ಯೋಧನ ಕೊಲೆ ಖಂಡಿಸಿ, ರಂಜಾನ್ ಆಚರಿಸದೇ ಪಾಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮುಸ್ಲಿಂ ಸಂಘಟನೆ
ಲಖನೌ: ಗುರುವಾರ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವ್ಯಾಪ್ತಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ದಾಳಿಗೆ ಹುತಾತ್ಮರಾಗಿರುವ ಯೋಧ ಔರಂಗಜೇಬ್ ಕೊಲೆಯನ್ನು ಖಂಡಿಸಿ ಉತ್ತರ ಪ್ರದೇಶದ ಷಿಯಾ ವಕ್ಫ ಬೋರ್ಡ್ ರಂಜಾನ್ ಆಚರಿಸದಿರಲು ನಿರ್ಧರಿಸಿದ್ದು, ಪಾಕಿಸ್ತಾನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಯೋಧ ಔರಂಗಜೇಬ್ ಕೊಲೆ ಖಂಡಿಸಿ, ರಂಜಾನ್ ಆಚರಣೆಯನ್ನು ಕೈ ಬಿಟ್ಟು, ನೆರೆ ರಾಷ್ಟ್ರವಾದ ಪಾಕಿಸ್ತಾದ ಧ್ವಜವನ್ನು ಸುಟ್ಟು ಹೋರಾಟ ಮಾಡಲು ನಿರ್ಧರಿಸಲಾಗಿದೆ. ಯೋಧ ಔರಂಗಜೇಬ್ ಕೊಲೆ ದೇಶಕ್ಕೆ ಮಾರಕವಾದ್ದದ್ದು, ಇಂತಹ ಕೃತ್ಯಗಳನ್ನು ಮುಸ್ಲಿಂ ಸಮುದಾಯ ಖಂಡಿಸುತ್ತಿದ್ದು, ಪಾಕಿಸ್ತಾನದ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಷಿಯಾ ವಕ್ಫ್ ಬೋರ್ಡ್ ಅಧ್ಯಕ್ಷ ಸೈಯದ್ ವಾಸಿಂ ರಿಜ್ವಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸೈಯದ್ ವಾಸಿಂ ರಿಜ್ವಿ ‘ಪ್ರತಿಭಟನೆಯಲ್ಲಿ ಭಾರತೀಯ ಯೋಧರ ಮಾರಣಾಂತಿಕ ಕೊಲೆಗಳನ್ನು ಖಂಡಿಸಲಾಗುವುದು ಮತ್ತು ಭಯೋತ್ಪಾದನೆಗೆ ಪ್ರೇರಣೆ ನೀಡುತ್ತಿರುವ ಪಾಕಿಸ್ತಾನದ ಧ್ವಜವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದ್ದಾರೆ. ಷಿಯಾ ಕೇಂದ್ರೀಯ ಕಚೇರಿ ಬಳಿ ಷಿಯಾ ವಕ್ಫ್ ಬೋರ್ಡ್ನ ನ ಎಲ್ಲ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ದೇಶಕ್ಕಾಗಿ ಪ್ರಾಣ ನೀಡುವ ಯೋಧರಿಗಾಗಿ ಪ್ರತಿಭಟನೆ ನಡೆಸಿದ ನಂತರ ರಂಜಾನ್ ಆಚರಿಸಲಾಗುವುದು ಎಂದು ರಿಜ್ವಿ ತಿಳಿಸಿದ್ದಾರೆ.
Leave A Reply