ಗೌರಿ ಲಂಕೇಶ್ ಅವರಿಗೆ ಕರಗುವ ಮನ ಈ ಸಂಪಾದಕನ ಹತ್ಯೆಗೆ ಏಕೆ ಮಿಡಿಯುವುದಿಲ್ಲ?
ರಾಜ್ಯಮಟ್ಟದ ಹಾಗೂ ದಿನಪತ್ರಿಕೆಗಳ ಮಧ್ಯೆ ಕಳೆದೇ ಹೋಗಿದ್ದ ಲಂಕೇಶ್ ಪತ್ರಿಕೆ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆ ನಡೆಸುತ್ತಿದ್ದ ಗೌರಿ ಲಂಕೇಶ್ ಅವರ ಹತ್ಯೆಯಾದಾಗ ದೇಶದ ಹಲವೆಡೆಯಿಂದ ಜೀವಪರರು ಆಗಮಿಸಿದ್ದರು. ಎಲ್ಲಿದ್ದರೋ ಪ್ರಕಾಶ್, ಸೀದಾ ಬೆಂಗಳೂರಿಗೆ ಬಂದವರೇ, ಏನಾಗ್ತಿದೆರೀ ಕರ್ನಾಟಕದಲ್ಲಿ ಎಂದು ಪ್ರಶ್ನಿಸಿದರು. ರಾಜ್ಯದ ಹಲವೆಡೆಯಿಂದ ಬಂದ ಬುದ್ಧಿಜೀವಿಗಳು ನಾನು ಗೌರಿ ಅಭಿಯಾನ ನಡೆಸಿದರು. ಪರೋಕ್ಷವಾಗಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು. ಅಸಹಿಷ್ಣುತೆಯ ಬೊಬ್ಬೆ ಹಾಕಿದರು.
ಆದರೆ ಜಮ್ಮು-ಕಾಶ್ಮೀರದ ಪ್ರಮುಖ ದಿನಪತ್ರಿಕೆಯಾದ, ವೆಬ್ ಸೈಟ್ ಪತ್ರಿಕೋದ್ಯಮದಲ್ಲೂ ಜಾಗೃತವಾಗಿದ್ದ, ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರೀಯತೆಯ ಪ್ರತಿನಿಧಯಾಗಿರುವ, ದೇಶ ಪ್ರೇಮ ಎತ್ತಿ ಹಿಡಿಯುವ, ಪ್ರತ್ಯೇಕತಾವಾದಿಗಳ ನಿಜಬಣ್ಣ ಬಯಲು ಮಾಡುವ ರೈಸಿಂಗ್ ಕಾಶ್ಮೀರ ಪತ್ರಿಕೆಯ ಸಂಪಾದಕ ಶುಜಾತ್ ಭುಕಾರಿ ಹತ್ಯೆ ಮಾಡಲಾಗಿದೆ.
ಜಮ್ಮು-ಕಾಶ್ಮೀರದಲ್ಲಿ ಒಬ್ಬ ಪತ್ರಿಕಾ ಸಂಪಾದಕನ ಹತ್ಯೆ ಮಾಡಲಾಗಿದೆ ಎಂದರೆ, ಆತ ದೇಶದ ಪರ ಹಾಗೂ ಉಗ್ರವಾದ, ಪ್ರತ್ಯೇಕತವಾದದ ವಿರೋಧವಾಗಿರುವವರೇ ಎಂದು ಅರ್ಥ. ಹಾಗೆಯೇ ರೈಸಿಂಗ್ ಕಾಶ್ಮಿರ ಪತ್ರಿಕೆಯ ಸಂಪಾದಕರಾಗಿ ಶುಜಾತ್ ಭುಕಾರಿ ಮಾಡುತ್ತಿದ್ದರು. ದೇಶದ ಸಮಗ್ರತೆ ಸಾರುವ ಲೇಖನ, ವರದಿಗಳು ಪ್ರಕಟವಾಗುತ್ತಿದ್ದವು. ಇದನ್ನು ಸಹಿಸದ ಕೆಲವರು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಆದರೆ ಇಂತಹ ಒಬ್ಬ ಸಂಪಾದಕನ ಹತ್ಯೆಯಾದರೂ ದೇಶದಲ್ಲಿರುವ ಬುದ್ಧಿಜೀವಿಗಳಲ್ಲಿ ಒಬ್ಬರೇ ಒಬ್ಬರೂ ಸಂತಾಪ ಸೂಚಿಸಿಲ್ಲ. ಯಾವ ಪ್ರಕಾಶ್ ರೈ ಸಹ ಏನಾಗ್ತಿದೆರೀ ಕಾಶ್ಮೀರದಲ್ಲಿ ಎಂದು ಕೂಗು ಹಾಕಿಲ್ಲ. ಯಾವ ಜೀವಪರನೂ ಹತ್ಯೆಕೋರರ ವಿರುದ್ಧ ಒಂದೂ ಮಾತನಾಡಿಲ್ಲ. ಯಾರೂ ನಾನು ಶುಜಾತ್ ಭುಕಾರಿ ಎಂದು ಬೋರ್ಡ್ ಹಿಡಿದು ಪ್ರತಿಭಟನೆ ಮಾಡುತ್ತೇವೆ ಎಂದು ಮುಂದೆ ಬಂದಿಲ್ಲ. ಯಾಕೆ? ಗೌರಿ ಲಂಕೇಶ್ ಹತ್ಯೆಗೆ ಕರಗುವ ಮನ, ಈ ಸಂಪಾದಕನ ಹತ್ಯೆಗೆ ಏಕೆ ಮಿಡಿಯುವುದಿಲ್ಲ? ಉತ್ತರಿಸುವಿರಾ ಬುದ್ಧಿಜೀವಿಗಳೇ?
Leave A Reply