತ್ರ್ಯ ನೀಡಿದ್ದಾರೆ, ಶಸ್ತ್ರಾಸ್ತ್ರ ಖರೀದಿ, ಮೇಕ್ ಇನ್ ಇಂಡಿಯಾ ಅನ್ವಯ ಶಸ್ತ್ರಾಸ್ತ್ರ ಉತ್ಪಾದನೆಗೆ ಅನುಕೂಲ ಮಾಡಿಕೊಡುವ ಮೂಲಕ ಭಾರತೀಯ ಸೇನೆಯ ಶಕ್ತಿ ದ್ವಿಗುಣಗೊಳಿಸುತ್ತಿದ್ದಾರೆ.
ಇದರ ಭಾಗವಾಗಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಮನವಿ ಮಾಡಿದ್ದು ಫಲಪ್ರದವಾಗಿದ್ದು, ಭಾರತಕ್ಕೆ ಆರು ಬೋಯಿಂಗ್ ಎಎಚ್ಇ ಅಪಾಚೆ ಹೆಲಿಕಾಪ್ಟರ್ ನೀಡಲು ಅಮೆರಿಕ ಒಪ್ಪಿಗೆ ನೀಡಿದೆ. ಇದರಿಂದ ಭಾರತದ ಸೇನಗೆ ಮತ್ತಷ್ಟು ಬಲ ಬರಲಿದೆ ಎಂದೇ ಹೇಳಲಾಗುತ್ತಿದೆ.
ಭಾರತಕ್ಕೆ ಆರು ಹೆಲಿಕಾಪ್ಟರ್ ನೀಡಲು ಅಮೆರಿಕ ಸ್ಟೇಟ್ ಡಿಪಾರ್ಟ್ ಮೆಂಟ್ ಒಪ್ಪಿಗೆ ನೀಡಿದೆ ಎಂದು ರಕ್ಷಣೆ ಭದ್ರತೆ ಸಹಕಾರ ಏಜೆನ್ಸಿ ಈ ಕುರಿತು ಪ್ರಕಟಣೆ ತಿಳಿಸಿದೆ. ಇದು ಸೇನೆಯ ಶಕ್ತಿ ಬಲಪಡಿಸುವ ಜತೆಗೆ ಭಾರತ-ಅಮೆರಿಕ ತಾಂತ್ರಿಕ ಸಹಕಾರ ಒಪ್ಪಂದ ವೃದ್ಧಿಯ ಭಾಗವೂ ಆಗಿದೆ ಎಂದು ತಿಳಿದುಬಂದಿದೆ.
ಭಾರತ ಸರ್ಕಾರ ಸುಮಾರು 930 ದಶಲಕ್ಷ ಡಾಲರ್ ನೀಡಿ ಆರು ಹೆಲಿಕಾಪ್ಟರ್ ಗಳನ್ನು ಖರೀದಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಇವು ಸೇನೆ ಸೇರಲಿವೆ. ಶತ್ರುಗಳ ದಾಳಿಗೆ ಪ್ರತಿದಾಳಿ, ರಕ್ಷಣೆ ಸೇರಿ ಹಲವು ಕಾರಣಗಳಿಗೆ ಹೆಲಿಕ್ಯಾಪ್ಟರ್ ಗಳು ಸಹಾಯಕವಾಗಲಿವೆ ಎಂದು ಮೂಲಗಳು ತಿಳಿಸಿವೆ.
ಆದರೆ ಇತ್ತೀಚೆಗೆ ರಾಹುಲ್ ಗಾಂಧಿ ಸೇರಿ ಹಲವರು ಸಾಮಾಜಿಕ ಜಾಲತಾಣದಲ್ಲಿ ನರೇಂದ್ರ ಮೋದಿ ಅವರನ್ನು ಟೀಕಿಸಲೆಂದೇ, ಸರ್ಕಾರದ ಬಳಿ ಸೈನಿಕರ ಸಮವಸ್ತ್ರ ಖರೀದಿಗೂ ದುಡ್ಡಿಲ್ಲ ಎಂದು ವದಂತಿ ಹಬ್ಬಿಸಿದ್ದರು. ಆದರೆ ಕೇಂದ್ರ ಸರ್ಕಾರ ಮಾತ್ರ ಸೇನೆ ಬಲಪಡಿಸಲು ಹಣ ಖರ್ಚು ಮಾಡುತ್ತಲೇ ಇದೆ, ಸೇನೆ ಮತ್ತಷ್ಟು ಬಲವಾಗುತ್ತಲೇ ಇದೆ.
Leave A Reply