ನಕ್ಸಲಿಸಂಗೆ ಪ್ರಚೋದನೆ ನೀಡುತ್ತಿದ್ದ, ಕೆಂಪು ಉಗ್ರರ ಮಾಸ್ಟರ್ ಮೈಂಡ್ ನನ್ನು ಬಂಧಿಸಿದ ಪೊಲೀಸರು
ರಾಯಪುರ: ಛತ್ತಿಸಗಢ್ ಸೇರಿ ದೇಶಾಧ್ಯಂತ ನಡೆಯುತ್ತಿರುವ ಮಾವೋವಾದಿಗಳ ಅಟ್ಟಹಾಸದ ದುಷ್ಕೃತ್ಯಗಳಿಗೆ ಬೆಂಬಲ ನೀಡುತ್ತ, ನಕ್ಸಲಿಸಂಗೆ ತನ್ನ ಪ್ರಖರ ಬರಹಳಗ ಮೂಲಕ ಮುಗ್ದರನ್ನು ಕಾಡಿಗೆ ಅಟ್ಟುತ್ತಿದ್ದ ಮಾವೋವಾದಿಗ ಮಾಸ್ಟರ್ ಮೈಂಡ್ ಅಭಯದೇವದಾಸ್ ನಾಯಕ್ ನನ್ನು ಛತ್ತೀಸಗಡ್ ಪೊಲೀಸರು ಬಂಧಿಸಿದ್ದಾರೆ.
ಈತ ಮಾವೋವಾದಿ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಮಾವೋವಾದಿಗಳಿಗೆ ಗುಪ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಪಿಐ(ಮಾವೋಯಿಸ್ಟ್) ವಿಭಾಗದಲ್ಲಿ ಮಹತ್ವದ ಕಾರ್ಯ ನಿರ್ವಹಿಸುತ್ತಿದ್ದ. ಮಾವೋವಾದಿಗಳಿಗೆ ಪ್ರಚೋಧನಕಾರಿ ಲೇಖನಗಳನ್ನು ಬರೆಯುವುದು, ಮಾಧ್ಯಮ ಪ್ರಕಟಣೆಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತಿದ್ದ ಎನ್ನಲಾಗಿದೆ.
35 ವರ್ಷದ ಅಭಯ ದೇವದಾಸ್ ನಾಯಕ್ 15 ರಾಷ್ಟ್ರಗಳನ್ನು ಇದುವರೆಗೆ ಭೇಟಿ ಮಾಡಿದ್ದು, ಸಕ್ರಿಯವಾಗಿರುವ ಮಾವೋ ಕ್ರಾಂತಿಕಾರಿಗಳ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಈತನ ವಿರುದ್ಧ ಭಾರತ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಿದ್ದು, 2017 ಮೇ ಅರೆಸ್ಟ್ ವಾರೆಂಟ್ ಸಹ ನೀಡಲಾಗಿತ್ತು. ಜೂನ್ ಒಂದರನ್ನು ದೆಹಲಿಯ ಏರ್ ಪೋರ್ಟ್ ನಲ್ಲಿ ಬಂಧಿಸಲಾಗಿದೆ.
ದೇವದಾಸ ಅರ್ಬನ್ ಮಾವೋವಾದಿಗಳ(ನಗರದಲ್ಲಿರುವ ನಕ್ಸಲರು) ಜೊತೆ ಮಹತ್ವದ ಸಂಪರ್ಕ ಹೊಂದಿದ್ದಾನೆ. ದೇವದಾಸ್ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಹೋರಾಟಕ್ಕೆ ಇಳಿದಿದ್ದು, ಆತನ ರಕ್ಷಣಾ ಚಾತುರ್ಯ ಮಹತ್ವದ್ದಾಗಿದ್ದು, ಕಮ್ಯುನಿಸ್ಟ್ ಮಾವೋವಾದಿಗಳೊಂದಿಗೆ ಆನ್ ಲೈನ್ ಮೂಲಕ ವ್ಯವಹಾರ ಮಾಡುತ್ತಿದ್ದ. ಅಂತರ್ಜಾಲದ ಮೂಲಕವೇ ನಕ್ಸಲರ ಕಾರ್ಯಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದ. ಮಾಧ್ಯಮ ಪ್ರಕಟಣೆಗಳನ್ನು ಈತ ಪ್ರಕಟಿಸುತ್ತಿದ್ದ ಎಂದು ಬಸ್ತಾರ ಪ್ರದೇಶದ ಐಜಿ ವಿವೇಕಾನಂದ ಸಿನ್ಹಾ ತಿಳಿಸಿದ್ದಾರೆ.
ಎರಡು ವರ್ಷದಿಂದ ಈತನ ಬೆನ್ನು ಬಿದ್ದಿರುವ ಪೊಲೀಸರ ಕೈಗೆ ಇದೀಗ ಸಿಕ್ಕು ಬಿದ್ದಿದ್ದಾನೆ. 2017ರಲ್ಲಿ ಲಕ್ಸಂಬರ್ಗ್, ಬೆಲ್ಜಿಯಂ, ಫ್ರಾನ್ಸ್, ನೆದರ್ ಲ್ಯಾಂಡ್, ಇಂಗ್ಲೆಡ್, ಮೆಕ್ಸಿಕೋ, ಗುಟೇಮಾಲಾ, ಕಾಂಬೋಡಿಯಾ, ಸಿಂಗಾಪುರ, ರಷ್ಯಾ, ಇಂಡೋನೇಷಿಯಾ ಸೇರಿ 15 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾನೆ. ಈತನ ವಿರುದ್ಧ ಲುಕ್ ಔಟ್ ಹೊರಡಿಸಿದ್ದು, ಇದೀಗ ಬಂಧಿಸಲಾಗಿದೆ.
Leave A Reply